• search
 • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಪಹೃತರಾಗಿದ್ದ ಒಎನ್‌ಜಿಸಿಯ 6 ಉದ್ಯೋಗಿಗಳಲ್ಲಿ ಇಬ್ಬರ ರಕ್ಷಣೆ

|
Google Oneindia Kannada News

ಗುವಾಹಟಿ, ಏಪ್ರಿಲ್ 24: ಅಪಹೃತರಾಗಿದ್ದ ಒಎನ್‌ಜಿಸಿ 6 ಮಂದಿ ಉದ್ಯೋಗಿಗಳ ಪೈಕಿ ಇಬ್ಬರನ್ನು ಭದ್ರತಾ ಪಡೆ ನಾಗಾಲ್ಯಾಂಡ್‌ನಲ್ಲಿ ರಕ್ಷಣೆ ಮಾಡಿದೆ.

ಕಿರಿಯ ತಂತ್ರಜ್ಞರಾದ ಮೋಹಿನಿ ಮೋಹನ್ ಗೊಗೋಯ್, ರಿತುಲ್ ಸೈಕಿಯಾ ಹಾಗೂ ಜೆಇಎ ಅಲಕೇಶ್ ಸೈಕಿಯಾ ಅಸ್ಸಾಂ ನ ಲಾಕ್ವಾ ಫೀಲ್ಡ್ ನಲ್ಲಿ ರಿಗ್ ಸೈಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು. ಇದಕ್ಕೂ ಮುನ್ನ ಇದೇ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು, ಉಲ್ಫಾ ಬೆಂಬಲಿಗರೂ ಸೇರಿ 14 ಮಂದಿಯನ್ನು ಬಂಧಿಸಿದ್ದರು.

ಅಸ್ಸಾಂ: ಒಎನ್‌ಜಿಸಿ ತೈಲ ಸಂಸ್ಕರಣಾ ಘಟಕದ 6 ಉದ್ಯೋಗಿಗಳ ಅಪಹರಣ ಅಸ್ಸಾಂ: ಒಎನ್‌ಜಿಸಿ ತೈಲ ಸಂಸ್ಕರಣಾ ಘಟಕದ 6 ಉದ್ಯೋಗಿಗಳ ಅಪಹರಣ

ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶುಕ್ರವಾರ (ಏ.23) ರಂದು ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಹಾಗೂ ಅಸ್ಸಾಂ ರೈಫಲ್ಸ್ ಟ್ರೂಪ್ಸ್, ಅಪಹರಣಕ್ಕೆ ಒಳಗಾಗಿದ್ದ ಇಬ್ಬರನ್ನು ರಕ್ಷಿಸಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ಅಲಕೇಶ್ ಸೈಕಿಯಾ ಹಾಗೂ ಮೋಹಿನಿ ಮೋಹನ್ ಗೊಗೋಯ್ ರಕ್ಷಿಸಲ್ಪಟ್ಟ ಉದ್ಯೋಗಿಗಳಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಒಂದು AK 47 ನ್ನು ವಶಕ್ಕೆ ಪಡೆಯಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ಅಸ್ಸಾಂ ಶಿವಸಾಗರ ಜಿಲ್ಲೆಯ ಲಖ್ವಾದಿಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ತೈಲ ಸಂಸ್ಕರಣಾ ಘಟಕದ ಇಬ್ಬರು ಸಹಾಯಕ ಜೂನಿಯರ್ ಇಂಜಿನಿಯರ್‌ಗಳು ಮತ್ತು ಓರ್ವ ಜೂನಿಯರ್ ಟೆಕ್ನಿಷಿಯನ್​ನ್ನು ಅಪಹರಿಸಿದ್ದಾರೆ.

ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸ್ ದೂರು ದಾಖಲಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

   IPL ಗೆ ಗುಡ್ ಬೈ ಹೇಳಿದ T Natarajan | Oneindia Kannada

   ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಅಸ್ಸಾಂ ರಾಜ್ಯ ಪೊಲೀಸರ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಬಗ್ಗೆ ಸ್ಥಳೀಯ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ.

   English summary
   Two employees of state-owned energy company ONGC were rescued after an encounter near the India-Myanmar border in Nagaland today, while a search for a third employee is underway, Assam police chief Bhaskar Jyoti Mahanta said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X