ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಚಾರ ನಿಯಮ ಉಲ್ಲಂಘನೆ; ಆಟೋ ಡ್ರೈವರ್ ಗೆ 32,500 ರುಪಾಯಿ ದಂಡ

By ಅನಿಲ್ ಆಚಾರ್
|
Google Oneindia Kannada News

ಗುರುಗ್ರಾಮ್, ಸೆಪ್ಟೆಂಬರ್ 4: ಗುರುಗ್ರಾಮದ ಸಂಚಾರ ಪೊಲೀಸರು ಮಂಗಳವಾರ ರು. 32,500 ಹಾಗೂ ರು. 23,000 ದಂಡದ ಚಲನ್ ನೀಡಿದ್ದಾರೆ. ಅಟೋರಿಕ್ಷಾ ಚಾಲಕ ಹಾಗೂ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಇಷ್ಟು ಮೊತ್ತದ ದಂಡ ವಿಧಿಸಲಾಗಿದೆ. ಸಂಚಾರ ನಿಯಮಗಳ ಪೈಕಿ ಹಲವನ್ನು ಉಲ್ಲಂಘಿಸಿದ ಇವರಿಬ್ಬರಿಗೆ ದೊಡ್ಡ ಮೊತ್ತದ ದಂಡ ಹಾಕಲಾಗಿದೆ.

ಪೂರ್ವ ದೆಹಲಿಯ್ ಗೀತಾ ಕಾಲೋನಿ ನಿವಾಸಿ ದಿನೇಶ್ ಮದನ್ ಜಿಲ್ಲಾ ಕೋರ್ಟ್ ನ ಹೊರಗೆ ಹೆಲ್ಮೆಟ್ ಇಲ್ಲದೆ ಸ್ಕೂಟಿ ಚಾಲನೆ ಮಾಡುತ್ತಿದ್ದರು. ಅಗತ್ಯ ದಾಖಲೆಗಳಾದ ನೋಂದಣಿ ಪ್ರಮಾಣಪತ್ರ, ವಿಮೆ, ಡ್ರೈವಿಂಗ್ ಲೈಸೆನ್ಸ್, ವಾಯಮಾಲಿನ್ಯ ತಪಾಸಣೆ ಪ್ರಮಾಣ ಪತ್ರ ಇವು ಯಾವುವೂ ಅವರ ಬಳಿ ಇರಲಿಲ್ಲ.

ದೆಹಲಿಯ ಈ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು ಹಾಕಿದ್ದು ರು. 23,000 ದಂಡದೆಹಲಿಯ ಈ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು ಹಾಕಿದ್ದು ರು. 23,000 ದಂಡ

Recommended Video

ದೆಹಲಿ ಗುರ್ ಗಾಂವ್ ನಲ್ಲಿ ಬಾರಿ ಮಳೆ | ಕರ್ನಾಟಕ ಕರಾವಳಿಯಲ್ಲಿ ಎಚ್ಚರಿಕೆ | Oneindia Kannada

ಆದ್ದರಿಂದ ಪೊಲೀಸರು ನೋಂದಣಿ ಪ್ರಮಾಣ ಪತ್ರ ಇಲ್ಲದ ಕಾರಣಕ್ಕೆ ರು. 5,000, ಡ್ರೈವರ್ ಲೈಸೆನ್ಸ್ ಇಲ್ಲದ್ದಕ್ಕೆ ರು. 5,000, ವಾಯುಮಾಲಿನ್ಯ ತಪಾಸಣೆ ಸರ್ಟಿಫಿಕೇಟ್ ಇಲ್ಲ ಎಂಬ ಕಾರಣಕ್ಕೆ 10,000, ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದ ಕಾರಣಕ್ಕೆ 2000, ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಿದ್ದಕ್ಕೆ 1000 ದಂಡ ಹಾಕಿದ್ದಾರೆ.

Gurugram Auto Driver Fined 32500 For Traffic Rule Violation

ಮದನ್ ಖಾಸಗಿ ಜಾಹೀರಾತು ಸಂಸ್ಥೆಯೊಂದರಲ್ಲಿ ದಿನೇಶ್ ಮದನ್ ಕೆಲಸ ಮಾಡುತ್ತಾರೆ. ಜಾಹೀರಾತು ಪಡೆಯುವ ಸಲುವಾಗಿ ಸಿವಿಲ್ ಕೋರ್ಟ್ ಗೆ ಬಂದಿದ್ದರು.

ಇನ್ನೊಂದು ಪ್ರಕರಣದಲ್ಲಿ ಸಿಗ್ನಲ್ ಜಂಪ್ ಮಾಡಿದ್ದು ವಿಪರೀತ ದುಬಾರಿಯಾಗಿ ಪರಿಣಮಿಸಿದೆ. ಆಟೋ ಚಾಲಕರ ಹೆಸರು ಮೊಹ್ಮದ್ ಮುಸ್ತಾಕಿನ್, ಮೂಲತಃ ಪಶ್ಚಿಮ ಬಂಗಾಲದವರಾಗಿದ್ದು, ಡಿಎಲ್ ಎಫ್ ಫೇಸ್ 3ನಲ್ಲಿ ವಾಸವಿದ್ದಾರೆ. ಸಿಕಂದರ್ ಪುರ್ ಪ್ರದೇಶದಲ್ಲಿ ಸಿಕ್ಕಿಬಿದ್ದ ಅವರಿಗೆ 32,500 ದಂಡ ಹಾಕಲಾಗಿದೆ.

ಮುಸ್ತಾಕಿನ್ ಈ ಮುಂಚೆ ದಿನಗೂಲಿ ನೌಕರರಾಗಿದ್ದರು. ಎರಡು ತಿಂಗಳಿಂದ ಆಟೋ ಓಡಿಸಲು ಆರಂಭಿಸಿದ್ದಾರೆ. ದಂಡದ ಮೊತ್ತ ಪಾವತಿಸಲು ತನ್ನ ಬಳಿ ಹಣ ಇಲ್ಲ ಎಂದು ಮುಸ್ತಾಕಿನ್ ಹೇಳಿಕೊಂಡಿದ್ದಾರೆ.

English summary
Mohammad Mustakin, auto driver in Gurugram fined 32,500 for traffic rules violation. In another case 23,000 fined.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X