ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುಗ್ರಾಮ ಕಟ್ಟಡ ಕುಸಿತ: 2 ಶವ ಪತ್ತೆ, ನಾಲ್ಕು ಕುಟುಂಬ ಸಿಲುಕಿರುವ ಶಂಕೆ

|
Google Oneindia Kannada News

ಗುರುಗ್ರಾಮ, ಫೆಬ್ರವರಿ 10: ಬಹುಮಹಡಿ ವಸತಿ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದು, ಇಬ್ಬರು ಮೃತಪಟ್ಟಿದ್ದು, ಹಲವಾರು ಜನರು ಸಿಕ್ಕಿಬಿದ್ದ ಘಟನೆ ಗುರುಗ್ರಾಮ(ಗುರ್‌ಗಾಂವ್‌)ದ ಸೆಕ್ಟರ್ 109 ರಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಥವಾ ಎನ್‌ಡಿಆರ್‌ಎಫ್ ತಂಡವು ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸ್ಥಳವನ್ನು ತಲುಪಿದ್ದು ಸಿಕ್ಕಿಬಿದ್ದಿರುವ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ರಕ್ಷಣಾ ಕಾರ್ಯಚರಣೆಯ ದೃಶ್ಯಗಳು ವೈರಲ್ ಆಗಿದ್ದು, ಕಿತ್ತಳೆ ಬಣ್ಣದ ಜಾಕೆಟ್‌ಗಳನ್ನು ಧರಿಸಿದ ರಕ್ಷಕರು ಕಟ್ಟಡದ ಮೇಲಿನ ಮಹಡಿಗಳಿಗೆ ತಲುಪಲು ಏಣಿಯನ್ನು ಸ್ಥಾಪಿಸುವುದನ್ನು ದೃಶ್ಯಗಳು ತೋರಿಸುತ್ತವೆ.

"ಆರನೇ ಮಹಡಿಯಿಂದ ಮೊದಲ ಮಹಡಿಯವರೆಗಿನ ಡ್ರಾಯಿಂಗ್ ರೂಮ್ ಕುಸಿದಿದೆ. ಇದರಿಂದಾಗಿ ಇನ್ನೂ ಕೆಲ ಮಹಡಿ ಕುಸಿದಿದೆ" ಎಂದು ಕಟ್ಟಡದ ನಿವಾಸಿ ಕೌಶಲ್ ಕುಮಾರ್ ಎಎನ್‌ಐಗೆ ತಿಳಿಸಿದರು, ಈ ಘಟನೆಯು ಎತ್ತರದ "ಟವರ್ ಡಿ" ನಲ್ಲಿ ಸಂಭವಿಸಿದೆ ಎಂದು ಹೇಳಿದರು.ಆರು ಫ್ಲಾಟ್‌ಗಳನ್ನು ಹೊಂದಿರುವ ಪೀಡಿತ ಮಹಡಿಯಲ್ಲಿ ನಾಲ್ಕು ಕುಟುಂಬಗಳು ವಾಸಿಸುತ್ತಿದ್ದವು ಎಂದು ಸ್ಥಳೀಯ ಕುಮಾರ್ ಹೇಳಿದರು.

Multi-Storey Collapse in Gurgaon: Four Families Stranded
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಗಮನಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

"ಗುರುಗ್ರಾಮ್‌ನ ಪ್ಯಾರಾಡಿಸೊ ವಸತಿ ಸಂಕೀರ್ಣದಲ್ಲಿ ಅಪಾರ್ಟ್‌ಮೆಂಟ್ ಮೇಲ್ಛಾವಣಿ ಕುಸಿತ ದುರದೃಷ್ಟಕರ. ಆಡಳಿತ ಅಧಿಕಾರಿಗಳು, ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. ನಾನು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಮತ್ತು ಪ್ರತಿಯೊಬ್ಬರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಮನೋಹರ್ ಲಾಲ್ ಖಟ್ಟರ್ ಟ್ವೀಟ್ ಮಾಡಿದ್ದಾರೆ. ಮೇಲ್ಛಾವಣಿ ಕುಸಿತಕ್ಕೆ ತಕ್ಷಣಕ್ಕೆ ಕಾರಣ ತಿಳಿದುಬಂದಿಲ್ಲ.

English summary
Several people were feared trapped after the roof of a residential high-rise in Gurgaon's Sector 109 collapsed on Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X