ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರ್ಗಾಂವ್ ಮಳೆ ಅಟ್ಟಹಾಸ: Work From Home ಮಾಡಲು ಹೊರಬಿದ್ದ ಸಂದೇಶ!

|
Google Oneindia Kannada News

ಗುರ್ಗಾಂವ್, ಸೆಪ್ಟೆಂಬರ್ 23: ಗುರ್ಗಾಂವ್ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಖಾಸಗಿ ಕಂಪನಿ ಉದ್ಯೋಗಿಗಳು ಸಾಧ್ಯವಾದಷ್ಟು ಮನೆಗೆಳಿಂದ ಕೆಲಸ ಮಾಡುವಂತೆ(ವರ್ಕ್ ಫ್ರಾಮ್ ಹೋಮ್) ಆಡಳಿತಾಧಿಕಾರಿಗಳು ಸಲಹೆ ನೀಡಿದ್ದಾರೆ.
ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸಂಚಾರ ದಟ್ಟಣೆ ಸೃಷ್ಟಿಯಾಗಿದೆ. ಗುರುವಾರ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಶುಕ್ರವಾರ ಮತ್ತೆ ಉದ್ಯೋಗಿಗಳು ರಸ್ತೆಗೆ ಇಳಿಯುವುದರಿಂದ ಮತ್ತಷ್ಟು ಸಮಸ್ಯೆ ಹಾಗೂ ಸಂಚಾರ ದಟ್ಟಣೆ ಸೃಷ್ಟಿ ಆಗುವ ಮುನ್ಸೂಚನೆ ಇದೆ.

ಉತ್ತರಾಖಂಡದಲ್ಲಿ ನಿಲ್ಲದ ಮಳೆ: ನೋಡ ನೋಡುತ್ತಿದ್ದಂತೆ ವಾಹನಗಳ ಮೇಲೆ ಕುಸಿದ ಗುಡ್ಡಉತ್ತರಾಖಂಡದಲ್ಲಿ ನಿಲ್ಲದ ಮಳೆ: ನೋಡ ನೋಡುತ್ತಿದ್ದಂತೆ ವಾಹನಗಳ ಮೇಲೆ ಕುಸಿದ ಗುಡ್ಡ

ಶುಕ್ರವಾರ ಖಾಸಗಿ ಕಂಪನಿ ಹಾಗೂ ಕಾರ್ಪೋರೇಟ್ ಕಂಪನಿಯ ಉದ್ಯೋಗಿಗಳು ಕಂಪನಿಗೆ ತೆರಳುವುದಕ್ಕಿಂತ ಮನೆಯಿಂದಲೇ ಕೆಲಸ ಮಾಡುವುದು ಉತ್ತಮ ಎಂದು ಗುರ್ಗಾಂವ್ ಆಡಳಿತ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಇದರ ಮಧ್ಯೆ ಶುಕ್ರವಾರ ಸಹ ಗುರ್ಗಾಂವ್ ನಗರದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು, 'ಹಳದಿ ಅಲರ್ಟ್' ಅನ್ನು ಘೋಷಿಸಲಾಗಿದೆ.

Gurgaon Heavy Rain, Flooding: administration has advised private and corporate offices to work from home

ಗುರುಗ್ರಾಮ್ ದುರಂತ ನಿರ್ವಹಣಾ ಪ್ರಾಧಿಕಾರದ ಸಲಹೆ:
"ಭಾರೀ ಮಳೆಯ ಮುನ್ಸೂಚನೆಯ ದೃಷ್ಟಿಯಿಂದ, ಜಲಾವೃತ ಮತ್ತು ಸಂಚಾರ ದಟ್ಟಣೆಯ ಸಾಧ್ಯತೆಗಳಿವೆ. ಆದ್ದರಿಂದ, ಜಿಲ್ಲೆಯ ಎಲ್ಲಾ ಕಾರ್ಪೊರೇಟ್ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ, ಇದರಿಂದ ಸಂಚಾರ ದಟ್ಟಣೆಯನ್ನು ತಪ್ಪಿಸಬಹುದು" ಎಂದು ಗುರುಗ್ರಾಮ್ ದುರಂತ ನಿರ್ವಹಣಾ ಪ್ರಾಧಿಕಾರ ತನ್ನ ಸಲಹೆಯಲ್ಲಿ ತಿಳಿಸಿದೆ.

ಶಾಲಾ-ಕಾಲೇಜುಗಳಿಗೆ ರಜೆ:
ಗುರ್ಗಾಂವ್ ಮಳೆಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆೆದುಕೊಳ್ಳಲಾಗಿದೆ. ನಗರದಲ್ಲಿ ಶಾಲಾ-ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸುವಂತೆ ಸೂಚನೆ ನೀಡಲಾಗಿದೆ.
ಇದರ ಮಧ್ಯೆ ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಮಾನ್ಸೂನ್ ಹಿಂತೆಗೆದುಕೊಳ್ಳುವ ಮೊದಲು ಮಳೆಯು ವಾತಾವರಣವನ್ನು ಶುದ್ಧಗೊಳಿಸುತ್ತದೆ. ಇದು ಗಾಳಿಯನ್ನು ಶುದ್ಧವಾಗಿಡುತ್ತದೆ ಮತ್ತು ತಾಪಮಾನವನ್ನು ನಿಯಂತ್ರಿಸುತ್ತದೆ. ನಗರದಲ್ಲಿ ಇಂದು ಕನಿಷ್ಠ ತಾಪಮಾನ 23.8 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಏಳು ಹಂತಗಳಿಗಿಂತ ಕಡಿಮೆಯಾಗಿದೆ.

English summary
Gurgaon Heavy Rain, Flooding: administration has advised private and corporate offices to work from home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X