ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತನಾಡುತ್ತಾರೆಂದು ಮಕ್ಕಳ ಬಾಯಿಗೆ ಸೆಲ್ಲೋ ಟೇಪ್ ಸುತ್ತಿದ ಶಿಕ್ಷಕಿ!

|
Google Oneindia Kannada News

ಗುರ್ಗಾಂವ್, ಡಿಸೆಂಬರ್ 08: ಮಕ್ಕಳು ಶಾಲೆಯಲ್ಲಿ ವಿಪರೀತ ಮಾತನಾಡುತ್ತಾರೆಂಬ ಕಾರಣಕ್ಕೆ ಇಬ್ಬರು ಮಕ್ಕಳ ಬಾಯಿಗೆ ಶಿಕ್ಷಕಿಯೊಬ್ಬರು ಸೆಲ್ಲೋಟೇಪ್ ಅಂಟಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹರ್ಯಾಣದ ಗುರ್ಗಾಂವ್ ನ ಖಾಸಗೀ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

ಮಕ್ಕಳಿಗೆ ಅರೇಬಿಕ್ ಕಲಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕಮಕ್ಕಳಿಗೆ ಅರೇಬಿಕ್ ಕಲಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕ

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಶಿಕ್ಷಕರ ವರ್ತನೆಯನ್ನು ಸಾಕಷ್ಟು ಜನ ಖಂಡಿಸಿದ್ದಾರೆ. ಸುಮಾರು ನಾಲಕರಿಂದ ಐದು ವರ್ಷ ವಯಸ್ಸಿನ ಇಬ್ಬರು ಮಕ್ಕಳ ಬಾಯಿಗೆ ಶಿಕ್ಷಕಿ ಸೆಲ್ಲೋ ಟೇಪ್ ಅಂಟಿಸಿದ್ದರು.

ಉತ್ತರ ಪ್ರದೇಶದ ಈ ಶಾಲೇಲಿ 'ಭಾರತ್ ಮಾತಾ ಕೀ ಜೈ' ಅಂದ್ರೆ ಅಪರಾಧ!ಉತ್ತರ ಪ್ರದೇಶದ ಈ ಶಾಲೇಲಿ 'ಭಾರತ್ ಮಾತಾ ಕೀ ಜೈ' ಅಂದ್ರೆ ಅಪರಾಧ!

ಈ ಕುರಿತು ಪ್ರಶ್ನಿಸಿದ್ದಕ್ಕೆ, 'ಮಕ್ಕಳು ಅವಾಚ್ಯ ಶಬ್ದಗಳನ್ನು ಮಾತನಾಡುತ್ತಿದ್ದರು. ಅವರಿಗೆ ಬುದ್ಧಿ ಕಲಿಸಲು ಹೀಗೆ ಮಾಡಿದೆ ' ಎಂದು ಶಿಕ್ಷಕಿ ಸಮಜಾಯಿಷಿ ನೀಡಿದ್ದರು.

Teacher who puts sellotabe across students mouth suspended

ಆದರೆ ತೀರಾ ಚಿಕ್ಕ ವಯಸ್ಸಿನ ಮಕ್ಕಳಾಗಿರುವುದರಿಂದ ತಿಳಿಯದೇ ಶಾಲೆಯಲ್ಲಿ ಮಾತನಾಡಿದ್ದಾರೆ, ಅವರು ಅವಾಚ್ಯ ಶಬ್ದಗಳನ್ನೇನೂ ಮಾತನಾಡಿರಲಿಲ್ಲ. ಆದರೆ ಅವರ ಬಾಯಿ ಮುಚ್ಚಿಸಿ, ಉಳಿದ ಮಕ್ಕಳಲ್ಲಿ ಭಯ ಮೂಡಿಸುವ ಸಲುವಾಗಿ ಶಿಕ್ಷಕಿ ಇಂಥ ಕೆಲಸ ಮಾಡಿದ್ದಾರೆ ಎಂದು ಶಾಲೆಯ ಕೆಲ ಸಿಬ್ಬಂದಿ ತಿಳಿಸಿದ್ದಾರೆ.

ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು! ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು!

ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿ, ಶಿಕ್ಷಕಿಯನ್ನು ತಕ್ಷಣವೇ ಅಮಾನತು ಮಾಡಿದೆ.

English summary
A woman teacher of a private school here was suspended for allegedly putting sellotape across the mouths of two pre-nursery children to keep them quiet during a class, school authorities said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X