ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದ ವಿರುದ್ಧ ಶಿವನ ವೇಷ ಧರಿಸಿ ಪ್ರತಿಭಟಿಸಿದ ವ್ಯಕ್ತಿ ಬಂಧನ

|
Google Oneindia Kannada News

ಗುವಾಹಟಿ, ಜುಲೈ 10: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಶಿವನ ವೇಷ ಧರಿಸಿ ಬಂದಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.

ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸಲು ಬಿರಿಂಚಿ ಬೋರಾ ಶನಿವಾರ ಪಾರ್ವತಿಯ ವೇಷ ಧರಿಸಿದ ಮಹಿಳಾ ಸಹ-ನಟಿ ಜೊತೆ ಬೀದಿ ನಾಟಕವನ್ನು ಪ್ರದರ್ಶಿಸುವಾಗ ಭಗವಾನ್ ಶಿವನ ವೇಷವನ್ನು ಧರಿಸಿದ್ದರು. ಅವರು ಶಿವನ ವೇಷ ಧರಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

'ಕಾಳಿ' ಪೋಸ್ಟರ್ ನೋಡಿ ರೊಚ್ಚಿಗೆದ್ದ ಸಂಸದ ರವಿ ಕಿಶನ್'ಕಾಳಿ' ಪೋಸ್ಟರ್ ನೋಡಿ ರೊಚ್ಚಿಗೆದ್ದ ಸಂಸದ ರವಿ ಕಿಶನ್

ಶಿವನ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಖಂಡಿಸಿವೆ. ಶಿವನ ವೇಷ ಧರಿಸಿದ್ದಕ್ಕೆ ಬಿರಿಂಚಿ ಬೋರಾ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರು, ನಟನು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದರು. ದೂರಿನ ನಂತರ, ಬಿರಿಂಚಿ ಬೋರಾನನ್ನು ಬಂಧಿಸಿ ನಾಗಾನ್ ಸದರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

A Man Was Arrested By The Police For Dressing Up As Lord Shiva To Protest Against Central Government

ಶಿವನ ವೇಷ ಧರಿಸಿದ ಬಿರಿಂಚಿ ಬೋರಾ ಮತ್ತು ಪಾರ್ವತಿ ವೇಷ ಧರಿಸಿದ ಸಹ ನಟಿ ಪರಿಶಿಮಿತಾ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುತ್ತಾರೆ. ಇಬ್ಬರೂ ಬೈಕ್‌ನಲ್ಲಿ ನಾಗಾವ್‌ನ ಕಾಲೇಜು ಚೌಕ್‌ಗೆ ಆಗಮಿಸಿದಾಗ, ಇಂಧನ ಖಾಲಿಯಾದ ಕಾರಣ ದ್ವಿಚಕ್ರ ವಾಹನ ನಿಂತುಕೊಳ್ಳುತ್ತದೆ. ಈ ವೇಳೆ ಶಿವ ಪಾರ್ವತಿ ನಡುವೆ ವಾಗ್ವಾದ ಶುರುವಾಗುತ್ತದೆ.

ಬಂಗಾಳದಲ್ಲಿ ಕಾಳಿ ದೇವಿಗೆ ಮೀನು, ಮಾಂಸ ಅರ್ಪಿಸುವುದು ಏಕೆ?ಬಂಗಾಳದಲ್ಲಿ ಕಾಳಿ ದೇವಿಗೆ ಮೀನು, ಮಾಂಸ ಅರ್ಪಿಸುವುದು ಏಕೆ?

ಅಲ್ಲಿ ಶಿವನ ಪಾತ್ರಧಾರಿ ದೇಶದಲ್ಲಿ ಹೆಚ್ಚಾಗುತ್ತಿರುವ ಇಂಧನ ದರ ಮತ್ತಿತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸುತ್ತಾನೆ. ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದರು. ಈ ವಿಡಿಯೋ ಇದೀಗ ಬಿಜೆಪಿ ಬೆಂಬಲಿಗರು, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಬೆಲೆ ಏರಿಕೆಯಿಂದ ಮುಕ್ತಿ ಪಡೆಯಲು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗಬೇಕು ಎಂದು ಶಿವನ ವೇಷಧಾರಿಯಾಗಿದ್ದ ಬಿರಿಂಚಿ ಬೋರಾ ಮನವಿ ಮಾಡಿದರು.

ಇದೇ ವೇಳೆ ಆರೋಪಿಗೆ ಜಾಮೀನು ಸಿಕ್ಕಿದೆ. "ಆರೋಪಿಗೆ ಜಾಮೀನು ನೀಡಲಾಗಿದೆ. ಅವರಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ" ಎಂದು ಎಸ್‌ಪಿ ನಾಗಾಂವ್, ಲೀನಾ ಡೋಲಿ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

Recommended Video

ಈ ರೀತಿ ಕ್ಯಾಚ್ ಡ್ರಾಪ್ ಮಾಡಿದ್ರೆ , ಮುಂದೆ ಹೇಗೆ!! | OneIndia Kannada

English summary
A man has been arrested by the police for dressing up as Lord Shiva during a protest against the Narendra Modi-led central government's price hike. Birinchi Bora on Saturday dressed up as Lord Shiva while performing a street play with a female co-star dressed as Parvati to protest against the price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X