ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಕಪ್ಪುಬಾವುಟದ ಸ್ವಾಗತ ನೀಡಿದ ಅಸ್ಸಾಂ ವಿದ್ಯಾರ್ಥಿಗಳು

|
Google Oneindia Kannada News

Recommended Video

ಅಸ್ಸಾಂನಲ್ಲಿ ನರೇಂದ್ರ ಮೋದಿಗೆ ವಿದ್ಯಾರ್ಥಿಗಳ ಕಪ್ಪು ಬಾವುಟದ ಸ್ವಾಗತ | Oneindia Kannada

ಗುವಾಹಟಿ, ಫೆಬ್ರವರಿ 9: ಎರಡು ದಿನಗಳ ಈಶಾನ್ಯ ರಾಜ್ಯಗಳ ಭೇಟಿಗಾಗಿ ಶುಕ್ರವಾರ ಸಂಜೆ ಅಸ್ಸಾಂಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್‌ಯು) ಸದಸ್ಯರು ಕಪ್ಪು ಬಾವುಟ ಪ್ರದರ್ಶಿಸಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಲೋಕಪ್ರಿಯ ಗೋಪಿನಾಥ್ ಬರ್ದೊಲೊಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದಲ್ಲಿ ವಾಸ್ತವ್ಯ ಹೂಡಲು ತೆರಳಿದ ಮೋದಿ ಅವರು ಪ್ರತಿಭಟನೆಯ ಬಿಸಿ ಎದುರಿಸಬೇಕಾಯಿತು.

ಸಂಜೆ 6.30ರ ವೇಳೆ ಗುವಾಹಟಿ ವಿಶ್ವವಿದ್ಯಾಲಯದ ದ್ವಾರಗಳು ಮತ್ತು ಎಂಜಿ ರಸ್ತೆಯಲ್ಲಿರುವ ಎಎಎಸ್‌ಯು ಕೇಂದ್ರ ಕಚೇರಿ ಆವರಣದಲ್ಲಿ ನೆರೆದ ಅಪಾರ ಸಂಖ್ಯೆಯ ಎಎಎಸ್‌ಯು ಸದಸ್ಯರು ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.

ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಗ್ರಹಚಾರ ಬಿಡಿಸಿದ ನರೇಂದ್ರ ಮೋದಿ ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಗ್ರಹಚಾರ ಬಿಡಿಸಿದ ನರೇಂದ್ರ ಮೋದಿ

'ಮೋದಿ ಗೋ ಬ್ಯಾಕ್', 'ಪೌರತ್ವ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸಿ', 'ಅಸ್ಸಾಂ ತಾಯಿಗೆ ಜಯವಾಗಲಿ' ಮುಂತಾದ ಘೋಷಣೆಗಳು ಕೇಳಿಬಂದವು.

ಪ್ರತಿಭಟನಾಕಾರರ ನಡುವೆಯೇ ಬಿಜೆಪಿಯ ಭಾರಿ ಬೆಂಬಲಿಗರು, ಸಚಿವರಾದ ಸಿದ್ಧಾರ್ಥ್ ಭಟ್ಟಾಚಾರ್ಯ ಮತ್ತು ಪಿಯೂಷ್ ಹಜಾರಿಕಾ ಫಲಕಗಳನ್ನು ಹಿಡಿದು ಪ್ರಧಾನಿಯನ್ನು ಸ್ವಾಗತಿಸುವ ಘೋಷಣೆಗಳನ್ನು ಕೂಗಿದರು. ಮೋದಿ ಅವರತ್ತ ಕೈಬೀಸುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹೋರಾಟ ನಿಲ್ಲಿಸುವುದಿಲ್ಲ: ಎಎಎಸ್‌ಯು

ಹೋರಾಟ ನಿಲ್ಲಿಸುವುದಿಲ್ಲ: ಎಎಎಸ್‌ಯು

ಎಎಎಸ್‌ಯು ಕಚೇರಿಗೆ ಪೊಲೀಸರು ಬೀಗ ಹಾಕಿಸಿದ್ದರಿಂದ ಪ್ರತಿಭಟನಾಕಾರರು ಗೇಟಿನ ಒಳಗೆ ಮಾತ್ರ ನಿಂತು ಘೋಷಣೆ ಕೂಗಿದರು.

ಸರ್ಕಾರ ತನ್ನ ಅಧಿಕಾರ ಬಳಸಿಕೊಂಡು ನಮ್ಮನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ, ಸರ್ಕಾರ ಪ್ರಯತ್ನಿಸಿದಷ್ಟೂ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧದ ಹೋರಾಟ ಮುಂದುವರಿಯಲಿದೆ. ಸರ್ಕಾರವು ತಾನು ಬಾಂಗ್ಲಾದೇಶಿ ನುಸುಳುಕೋರರ ಪರ ಮತ್ತು ಅಸ್ಸಾಂನ ಮೂಲನಿವಾಸಿಗಳ ಪರ ಅಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಎಎಎಸ್‌ಯು ಮುಖ್ಯ ಸಲಹೆಗಾರ ಸಮ್ಮುಜಲ್ ಭಟ್ಟಾಚಾರ್ಯ ಹೇಳಿದ್ದಾರೆ.

ಚುನಾವಣೆ 2019 ರಣ ತಂತ್ರ : ಬಿಜೆಪಿಯ ಮಿಷನ್ 123ರಲ್ಲಿ ಬದಲಾವಣೆ ಚುನಾವಣೆ 2019 ರಣ ತಂತ್ರ : ಬಿಜೆಪಿಯ ಮಿಷನ್ 123ರಲ್ಲಿ ಬದಲಾವಣೆ

ಅಸ್ಸಾಂನಲ್ಲಿ ವಿಮಾನ ನಿಲ್ದಾಣ

ಅಸ್ಸಾಂನಲ್ಲಿ ವಿಮಾನ ನಿಲ್ದಾಣ

ಶನಿವಾರದ ಕಾರ್ಯಕ್ರಮಗಳಲ್ಲಿ ಮೋದಿ ಅವರು, ಹೊಲ್ಲೊಂಗಿಯಲ್ಲಿ ಗ್ರೀನ್‌ಫೀಲ್ಡ್ ವಿಮಾನನಿಲ್ದಾಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಈ ವಿಮಾನ ನಿಲ್ದಾಣವು ಪ್ರದೇಶದ ಆರ್ಥಿಕಾಭಿವೃದ್ದಿಯಲ್ಲಿ ಮಹತ್ವದ ಪಾತ್ರವಹಿಸಲಿದೆ.

ವಿವಾದಾತ್ಮಕ ಪೌರತ್ವ ಮಸೂದೆ ಲೋಕಸಭೆಯಲ್ಲಿ ಪಾಸ್, ಏನಿದೆ ಮಸೂದೆಯಲ್ಲಿ? ವಿವಾದಾತ್ಮಕ ಪೌರತ್ವ ಮಸೂದೆ ಲೋಕಸಭೆಯಲ್ಲಿ ಪಾಸ್, ಏನಿದೆ ಮಸೂದೆಯಲ್ಲಿ?

ಸೆಲಾ ಸುರಂಗ ನಿರ್ಮಾಣಕ್ಕೆ ಚಾಲನೆ

ಸೆಲಾ ಸುರಂಗ ನಿರ್ಮಾಣಕ್ಕೆ ಚಾಲನೆ

ಬಳಿಕ ಅರುಣಾಚಲ ಪ್ರದೇಶದಲ್ಲಿ, ತವಾಂಗ್ ಕಣಿವೆಗೆ ಎಲ್ಲ ಋತುಮಾನಗಳಲ್ಲಿಯೂ ವರ್ಷವಿಡೀ ಜನರು ಮತ್ತು ಭದ್ರತಾ ಪಡೆಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತಹ ಸೆಲಾ ಸುರಂಗ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಈ ಸುರಂಗಮಾರ್ಗವು ತವಾಂಗ್‌ಗೆ ಪ್ರಯಾಣಿಸುವ ಮಾರ್ಗವನ್ನು ಒಂದು ಗಂಟೆಯಷ್ಟು ಕಡಿಮೆಗೊಳಿಸಲಿದೆ. ಇದು ಪ್ರವಾಸೋದ್ಯಮ ಮತ್ತು ಪ್ರದೇಶದಲ್ಲಿ ಇತರೆ ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸಲಿದೆ.

ಅರುಣಾಚಲ ಪ್ರದೇಶಕ್ಕೆ ಎಫ್‌ಟಿಐಐ

ಅರುಣಾಚಲ ಪ್ರದೇಶಕ್ಕೆ ಎಫ್‌ಟಿಐಐ

ಅರುಣಾಚಲ ಪ್ರದೇಶದ ಇಟಾನಗರದಲ್ಲಿ ರಾಜ್ಯಕ್ಕೆ ಪ್ರತ್ಯೇಕವಾದ ಹೊಸ ವಾಹಿನಿ ಡಿಡಿ ಅರುಣ್ ಪ್ರಭಾಕ್ಕೆ ಚಾಲನೆ ನೀಡಲಿದ್ದಾರೆ. ಇದು ದೂರದರ್ಶನದ 24ನೇ ವಾಹಿನಿಯಾಗಲಿದೆ.

ಅರುಣಾಚಲಪ್ರದೇಶದಲ್ಲಿ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆಯ (ಎಫ್‌ಟಿಐಐ) ಶಾಶ್ವತ ಕ್ಯಾಂಪಸ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಇದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಮೂರನೇ ಎಫ್‌ಟಿಐಐ ಕ್ಯಾಂಪಸ್ ಆಗಲಿದೆ. ಪುಣೆ ಎಫ್‌ಟಿಐಐ ಮತ್ತು ಕೋಲ್ಕತಾ ಎಸ್‌ಆರ್‌ಎಫ್‌ಟಿಐ ಸಂಸ್ಥೆಗಳು ಸದ್ಯ ಅಸ್ತಿತ್ವದಲ್ಲಿವೆ. ಈಶಾನ್ಯ ಭಾಗದ ಸಿನಿಮಾ ಮತ್ತು ಟೆಲಿವಿಷನ್ ವಿಭಾಗದಲ್ಲಿ ಕಲಿಕೆಯ ಆಸಕ್ತಿಯುಳ್ಳವರಿಗೆ ಇದರಿಂದ ನೆರವಾಗಲಿದೆ.

ತ್ರಿಪುರಾಕ್ಕೆ ರೈಲ್ವೆ ಮಾರ್ಗ

ತ್ರಿಪುರಾಕ್ಕೆ ರೈಲ್ವೆ ಮಾರ್ಗ

ತ್ರಿಪುರಾದ ಅಗರ್ತಲದಲ್ಲಿರುವ ಸ್ವಾಮಿ ವಿವೇಕಾನಂದ ಸ್ಟೇಡಿಯಂನಲ್ಲಿ ಗಾರ್ಜಿ-ಬೆಲೋನಿಯಾ ರೈಲ್ವೆ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ರೈಲು ಮಾರ್ಗವು ದಕ್ಷಿಣ ಮತ್ತು ಆಗ್ನೇಯ ಏಷ್ಯಾಗಳನ್ನು ಬೆಸೆಯುವ ಮೂಲಕ ತ್ರಿಪುರಾ ಅಭಿವೃದ್ಧಿಗೆ ನೆರವಾಗಲಿದೆ. ನರಸಿಂಗಢದಲ್ಲಿ ತ್ರಿಪುರಾ ತಾಂತ್ರಿಕ ಸಂಸ್ಥೆಯ ನೂತನ ಸಂಕೀರ್ಣವನ್ನು ಮೋದಿ ಉದ್ಘಾಟಿಸಲಿದ್ದಾರೆ.

English summary
AASU members waved black flags to Narendra Modi who visited Assam on Friday evening, and shouted slogans against the citizenship (amendment) bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X