ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ ಪ್ರಕರಣ: ಸೋನಿಯಾ ಗಾಂಧಿ ಅಳಿಯನಿಗೆ ಮತ್ತೆ ಸಂಕಷ್ಟ

By Mahesh
|
Google Oneindia Kannada News

ಗುರುಗ್ರಾಮ, ಸೆಪ್ಟೆಂಬರ್ 02: ಕಾಂಗ್ರೆಸ್ಸಿನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾರ್ಬಟ್ ವಾದ್ರಾ ಅವರಿಗೆ ಮತ್ತೆ ಭೂ ಕಟಂಕ ಶುರುವಾಗಿದೆ. 2008ರ ಜಮೀನು ಹಂಚಿಕೆ ಅಕ್ರಮ ಪ್ರಕರಣದಲ್ಲಿ ರಾಬರ್ಟ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

2008ರ ಗುರುಗ್ರಾಮ(ಗುರ್ ಗಾಂವ್) ಜಮೀನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಗುರುಗ್ರಾಮದಲ್ಲಿರುವ ಡಿಎಲ್‌ಎಫ್ ಕಂಪೆನಿ ಹಾಗೂ ಓಂಕಾರೇಶ್ವರ ಪ್ರಾಪರ್ಟಿಸ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Gurugram Land Scam: FIR against Robert Vadra, former Haryana CM Hooda

ವಾದ್ರಾ ಮತ್ತು ಹೂಡಾ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಧಿ 120ಬಿ (ಅಪರಾಧಿ ಸಂಚು), 420 (ವಂಚನೆ), 467 (ವೌಲ್ಯಯುತ ಭದ್ರತೆಯ ನಕಲು), 468 (ವಂಚನೆಯ ಉದ್ದೇಶದಿಂದ ದಾಖಲೆ ತಿದ್ದುವುದು) ಮತ್ತು 471 ( ನಕಲಿ ದಾಖಲೆಯನ್ನು ಅಸಲಿ ಎಂದು ಬಿಂಬಿಸುವುದು) ಅಡಿ ದೂರು ದಾಖಲಿಸಲಾಗಿತ್ತು.

ವಾದ್ರಾ ಒಡೆತನದ ಸ್ಕೈಲೈಟ್ ಹಾಸ್ಪಿಟಾಲಿಟಿಯು ಗುರುಗ್ರಾಮದಲ್ಲಿ 7.5 ಕೋಟಿ ರೂ. ಬೆಲೆಗೆ ಜಮೀನನ್ನು ಖರೀದಿಸಿತ್ತು. ಆದರೆ, ಸದರಿ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ 55 ಕೋಟಿ ರೂ.ಗೆ ಮಾರಾಟ ಮಾಡಿದ ಆರೋಪ ರಾಬರ್ಟ್ ಮೇಲಿದೆ.

English summary
An FIR was registered against Robert Vadra, the son-in law of Congress leader Sonia Gandhi, and former Haryana chief minister BS Hooda in connection with Gurugram land fraud case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X