ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ತೈಲ ಬಾವಿ ಅಗ್ನಿ ಅವಘಡ: ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಶವ ಪತ್ತೆ

|
Google Oneindia Kannada News

ಗುವಾಹಟಿ, ಜೂನ್ 10: ಅಸ್ಸಾಂನ ತೈಲ ಬಾವಿ ಅಗ್ನಿ ಅವಘಡದ ಸಂದರ್ಭದಲ್ಲಿ ಬಂಕಿ ನಂದಿಸಲು ಬಂದು ಕಾಣೆಯಾಗಿದ್ದ ಇಬ್ಬರು ಅಗ್ನಿ ಶಾಮಕ ಸಿಬ್ಬಂದಿ ಶವವಾಗಿ ಪತ್ತೆಯಾಗಿದ್ದಾರೆ.

Recommended Video

June is going to be a menacing month in terms of Corona | Oneindia Kannada

ಅಸ್ಸಾಂನ ತಿನ್ಸೂಕಿಯಾ ಜಿಲ್ಲೆಯ ಬಾಘ್‍ಜನ್ ಪ್ರದೇಶದಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್‍ನ ಅನಿಲ ಬಾವಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಅಸ್ಸಾಂನ ತೈಲ ಬಾವಿಯಲ್ಲಿ ಅಗ್ನಿ ಅವಘಡ: ಭಾರಿ ಪ್ರಮಾಣದಲ್ಲಿ ಬೆಂಕಿಅಸ್ಸಾಂನ ತೈಲ ಬಾವಿಯಲ್ಲಿ ಅಗ್ನಿ ಅವಘಡ: ಭಾರಿ ಪ್ರಮಾಣದಲ್ಲಿ ಬೆಂಕಿ

ಬೆಂಕಿ ಹತೋಟಿಗೆ ತರಲು ಇನ್ನೂ ನಾಲ್ಕು ವಾರಗಳ ಸಮಯ ಬೇಕಾಗುತ್ತದೆ ಎಂದು ಒಐಎಲ್ ತಿಳಿಸಿದೆ. ಮೇ 27ರಂದು ಸಂಭವಿಸಿದ ಸ್ಫೋಟದ ಬಳಿಕ ಅನಿಲ ಸೋರಿಯಾಗುತ್ತಿದೆ.

2 Firefighters Found Dead Near Assam Oil Well

ಹೀಗಾಗಿ ಆ ಪ್ರದೇಶದ ಸುತ್ತಲಿನ 1.5 ಕಿ.ಮೀ.ವ್ಯಾಪ್ತಿಯಲ್ಲಿನ ಸುಮಾರು 6 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಅಲ್ಲದೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಯಿಲ್ ಇಂಡಿಯಾ ಲಿಮಿಟೆಡ್ 30 ಸಾವಿರ ರೂ. ಪರಿಹಾರ ಘೋಷಿಸಿದೆ.

ಎರಡು ಶವಗಳು ತೈಲ ಬಾವಿ ಹತ್ತಿರದಲ್ಲೇ ಇದ್ದ ನೀರಿರುವ ಪ್ರದೇಶದಲ್ಲಿ ಪತ್ತೆಯಾಗಿದ್ದು, ಬೆಂಕಿಯಿಂದ ನೀರಿಗೆ ಹಾರಿದ್ದಾರೆ, ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ಹೊರಬರಲಿದೆ. ಇಬ್ಬರ ಮೈಮೇಲೂ ಯಾವುದೇ ರೀತಿಯ ಸುಟ್ಟ ಗಾಯಗಳಾಗಿಲ್ಲ.

ಈಗಲೂ ತೈಲಾಗಾರದಿಂದ ಅನಿಲ ಸೋರಿಕೆಯಾಗುತ್ತಿದೆ. ಎನ್‌ಡಿಆರ್‌ಎಫ್ ಸಿಬ್ಬಂದಿ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.ಅನಿಲ ಸೋರಿಕೆಯಿಂದಾಗಿ ಸುತ್ತಲಿನ ಗದ್ದೆಗಳು ಹಾಗೂ ಜೀವವೈವಿಧ್ಯಕ್ಕೆ ತೀವ್ರ ಹಾನಿಯುಂಟಾಗಿದೆ. ಪಕ್ಕದ ಹಳ್ಳಿಗಳ ಗದ್ದೆಗಳು, ಹಳ್ಳ, ಕೊಳಗಳು ಸಂಪೂರ್ಣ ಕಲುಶಿತಗೊಂಡಿವೆ. ಹೀಗಾಗಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ತಜ್ಞರ ತಂಡದ ಜೊತೆಗೆ ಸಭೆ ನಡೆಸಲಾಗುತ್ತಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲು ಇದು ಸೂಕ್ತ ಸಮಯವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ. ಬಾವಿಯನ್ನು ಸುರಕ್ಷಿತವಾಗಿ ಮುಚ್ಚಬಹುದಾಗಿದೆ.

ಆದರೆ ಈ ಸಂದರ್ಭದಲ್ಲಿ ಹೆಚ್ಚಿನಪ್ರಮಾಣದಲ್ಲಿ ನೀರಿನ ಅಗತ್ಯವಿದೆ. ಹೆಚ್ಚಿನ ಡಿಸ್ಚಾರ್ಜ್ ಪಂಪ್‍ಗಳ ಅವಶ್ಯವಿದೆ. ಅಲ್ಲದೆ ಡೆಬ್ರಿಸ್‍ನ್ನು ಸ್ವಚ್ಛಗೊಳಿಸಬೇಕಿದೆ ಎಂದು ಕಂಪನಿ ತಿಳಿಸಿದೆ.

English summary
Two firefighters of Oil India Ltd who had been missing were found dead at a wetland near the site of a massive oil well fire in Assam, officials said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X