ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಉತ್ತರ ದೆಹಲಿಯಲ್ಲಿ ಒಂದೇ ದಿನ ಮೂರು ಕಡೆ ಅಗ್ನಿ ಅವಘಡ

|
Google Oneindia Kannada News

ನವದೆಹಲಿ, ಏಪ್ರಿಲ್ 27: ಉತ್ತರ ದೆಹಲಿಯ ಭಾಲ್ಸ್ವಾ ಸ್ಥಳದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮಂಗಳವಾರದಂದು ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಸಂಜೆ 5.47ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು ಎಂದು ಹೇಳಿದ್ದಾರೆ.

ರಾತ್ರಿಯಿಡೀ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪ್ರಸ್ತುತ 13 ಅಗ್ನಿಶಾಮಕ ವಾಹನಗಳ ಸಿಬ್ಬಂದಿಯು ಸ್ಥಳದಲ್ಲಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೀತಿಸಿದ ಬಾಲಕಿಯನ್ನು ಮನೆಗೆ ಕರೆದು ಬೆಂಕಿ ಹಚ್ಚಿ ಕೊಂದ ಪಾಗಲ್ ಪ್ರೇಮಿಪ್ರೀತಿಸಿದ ಬಾಲಕಿಯನ್ನು ಮನೆಗೆ ಕರೆದು ಬೆಂಕಿ ಹಚ್ಚಿ ಕೊಂದ ಪಾಗಲ್ ಪ್ರೇಮಿ

ಭಾಲ್ಸ್ವಾ ಡಂಪಿಂಗ್ ಯಾರ್ಡ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವುದರ ಬಗ್ಗೆ ಮುಂದಿನ 24 ಗಂಟೆಗಳಲ್ಲಿ ವರದಿ ಸಲ್ಲಿಸುವಂತೆ ಪರಿಸರ ಸಚಿವ ಗೋಪಾಲ್ ರೈ ಮಂಗಳವಾರ ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿಗೆ (ಡಿಪಿಸಿಸಿ) ಸೂಚನೆ ನೀಡಿದ್ದಾರೆ. ಈ ವರ್ಷ, ಪೂರ್ವ ದೆಹಲಿಯ ಗಾಜಿಪುರ ಸ್ಥಳದಲ್ಲಿ ಮೂರು ಬೆಂಕಿಯ ಕಾಣಿಸಿಕೊಂಡಿರುವ ಘಟನೆ ನಡೆದಿತ್ತು. ಕಳೆದ ಮಾರ್ಚ್ 28 ರಂದು ಅಗ್ನಿ ಅವಘಡ ನಡೆದಿದ್ದು, 50 ಗಂಟೆಗಳ ನಿರಂತರ ಕಾರ್ಯಾಚರಣೆ ನಂತರದಲ್ಲಿ ಬೆಂಕಿ ನಂದಿಸಲಾಗಿತ್ತು.

ಉಸಿರಾಡುವುದಕ್ಕೂ ಆಗುತ್ತಿಲ್ಲ ಎಂದ ಸ್ಥಳೀಯರು:
ಭಾಲ್ಸ್ವಾ ಡಂಪಿಂಗ್ ಯಾರ್ಡ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದರ ಹೊಗೆ ಆಕಾಶದೆತ್ತರಕ್ಕೆ ಹರಡಿಕೊಳ್ಳುತ್ತಿದೆ. ನಮಗೆ ಸರಿಯಾಗಿ ಏನೂ ಕಾಣುತ್ತಿಲ್ಲ, ಉಸಿರಾಡುವುದಕ್ಕೂ ಆಗುತ್ತಿಲ್ಲ. ಇಲ್ಲಿನ ಡಂಪ್ ಯಾರ್ಡ್‌ನ ಪರಿಸ್ಥಿತಿಯ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ದೆಹಲಿಯಲ್ಲಿ ಒಂದೇ ದಿನ ಮೂರು ಕಡೆ ಅಗ್ನಿ ಅವಘಡ:

ರಾಜಧಾನಿ ದೆಹಲಿಯಲ್ಲಿ ಮಂಗಳವಾರವೊಂದೇ ದಿನ ಮೂರು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆಗಳು ವರದಿಯಾಗಿವೆ. ನಗರದ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿರುವ ಸಾರಿಗೆ ಭವನದಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಕೊಠಡಿಯೊಂದರಲ್ಲಿ ಹವಾನಿಯಂತ್ರಣದಿಂದ ಬೆಂಕಿ ಕಾಣಿಸಿಕೊಂಡಿತ್ತು. ಮತ್ತೊಂದು ಘಟನೆಯಲ್ಲಿ, ಲಜಪತ್ ನಗರದ ಅಮರ್ ಕಾಲೋನಿಯ ಮುಖ್ಯ ಮಾರುಕಟ್ಟೆಯಲ್ಲಿ ಅಂಗಡಿಯೊಂದಕ್ಕೆ ಬೆಂಕಿ ಕಾಣಿಸಿಕೊಂಡು ಇತರ ಅಂಗಡಿಗಳಿಗೆ ವ್ಯಾಪಿಸಿತ್ತು.

Massive fire broke out at the Bhalswa landfill site in north Delhi

ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ಅವರು, "ನೆಲ ಮಹಡಿಯಲ್ಲಿರುವ ಅಂಗಡಿಯಿಂದ ಬೆಂಕಿ ಕಾಣಿಸಿಕೊಂಡು ಇತರ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗೆ ವ್ಯಾಪಿಸಿದೆ. ಕಟ್ಟಡದ ಮೊದಲ ಮಹಡಿಯಲ್ಲಿರುವ ನಿವಾಸ ಮತ್ತು ಕಚೇರಿಗೂ ಬೆಂಕಿ ವ್ಯಾಪಿಸಿದೆ" ಎಂದು ಹೇಳಿದ್ದಾರೆ. ದೆಹಲಿಯ ವಿಕಾಸ್ ಮಾರ್ಗ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಡಿಟಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು.

ಗುರುಗ್ರಾಮ್‌ನ ಮನೇಸರ್‌ನಲ್ಲಿನ ಕಸದ ರಾಶಿಯಲ್ಲಿ ಬೆಂಕಿ:

ಗುರುಗ್ರಾಮ್‌ನ ಮನೇಸರ್‌ನಲ್ಲಿನ ಕಸದ ರಾಶಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸೋಮವಾರ ತಡರಾತ್ರಿ ಹೊತ್ತಿಕೊಂಡ ಬೆಂಕಿ, ನೋಡನೋಡುತ್ತಿದ್ದಂತ ಧಗಧಗಿಸಿ ಉರಿಯಲು ಆರಂಭಿಸಿದೆ. ಮನೇಸರ್‌ನ ಸೆಕ್ಟರ್-6 ಬಳಿ ಬೆಂಕಿ ಹೊತ್ತಿಕೊಂಡಿರುವ ಈ ಘಟನೆ ನಡೆದಿದೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ 35ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದವು.

English summary
Massive fire broke out at the Bhalswa landfill site in north Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X