ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ಕ್ರೂರ ಹಲ್ಲೆ

|
Google Oneindia Kannada News

ಗುರುಗಾಂವ್, ಅಕ್ಟೋಬರ್ 5: ರಿಯಲ್ ಎಸ್ಟೇಟ್ ಡೀಲರ್‌ನ ಕಚೇರಿಯಲ್ಲಿ ನಾಲ್ವರು ಪುರುಷರು 25 ವರ್ಷದ ಮಹಿಳೆಯೊಬ್ಬರನ್ನು ಸಾಮೂಹಿಕ ಅತ್ಯಾಚಾರ ಮಾಡಿ ಹಲ್ಲೆ ನಡೆಸಿದ ಘಟನೆ ಡಿಎಲ್ಎಫ್ ಎರಡನೇ ಹಂತದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ಮಹಿಳೆಯ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಹಾರ ಪೂರೈಕೆ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನಾಲ್ವರು ಶಂಕಿತರಲ್ಲಿ ಮೂವರನ್ನು ಭಾನುವಾರ ಬೆಳಿಗ್ಗೆಯೇ ಬಂಧಿಸಲಾಗಿದೆ.

ಹತ್ರಾಸ್ ಸಂತ್ರಸ್ತೆ ಕುಟುಂಬಕ್ಕೆ Y ಹಂತದ ಭದ್ರತೆ ನೀಡಲು ಒತ್ತಾಯಹತ್ರಾಸ್ ಸಂತ್ರಸ್ತೆ ಕುಟುಂಬಕ್ಕೆ Y ಹಂತದ ಭದ್ರತೆ ನೀಡಲು ಒತ್ತಾಯ

ದೆಹಲಿಯಲ್ಲಿ ವಾಸಿಸುತ್ತಿರುವ ಮಹಿಳೆಯು ಭಾನುವಾರ ರಾತ್ರಿ 1.30ರ ವೇಳೆಗೆ ಸಿಕಂದರಪುರ ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದರು. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಮಾತನಾಡಿಸಿದ. ಮನೆ ತಲುಪಲು ಸಹಾಯ ಮಾಡುವುದಾಗಿ ಹೇಳಿದ ಆತನ ಮಾತನ್ನು ನಂಬಿಕೊಂಡು ಮೋಟಾರ್ ಸೈಕಲ್‌ನಲ್ಲಿ ಕುಳಿತರು. ಆತ ತಾನು ಸಹಾಯಕ ಮತ್ತು ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಡಿಎಲ್ಎಫ್ ಫೇಸ್ 2ದಲ್ಲಿನ ಕಚೇರಿಗೆ ಕರೆದುಕೊಂಡು ಬಂದ.

Gurugram: Four Men Gangraped And Brutally Assaulted 25 Year Old Woman

ಅಲ್ಲಿಎ ತಲುಪಿದಾಗ ಆ ವ್ಯಕ್ತಿಯ ಮೂವರು ಸ್ನೇಹಿತರು ಇದ್ದರು. ಇದರಿಂದ ಗಾಬರಿಗೊಂಡ ಆಕೆ ಅಲ್ಲಿಂದ ಹೊರಡಲು ಪ್ರಯತ್ನಿಸಿದರು. ಆದರೆ ಆಕೆಯ ಮೇಲೆ ಬಲಾತ್ಕಾರ ನಡೆಸಿದರು. ನಾಲ್ವರು ವ್ಯಕ್ತಿಗಳು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದರು. ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಹಲ್ಲೆ ನಡೆಸಿದರು. ಆಕೆಯ ಮುಖಕ್ಕೆ ಗುದ್ದಿ ಹಲವು ಬಾರಿ ಒದ್ದರು. ಆಕೆಯ ತಲೆಯನ್ನು ಗೋಡೆ ಹಾಗೂ ನೆಲಕ್ಕೆ ಚಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ರಾಸ್ ಅತ್ಯಾಚಾರ: ಸುಮ್ಮನಿರುವ ಸರ್ಕಾರದ ವಿರುದ್ಧ ಮಾಯಾವತಿ ಸಿಡುಕುಹತ್ರಾಸ್ ಅತ್ಯಾಚಾರ: ಸುಮ್ಮನಿರುವ ಸರ್ಕಾರದ ವಿರುದ್ಧ ಮಾಯಾವತಿ ಸಿಡುಕು

ಬಳಿಕ ಆಕೆಯನ್ನು ನಡುರಸ್ತೆಯಲ್ಲಿ ಬಿಟ್ಟು ಕಚೇರಿಗೆ ಬೀಗ ಹಾಕಿ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿದ್ದಾರೆ. ತಲೆಯಿಂದ ರಕ್ತ ಸೋರುತ್ತಿದ್ದ ಮಹಿಳೆಯನ್ನು ಗಮನಿಸಿದ ಖಾಸಗಿ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

English summary
Four men gang raped and burtally assaulted a 25 year old woman in DLF Phase 2 area of Gurugram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X