ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂನಲ್ಲಿ ಸುಮಾರು 70 ದಿನಗಳ ನಂತರ ರೈಲು ಸೇವೆ

|
Google Oneindia Kannada News

ಗುವಾಹಟಿ, ಜುಲೈ 18: ಅಸ್ಸಾಂನಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗಿದ್ದ ಪ್ರವಾಹ ಹಿನ್ನೆಲೆ ಕೆಲವು ಭಾಗಗಳಲ್ಲಿ ರದ್ದಾಗಿದ್ದ ಪ್ರಯಾಣಿಕರ ರೈಲು ಸೇವೆ ಸುಮಾರು 70 ದಿನಗಳ ನಂತರ ಮತ್ತೆ ಆರಂಭವಾಗಲಿದೆ. ಈಶಾನ್ಯ ಫ್ರಾಂಟಿಯರ್ ರೈಲ್ವೆ (NFR) ಜುಲೈ 22 ರಂದು ಅಸ್ಸಾಂನ ಲುಮ್ಡಿಂಗ್-ಬದರ್ಪುರ ವಿಭಾಗದಲ್ಲಿ ಪ್ರಯಾಣಿಕರ ರೈಲು ಸೇವೆಗಳನ್ನು ಪುನರಾರಂಭಿಸಲಿದೆ.

ಮೇ 14 ರಂದು ಭಾರೀ ಮಳೆ ಮತ್ತು ಅನಾಹುತಕಾರಿ ಭೂಕುಸಿತದಿಂದಾಗಿ ಪ್ರಯಾಣಿಕರ ಮತ್ತು ಸರಕು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಅಸ್ಸಾಂನ ಲುಮ್ಡಿಂಗ್-ಬದರ್ಪುರ ವಿಭಾಗವು ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನ ದಕ್ಷಿಣ ಭಾಗವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ ಎಂದು ರೈಲ್ವೇ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಗುವಾಹಟಿ To ಗೋವಾ: ಮಹಾ ಬಂಡಾಯ ಶಾಸಕರ ಮುಂದಿನ ಸ್ಕೆಚ್ ಏನು? ಗುವಾಹಟಿ To ಗೋವಾ: ಮಹಾ ಬಂಡಾಯ ಶಾಸಕರ ಮುಂದಿನ ಸ್ಕೆಚ್ ಏನು?

ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ದಕ್ಷಿಣ ಅಸ್ಸಾಂಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ರೈಲು ಮಾರ್ಗವಾಗಿರುವ ದಿಮಾ ಹಸಾವೊ ಪರ್ವತ ಜಿಲ್ಲೆಯ ಮೂಲಕ ಲುಮ್ಡಿಂಗ್-ಬದರ್ಪುರ ವಿಭಾಗದಲ್ಲಿ ಜುಲೈ 12 ರಂದು ಸರಕು ರೈಲು ಸೇವೆಗಳು ಪ್ರಾರಂಭವಾಗಿವೆ ಎಂದು ಎನ್‌ಎಫ್‌ಆರ್‌ನ ವಕ್ತಾರ ಸಬ್ಯಸಾಚಿ ಡಿ ಮಾಹಿತಿ ನೀಡಿದ್ದಾರೆ.

After 70 days passenger train services resume in noth esst area ,

ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳ ನೀರಿನ ಮಟ್ಟ ಏರಿಕೆಯಿಂದ ಅಸ್ಸಾಂ ಭೀಕರ ಪರಿಸ್ಥಿತಿ ಉಂಟಾಗಿತ್ತು. ಪ್ರವಾಹ ಪೀಡಿತ ಮಣಿಪುರ, ತ್ರಿಪುರಾ, ಮಿಜೋರಾಂ ಮತ್ತು ಬರಾಕ್ ಕಣಿವೆ (ದಕ್ಷಿಣ ಅಸ್ಸಾಂ) ಪ್ರದೇಶಗಳಲ್ಲಿಅಗತ್ಯ ವಸ್ತುಗಳ ಕೊರತೆಯನ್ನು ತಪ್ಪಿಸಲು, ರೈಲು ಸಂಪರ್ಕವನ್ನು ಮರಳಿ ಆರಂಭಿಸುವಲ್ಲಿ ರೈಲ್ವೆ ಅಧಿಕಾರಿಗಳು, ಎಂಜಿನಿಯರ್‌ಗಳು, ಕಾರ್ಮಿಕರು ಹಗಲಿರುಳು ಶ್ರಮಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ಅಸ್ಸಾಂನಲ್ಲಿ ಮೇ 13 ರಿಂದ ಸುರಿದ ಭಾರಿ ಮಳೆಯಿಂದ ಉಂಟಾದ ವಿನಾಶಕಾರಿ ಭೂಕುಸಿತದಿಂದಾಗಿ, ಎನ್‌ಎಫ್‌ಆರ್‌ನ ಲುಮ್ಡಿಂಗ್-ಬದರ್‌ಪುರ ಸಿಂಗಲ್ ಲೈನ್ ರೈಲ್ವೆ ಮಾರ್ಗದಲ್ಲಿ 61 ಕ್ಕೂ ಹೆಚ್ಚು ಸ್ಥಳಗಳಲ್ಲಿ ರೈಲ್ವೆ ನಿಲ್ದಾಣಗಳು ಮತ್ತು ರೈಲ್ವೆ ಹಳಿಗಳಿಗೆ ಭಾರಿ ಹಾನಿಯುಂಟಾಗಿದೆ. ಹಲವೆಡೆ, ಭಾರಿ ಮಳೆಯಿಂದಾಗಿ, ರೈಲ್ವೆ ಹಳಿಗಳ ಮಣ್ಣು ಕೊಚ್ಚಿಹೋಗಿದೆ ಮತ್ತು ಭೂಕುಸಿತದಿಂದಾಗಿ ಹಳಿಗಳು, ಇತರ ರೈಲ್ವೆ ಆಸ್ತಿಗಳು ನೆಲಸಮವಾಗಿವೆ.

After 70 days passenger train services resume in noth esst area

ಈ ವಿಭಾಗದಲ್ಲಿ ರೈಲ್ವೇ ಸೇವೆಗಳನ್ನು ಸ್ಥಗಿತಗೊಳಿಸಿದ್ದ ಹಿನ್ನೆಲೆಯಲ್ಲಿ, ತ್ರಿಪುರಾ ಮತ್ತು ಮಿಜೋರಾಂ ಈ ಹಿಂದೆ ಬಾಂಗ್ಲಾದೇಶದ ಮೂಲಕ ಅಗತ್ಯ ವಸ್ತುಗಳ ಸರಬರಾಜು ಮತ್ತು ಇಂಧನವನ್ನು ತರಲು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದವು.

Recommended Video

Swiggy ಹಾಗು Zomato ಹುಡುಗರು ಒಟ್ಟಾಗಿ ಹೋಗುತ್ತಿರುವ ವೀಡಿಯೋ ವೈರಲ್ *Cricket | OneIndia Kannada

English summary
After nearly 70 days, the Northeast Frontier Railway (NFR) will resume passenger train services in Assam's lumding-badarpur section,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X