• search
  • Live TV
ಗುರ್ ಗಾಂವ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊವಿಡ್ 19 ಸೋಂಕು: ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಆಸ್ಪತ್ರೆಗೆ

|
Google Oneindia Kannada News

ಗುರುಗ್ರಾಮ, ಮೇ 28: ಭಾರತೀಯ ಜನತಾ ಪಕ್ಷ(ಬಿಜೆಪಿ) ದ ಹಿರಿಯ ವಕ್ತಾರ ಸಂಬೀತ್ ಪಾತ್ರ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಸಂಬೀತ್ ಅವರನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಮೆದಾಂತ ಆಸ್ಪತ್ರೆಯಲ್ಲಿ ಸಂಬೀತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

ಕೊರೊನಾ ಮಹಾಮಾರಿಗೆ ಹೆದರಿ ಮಹಿಳಾ ಐಎಎಸ್ ಅಧಿಕಾರಿ ರಾಜೀನಾಮೆ!ಕೊರೊನಾ ಮಹಾಮಾರಿಗೆ ಹೆದರಿ ಮಹಿಳಾ ಐಎಎಸ್ ಅಧಿಕಾರಿ ರಾಜೀನಾಮೆ!

ಬಿಜೆಪಿ ವಕ್ತಾರರಾಗಿ ಸಂಬೀತ್ ಪಾತ್ರ ಟಿವಿ ಚಾನೆಲ್ ಗಳಲ್ಲೂ ಜನಪ್ರಿಯರಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲೂ ಸಕ್ರಿಯರಾಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಒಡಿಶಾದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

ವೃತ್ತಿಯಿಂದ ಸರ್ಜನ್ ಕೂಡಾ ಆಗಿರುವ ಡಾ. ಸಂಬೀತ್ ಪಾತ್ರಾ ಹಿಂದೂರಾವ್ ಆಸ್ಪತ್ರೆಯಲ್ಲಿ ಮೆಡಿಕಲ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು. ಒನ್ಎನ್ ಜಿಸಿಯ ಬೋರ್ಡ್ ನಲ್ಲಿ ನಿರ್ದೇಶಕರಾಗಿದ್ದಾರೆ.

English summary
BJP national spokesperson Sambit Patra has been admitted to a private hospital in Gurgaon after he showed symptoms of COVID-19, sources said. He is admitted to the Medanta hospital in Gurgaon, hospital sources said on Thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X