ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

177 ಬಂದೂಕುಗಳೊಂದಿಗೆ ಶರಣಾದರು 644 ಉಗ್ರರು

|
Google Oneindia Kannada News

ಗುವಾಹತಿ, ಜನವರಿ 23: ಎಂಟು ನಿಷೇಧಿತ ಉಗ್ರಗಾಮಿ ಸಂಘಟನೆಯ 644 ಮಂದಿ ಉಗ್ರಗಾಮಿಗಳು ಇಂದು ಒಂದೇ ದಿನ ಶರಣಾಗಿದ್ದಾರೆ.

ಒಟ್ಟು 177 ಬಂದೂಕುಗಳು ಸೇರಿ ಇತರ ಶಸ್ತ್ರಾಸ್ತ್ರಗಳ ಸಮೇತ ಈ ಉಗ್ರಗಾಮಿಗಳು ಶರಣಾಗಿದ್ದು, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಉಗ್ರಗಾಮಿಗಳು ಶರಣಾಗಿರುವುದು ದೇಶದಲ್ಲಿ ಇದೇ ಮೊದಲು.

ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸರ್ವಾನಂದ ಸೊನೊವಾಲ್ ಅವರ ಸಮ್ಮುಖದಲ್ಲಿ ಈ ಉಗ್ರರೆಲ್ಲಾ ಶರಣಾಗಿದ್ದಾರೆ.

assam

ಶರಣಾದವರೆಲ್ಲರೂ ನಿಷೇಧಿತ ಉಲ್ಬಾ (ಐ), ಎನ್‌ಡಿಎಫ್‌ಬಿ, ಆರ್‍ಎನ್‍ಎಲ್‍ಎಫ್, ಕೆಎಲ್‍ಒ, ಸಿಪಿಐ(ಮಾವೋವಾದಿ), ಎನ್‍ಎಸ್‍ಎಲ್‍ಎ, ಎಡಿಎಫ್ ಮತ್ತು ಎನ್‍ಎಲ್‍ಎಫ್‌ಬಿ ಸಂಘಟನೆಯವರಾಗಿದ್ದಾರೆ.

assam

ಅಸ್ಸಾಂ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, 'ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸಲು ಈ ಘಟನೆ ಬಹು ಮಹತ್ವದ್ದು ಎಂದಿದ್ದಾರೆ. ಈ ಎಲ್ಲ ಬಂಡುಕೋರರು ಮತ್ತು ಉಗ್ರಗಾಮಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಇಚ್ಛಿಸಿದ್ದಾರೆ' ಎಂದಿದ್ದಾರೆ.

English summary
In Assan 644 terrorists surrender with 177 guns and other weapons. They all surrender in CM Sarvananda Sonawal's function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X