ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುಗ್ರಾಮದಲ್ಲಿ ಕಟ್ಟಡ ಕುಸಿತ: ಏಳು ಜನರ ದುರ್ಮರಣ

|
Google Oneindia Kannada News

ಗುರುಗ್ರಾಮ, ಜನವರಿ 25: ಗುರುಗ್ರಾಮ (ಗುರ್ಗಾಂವ್)ದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದ ಪರಿಣಾಮ ಅದರ ಅವಶೇಷದಡಿ ಸಿಲುಕಿ ಏಳು ಜನ ದುರ್ಮರಣಕ್ಕೀಡಾದ ಘಟನೆ ಗುರುವಾರ ಬೆಳಗ್ಗೆ ನಡೆದಿತ್ತು.

ಘಟನೆಯಲ್ಲಿ ಕಟ್ಟಡದ ಅಡಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಶುಕ್ರವಾರ ಬೆಳಗ್ಗಿನವರೆಗೂ ನಡೆದಿದ್ದು, ಸದ್ಯಕ್ಕೆ ರಕ್ಷಣಾ ಕಾರ್ಯವನ್ನು ನಿಲ್ಲಿಸಲಾಗಿದೆ. ಒಟ್ಟು ಏಳು ಜನ ಮೃತರಾಗಿದ್ದಾರೆ. ಮಿಕ್ಕವರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

ಗುರ್ ಗಾಂವ್ ನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 6 ಮಂದಿ ಸಾವುಗುರ್ ಗಾಂವ್ ನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 6 ಮಂದಿ ಸಾವು

ಗುರುಗ್ರಾಮದ ಉಲ್ಲಾವಾಸ್ ಎಂಬಲ್ಲಿ ಘಟನೆ ನಡೆದೆ. ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿತದಿಂದಾಗಿ ಹಲವರು ಕಮಟ್ಟಡದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ದೆಹಲಿಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿತ: ಐವರ ದಾರುಣ ಸಾವು ದೆಹಲಿಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿತ: ಐವರ ದಾರುಣ ಸಾವು

ಮೃತರ ಕುಟುಂಬಕ್ಕೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತಲಾ 3 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.

Many dead in Gurugram building collapse

ಇತ್ತೀಚೆಗೆ ಉತ್ತರ ದೆಹಲಿಯ ಅಶೋಕ್ ವಿಹಾರ್ ನಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಐವರು ಮೃತರಾದ ದಾರುಣ ಘಟನೆ ಬುಧವಾರ ನಡೆದಿತ್ತು. ಘಟನೆಯಲ್ಲಿ ಓರ್ವ ಮಹಿಳೆ ಮತ್ತು ನಾಲ್ವರು ಮಕ್ಕಳು ಮೃತರಾಗಿದ್ದರು.

ಮುಂಬೈಯಲ್ಲಿ ಅಗ್ನಿ ಆಕಸ್ಮಿಕ: ಐವರ ದುರ್ಮರಣಮುಂಬೈಯಲ್ಲಿ ಅಗ್ನಿ ಆಕಸ್ಮಿಕ: ಐವರ ದುರ್ಮರಣ

ಕಳೆದ ಜುಲೈ ತಿಂಗಳಿನಲ್ಲಿ ನೋಯ್ಡಾದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದ ಪರಿಣಾಮ ಹತ್ತಕ್ಕೂ ಹೆಚ್ಚು ಜನ ಮೃತರಾಗಿದ್ದರು.

English summary
Seven bodies were pulled out from the debris of the under-construction four-storey building in Gurugram which collapsed on Thursday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X