ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಹಲ್ಲೆಯಿಂದ ವ್ಯಕ್ತಿ ಸಾವು, ಇಬ್ಬರು ಕಾನ್ಸ್‌ಟೇಬಲ್ ಬಂಧನ

|
Google Oneindia Kannada News

ಗುವಾಹಟಿ, ಜೂನ್ 5: ವ್ಯಕ್ತಿಯೊಬ್ಬನ ಹಲ್ಲೆ ಮಾಡಿರುವ ಆರೋಪದಲ್ಲಿ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಬಂಧಿಸಿರುವ ಘಟನೆ ಅಸ್ಸಾಂ ಗುವಾಹಟಿ ನಗರದಲ್ಲಿ ನಡೆದಿದೆ.

51 ವರ್ಷದ ಗ್ರಾಮ ರಕ್ಷಣಾ ಪಕ್ಷದ (ವಿಡಿಪಿ) ಕಾರ್ಯದರ್ಶಿ ಫನಿಧರ್ ಬೋರಾ ಅವರ ಮೇಲೆ ಜಜೋರಿ ಪೊಲೀಸ್ ಠಾಣೆಯ ಅಟೌರ್ ರಹಮಾನ್ ಮತ್ತು ಪರೇಶ್ ಶರ್ಮಾ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಫನಿಧರ್ ಬೋರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಚೀನಾದ 40 ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಚೂರಿ ಹಾಕಿದ ಸೆಕ್ಯೂರಿಟಿ ಗಾರ್ಡ್‌ಚೀನಾದ 40 ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಚೂರಿ ಹಾಕಿದ ಸೆಕ್ಯೂರಿಟಿ ಗಾರ್ಡ್‌

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವ್ಯಕ್ತಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸ್ ಠಾಣೆ ಬಳಿ ಜಮಾಯಿಸಿ, ಪೊಲೀಸರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.

51 Year Old Man Died After Two Police was Attacked

ಈ ಕುರಿತು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸ್ ಇಲಾಖೆ ''ಫನಿಧರ್ ಬೋರಾ ಜೊತೆ ಕಾನ್ಸ್‌ಟೇಬಲ್‌ಗಳು ವೈಯಕ್ತಿಕವಾಗಿ ದ್ವೇಷ ಹೊಂದಿದ್ದರು. ಈ ಹಿನ್ನೆಲೆ ಕಳೆದ ರಾತ್ರಿ ಗಲಾಟೆಯಾಗಿದೆ. ತನಿಖೆ ನಡೆಸುತ್ತಿದ್ದೇವೆ'' ಎಂದು ನಾಗಾನ್‌ನ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗೌರವ್ ಅಭಿಜಿತ್ ದಿಲೀಪ್ ಹೇಳಿದ್ದಾರೆ.

ಬೋರಾ ಕುಟುಂಬಸ್ಥರ ಮಾಹಿತಿ ಆಧರಿಸಿ ಕಾನ್ಸ್‌ಟೇಬಲ್‌ಗಳ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಬೋರಾ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಜೋರಿ ಪೊಲೀಸ್ ಠಾಣೆಯ ನಿರೀಕ್ಷಣ ಅಧಿಕಾರಿಯನ್ನು ವರ್ಗಾಯಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಈಗಾಗಲೇ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇನ್ನು ಬೋರಾ ಸಾವಿಗೆ ಪೊಲೀಸ್ ಇಲಾಖೆಯಿಂದ 1 ಲಕ್ಷ ಪರಿಹಾರ ಧನ ನೀಡಲಾಗಿದೆ.

English summary
After Two Police was Attacked, 51 Year Old Man, village defence party (VDP) secretary Phanidhar Borah Died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X