ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ದಾಖಲೆ ಮೊತ್ತದಲ್ಲಿ ಏರಿಕೆ

|
Google Oneindia Kannada News

Recommended Video

ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ದಾಖಲೆ ಮೊತ್ತದಲ್ಲಿ ಏರಿಕೆ

ಬೆಂಗಳೂರು, ಆಗಸ್ಟ್ 09: ಶ್ರಾವಣ ಮಾಸದ ಹಬ್ಬಗಳ ಆರಂಭದಲ್ಲಿ ನಾಗರ ಪಂಚಮಿ ದಿನದಂದು ಆರಂಭವಾದ ಹಳದಿ ಲೋಹದ ಬೆಲೆ ಏರಿಕೆ ವರಮಹಾಲಕ್ಷ್ಮಿ ಹಬ್ಬವಾದ ಇಂದು ಕೂಡಾ ಮೇಲ್ಮುಖವಾಗಿ ಸಾಗಿದೆ. ಶ್ರಾವಣ ಸಂಭ್ರಮದಲ್ಲಿ ಚಿನಿವಾರ ಪೇಟೆಯಲ್ಲಿ ಗ್ರಾಹಕರಿಗೆ ಆಘಾತವಾಗಿದೆ. ಆಷಾಢ ಮಾಸದ ಬಳಿಕ ಚಿನ್ನ, ಬೆಳ್ಳಿ ಖರೀದಿ ಮಾಡಿ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ಧರಿಸಿ ಖುಷಿ ಪಡುವ ಇಚ್ಛೆ ಹೊಂದಿದ್ದವರು, ಬೆಂಗಳೂರಿನ ವಾತಾವರಣದಂತೆ ಡಲ್ ಆಗಿದ್ದಾರೆ.

ಚಿನ್ನದ ದರ ಶುಕ್ರವಾರದಂದು ಬರೋಬ್ಬರಿ 38 ಸಾವಿರ ರೂಪಾಯಿಗಳ ಗಡಿ ದಾಟಿದ್ದು, 10 ಗ್ರಾಂ ಚಿನ್ನದ ಬೆಲೆ 38,470 ರೂಪಾಯಿ ತಲುಪಿದೆ.

ಶ್ರಾವಣ ಸೋಮವಾರ ಚಿನ್ನ ಬೆಳ್ಳಿ ದರ ದಿಢೀರ್ ಏರಿಕೆಶ್ರಾವಣ ಸೋಮವಾರ ಚಿನ್ನ ಬೆಳ್ಳಿ ದರ ದಿಢೀರ್ ಏರಿಕೆ

ಅಮೆರಿಕಾ ಹಾಗೂ ಚೀನಾ ನಡುವಿನ ವಾಣಿಜ್ಯ ಸಮರ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬೆಳವಣಿಗೆಗಳು ಚಿನ್ನದ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಹೀಗಾಗಿ, ಚಿನ್ನ ಖರೀದಿಸಲು ಮುಂದಾಗಿದ್ದ ಗ್ರಾಹಕರು ಸದ್ಯಕ್ಕೆ ಕಂಗಾಲಾಗಿದ್ದಾರೆ.

Gold surges to fresh all-time high, silver follows suit

ಅಮೇರಿಕ ಹಾಗೂ ಚೀನಾ ನಡುವಿನ ಬಿಕ್ಕಟ್ಟು, ಕಾಶ್ಮೀರ ವಿಧೇಯಕ ರದ್ದು ಪರಿಸ್ಥಿತಿಗೆ ಹೊಂದಿಕೆಯಾಗುವಂತೆ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ, ಆರ್ಥಿಕ ಪ್ರಗತಿ ಮಾಗದರ್ಶಿ ಸೂತ್ರಗಳು, ಸ್ಥಳೀಯ ಮಾರುಕಟ್ಟೆಯಲ್ಲಿ ತಗ್ಗಿದ ಬೇಡಿಕೆಗೆ ಅನುಗುಣವಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡಿದೆ.

ಸೋಮವಾರದಂದು ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 550 ರು ಏರಿಕೆ ಕಂಡು, 10 ಗ್ರಾಂಗೆ 37,700 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯಲ್ಲೂ 630 ರು ಏರಿಕೆಯಾಗಿದ್ದು, 1 ಕೆಜಿಗೆ 44,525 ರೂಪಾಯಿನಂತೆ ವಹಿವಾಟು ಮಾಡಿದೆ.

ಡಾಲರ್ ಎದುರು ರುಪಾಯಿ ಕುಸಿದಿದ್ದು 70.66 ಪ್ರತಿ ಡಾಲರ್ ನಂತೆ ಇಂದು ವಹಿವಾಟು ನಡೆಸಿದೆ. ಜಾಗತಿಕವಾಗಿ ನ್ಯೂಯಾರ್ಕಿನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,505 ಯುಎಸ್ ಡಾಲರ್ ನಂತೆ ಹಾಗೂ ಬೆಳ್ಳಿ ಬೆಲೆ ಪ್ರತಿ ಔನ್ಸಿಗೆ 17.13 ಯುಎಸ್ ಡಾಲರ್ ನಂತೆ ವ್ಯವಹಾರ ಕಂಡಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವರದಿಯಂತೆ, ಶೇ 99.9 ಪರಿಶುದ್ಧ ಚಿನ್ನ ಹಾಗೂ ಶೇ 99.5 ಪರಿಶುದ್ಧ ಚಿನ್ನದ ಕ್ರಮವಾಗಿ 38,470 ರು ಪ್ರತಿ 10 ಗ್ರಾಂ ಹಾಗೂ 36,300 ರುನಷ್ಟಾಗಿದೆ.

ಬೆಳ್ಳಿ ಬೆಲೆ ಏರಿಕೆ ಕಂಡು ಪ್ರತಿ 1 ಕೆಜಿಗೆ 43,417 ರುಗೇರಿದೆ. ಆದರೆ, ಬೆಳ್ಳಿ ನಾಣ್ಯಗಳಿಗೆ ಬೇಡಿಕೆ ಕಂಡು ಬಂದಿದ್ದು 100 ಕ್ಕೆ 87,000 ರು ಖರೀದಿಗೆ ಹಾಗೂ 88,000ರು ಮಾರಾಟದ ಬೆಲೆ ಪಡೆದುಕೊಂಡಿದೆ.(ಪಿಟಿಐ)

English summary
Gold prices have hit record highs, silver follows suit in India but jewellery have reported softening demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X