ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರನ್ನು ಹತ್ತಿಕ್ಕುವಷ್ಟು ನಾಯಕತ್ವ ಸಮರ್ಥವಾಗಿದೆ: ಅಜಿತ್ ದೋವಲ್

|
Google Oneindia Kannada News

ಗುರುಗ್ರಾಮ, ಮಾರ್ಚ್ 19: ಕೇಂದ್ರದ ನಾಯಕತ್ವವು ಯಾವುದೇ ಭಯೋತ್ಪಾದನೆ ಚಟುವಟಿಕೆ ಮತ್ತು ಅದಕ್ಕೆ ಕುಮ್ಮಕ್ಕು ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಂಪೂರ್ಣ ಸಮರ್ಥವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಹೇಳಿದ್ದಾರೆ.

ಅಜಿತ್ ದೋವಲ್ ಹಳೇ ಸಂದರ್ಶನ; ಕಾಂಗ್ರೆಸ್ ನಿಂದ ಹೊಸದಾಗಿ ವಾಗ್ದಾಳಿ ಅಜಿತ್ ದೋವಲ್ ಹಳೇ ಸಂದರ್ಶನ; ಕಾಂಗ್ರೆಸ್ ನಿಂದ ಹೊಸದಾಗಿ ವಾಗ್ದಾಳಿ

ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 80ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾಶ್ಮೀರಿಗಳನ್ನೇಕೆ ಆವರಿಸಿಕೊಂಡಿದೆ ಸಮೂಹ ಸನ್ನಿ? ಪರಿಹಾರವೇನು? ಕಾಶ್ಮೀರಿಗಳನ್ನೇಕೆ ಆವರಿಸಿಕೊಂಡಿದೆ ಸಮೂಹ ಸನ್ನಿ? ಪರಿಹಾರವೇನು?

ಫೆಬ್ರವರಿ 14ರಂದು ಪುಲ್ವಾಮಾ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಬಲಿಯಾದ ಘಟನೆಯನ್ನು ಭಾರತ ಮರೆತಿಲ್ಲ, ಮರೆಯುವುದಿಲ್ಲ ಎಂದು ಹೇಳಿದರು.

leadership of the country is fully capable to deal terrorism nsa Ajit Doval

ಪುಲ್ವಾಮಾದಂತಹ ಭಯೋತ್ಪಾದನಾ ಕೃತ್ಯಗಳಿಗೆ ಮತ್ತು ಅದಕ್ಕೆ ಬೆಂಬಲ ನೀಡುವವರಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ನೀಡುವಷ್ಟು ದೇಶದ ನಾಯಕತ್ವ ಸಮರ್ಥವಾಗಿದೆ ಎಂದು ಭರವಸೆ ನೀಡುತ್ತೇನೆ ಎಂದು ದೋವಲ್ ತಿಳಿಸಿದರು.

'ನಾವೇನು ಮಾಡಬೇಕು? ನಮ್ಮ ದಾರಿ, ಗುರಿ, ನಮ್ಮ ಪ್ರತಿಕ್ರಿಯೆ ಮತ್ತು ಪ್ರತಿಕ್ರಿಯಿಸುವ ಸಮಯ ಏನಿರಬೇಕು? ದೇಶದ ನಾಯಕತ್ವವು ಅದನ್ನು ಮಾಡಲು ಸಮರ್ಥವೂ ಹೌದು ಮತ್ತು ಧೈರ್ಯಶಾಲಿಯೂ ಹೌದು. ದೇಶವು ಇಂತಹ ಎಲ್ಲಾ ಸವಾಲುಗಳನ್ನು ಎದುರಿಸಲಿದೆ ಮತ್ತು ಇದನ್ನು ಮಾಡಲು ನಮಗೆ ಧೈರ್ಯವೂ ಇದೆ' ಎಂದರು.

2 ಉಗ್ರ ಸಂಘಟನೆಯಿಂದ ಭಾರತದ ಮೇಲೆ ಜಂಟಿ ದಾಳಿ ಸಂಚು: ಗುಪ್ತಚರ ಇಲಾಖೆ2 ಉಗ್ರ ಸಂಘಟನೆಯಿಂದ ಭಾರತದ ಮೇಲೆ ಜಂಟಿ ದಾಳಿ ಸಂಚು: ಗುಪ್ತಚರ ಇಲಾಖೆ

ಪುಲ್ವಾಮಾ ದಾಳಿಯಲ್ಲಿ ಬಲಿಯಾದ 40 ಹುತಾತ್ಮರಿಗೆ ಗೌರವವನ್ನು ಸಲ್ಲಿಸಿದರು. ಇದೊಂದು ದುಃಖಕರ ಘಟನೆ. ಈ ಯೋಧರಿಗೆ ಮತ್ತು ಅವರ ಕುಟುಂಬಗಳಿಗೆ ದೇಶ ಯಾವಾಗಲೂ ಋಣಿಯಾಗಿರುತ್ತದೆ ಎಂದು ನೋವು ವ್ಯಕ್ತಪಡಿಸಿದರು.

English summary
NSA Ajit Doval said the leadership of the country is fully capable to deal with any act of terror and against those who abet it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X