• search
 • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಸ್ಸಾಂನಲ್ಲಿ ಪುಟ್ಟ ಮಕ್ಕಳಿಗಾಗಿ ವಿಶೇಷ ಕೊವಿಡ್-19 ಕೇರ್

|

ಗುವಾಹಟಿ, ಸಪ್ಟೆಂಬರ್.03: ಕೊರೊನಾವೈರಸ್ ಸೋಂಕಿನ ಆತಂಕ ಪುಟ್ಟ ಮಕ್ಕಳಲ್ಲೂ ಹೆಚ್ಚುತ್ತಿದೆ. ಅಸ್ಸಾಂನಲ್ಲೂ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮಕ್ಕಳಿಗಾಗಿ ವಿಶೇಷ ಕೊವಿಡ್-19 ಕೇಂದ್ರವನ್ನು ತೆರೆಯಲಾಗಿದೆ.

   The Rock ಕುಟುಂಬಕ್ಕೂ ಕೂಡ ಕೊರೊನ ತಗುಲಿತ್ತು | Oneindia Kannada

   ಗುವಾಹಟಿಯ ಮಹೇಂದ್ರ ಮೋಹನ್ ಚೌಧರಿ ಆಸ್ಪತ್ರೆಯಲ್ಲಿ 55 ಹಾಸಿಗೆಗಳ ಕೊರೊನಾವೈರಸ್ ಸೋಂಕಿತರ ಚಿಕಿತ್ಸಾ ಘಟಕವನ್ನು ತೆರೆಯಲಾಗಿದೆ ಎಂದು ಆಸ್ಪತ್ರೆಯ ಅಸಿಸ್ಟೆಂಟ್ ಸೂಪರಿಟೆಂಡೆಂಟ್ ಅನುಪಾಲ್ ಶರ್ಮಾ ಮಾಹಿತಿ ನೀಡಿದ್ದಾರೆ.

   ಭಾರತದಲ್ಲಿ 83,883 ಕೊರೊನಾ ಸೋಂಕಿತರು ಪತ್ತೆ, 1,043 ಮಂದಿ ಸಾವು

   ಕೊರೊನಾವೈರಸ್ ಸೋಂಕಿನ ಆತಂಕದ ನಡುವೆ 12 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಕೊವಿಡ್-19 ಸೋಂಕಿತ ಮಕ್ಕಳಿಗೆ ಈ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊವಿಡ್-19 ಕೇರ್ ನಲ್ಲಿರುವ ಹಾಸಿಗೆಗಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

   ಅಸ್ಸಾಂನಲ್ಲಿ ಕೊರೊನಾವೈರಸ್ ಕಂಡೀಷನ್:

   ಅಸ್ಸಾಂನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಈಗಾಗಲೇ ಲಕ್ಷದ ಗಡಿ ದಾಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 115280ಕ್ಕೆ ಏರಿಕೆಯಾಗಿದ್ದು, ಇದುವರೆಗೂ 88727 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 26277 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿದ್ದು, ಮಹಾಮಾರಿಗೆ ರಾಜ್ಯದಲ್ಲಿ 323 ಜನರು ಪ್ರಾಣ ಬಿಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

   English summary
   55-Bedded Special #COVID19 Care Unit For Childrens At Guwahati.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X