ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಮಿ ಜಾಕ್ ಮಾಗೆ ಗುರುಗ್ರಾಮದ ಕೋರ್ಟಿಂದ ಸಮನ್ಸ್

|
Google Oneindia Kannada News

ಗುರುಗ್ರಾಮ, ಜುಲೈ 26: ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿರುವ ಆಲಿಬಾಬಾ ಸಂಸ್ಥೆಯ ಜಾಕ್ ಮಾ ಅವರಿಗೆ ಗುರುಗ್ರಾಮ(ಗುರ್ ಗಾಂವ್) ದ ನ್ಯಾಯಾಲಯವೊಂದು ಸಮನ್ಸ್ ಜಾರಿ ಮಾಡಿದೆ.

ಆಲಿಬಾಬಾ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಸಂಸ್ಥೆ ವಿರುದ್ಧ ಹಾಕಿದ್ದ ದಾವೆ ವಿಚಾರಣೆ ನಡೆಸಿದ ಕೋರ್ಟ್, ಸಂಸ್ಥೆಯ ಮುಖ್ಯಸ್ಥರಿಂದ ಎಚ್ ಆರ್ ತನಕ ಎಲ್ಲರಿಗೂ ಸಮನ್ಸ್ ನೀಡಿದೆ.

ಭಾರತದಿಂದ 7 ಚೀನಿ ಮೂಲದ ಕಂಪನಿಗಳ ವಿರುದ್ಧ ಕ್ರಮ?ಭಾರತದಿಂದ 7 ಚೀನಿ ಮೂಲದ ಕಂಪನಿಗಳ ವಿರುದ್ಧ ಕ್ರಮ?

ಆಲಿಬಾಬಾದ ಯುಸಿ ನ್ಯೂಸ್ , ಯುಸಿ ಬ್ರೌಸರ್ ಹಾಗೂ 57 ಇನ್ನಿತರ ಚೀನಾ ಮೂಲದ ಆಪ್ಲಿಕೇಷನ್ ನಿಂದ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಭಾರತ ಸರ್ಕಾರವು ನಿಷೇಧ ಹೇರಿದೆ.

Alibaba, Jack Ma Summoned By Gurgaon Court On Ex-Employees Complaint

ಇದಾದ ಬಳಿಕ ಆಲಿಬಾಬಾದ ಯುಸಿ ಬ್ರೌಸರ್ ವೆಬ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪುಷ್ಪಾಂದ್ರ ಸಿಂಗ್ ಪಾರ್ಮಾರ್ ಎಂಬಾತ ತನ್ನ ಹುದ್ದೆ ಕಳೆದುಕೊಂಡಿದ್ದರು. ಸಂಸ್ಥೆಯಲ್ಲಿ ಎಲ್ಲವೂ ಸೆನ್ಸಾರ್ ಆಗುತ್ತಿತ್ತು. ಚೀನಾಕ್ಕೆ ಹಿತವಾಗುವ ಸುದ್ದಿಯನ್ನು ಮಾತ್ರ ಹೊರಕ್ಕೆ ಬಿಡಲಾಗುತ್ತಿತ್ತು.

ಆಲಿಬಾಬಾ ಸಹಸ್ಥಾಪಕ ಜಾಕ್ ಮಾ ನಿವೃತ್ತಿ ಸದ್ಯಕ್ಕಿಲ್ಲ!ಆಲಿಬಾಬಾ ಸಹಸ್ಥಾಪಕ ಜಾಕ್ ಮಾ ನಿವೃತ್ತಿ ಸದ್ಯಕ್ಕಿಲ್ಲ!

ಹಲವು ಬಾರಿ ಸುಳ್ಳು, ದೋಷಪೂರಿತ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಅಪನಗದೀಕರಣ, ಭಾರತ- ಪಾಕಿಸ್ತಾನ ನಡುವೆ ಯುದ್ಧ ಸಾಧ್ಯತೆ ಎಂಬ ಸೂಕ್ಷ್ಮ ವಿಷಯಗಳನ್ನು ತಪ್ಪಾಗಿ ಮುಂದಿಡಲಾಗಿದೆ ಎಂದು ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಾರ್ಮಾರ್ ಹೇಳಿದ್ದು, ತಮಗಾದ ನಷ್ಟಕ್ಕೆ 2 ಕೋಟಿ ರು ಪರಿಹಾರ ಕೂಡಾ ಕೇಳಿದ್ದಾರೆ.

ಸಿವಿಎಲ್ ಜಡ್ಜ್ ಸೋನಿಯಾ ಶಿಯೋಕಾಂದ್ ಅವರು ದೂರುದಾರರ ಹೇಳಿಕೆ ಆಧಾರಿಸಿ ಆಲಿಬಾಬಾ ಸಂಸ್ಥೆಯ ಜಾಕ್ ಮಾ, 12ಕ್ಕೂ ಅಧಿಕ ಹಿರಿಯ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ ಜುಲೈ 29ರಂದು ಕೋರ್ಟಿಗೆ ಖುದ್ದು ಹಾಜರಾಗಬೇಕು ಅಥವಾ ವಕೀಲರ ಮೂಲಕ ಹಾಜರಾಗಿ ಸೂಕ್ತ ದಾಖಲೆ ನೀಡಬೇಕು ಎಂದಿದ್ದಾರೆ.

English summary
In a major development, Alibaba and its founder Jack Ma has been summoned by a Gurugram court after the company's former employee alleged that he was fired for objecting censorship and fake news on company's applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X