ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾಹದ ಸೀಸನ್‌ನಲ್ಲಿ ಸುಲಭವಾಗಿ ಆನ್‌ಲೈನ್‌ನಲ್ಲಿ ಸಾಲ ಪಡೆಯಿರಿ

Google Oneindia Kannada News

ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ 10 ಸಾಲ ಅರ್ಜಿಯ ಪೈಕಿ 2 ಅರ್ಜಿಗಳು ಯುವ ಸಮೂಹದ್ದಾಗಿದ್ದು, ಇವರು ಮದುವೆಗಾಗಿಯೆ ಸಾಲ ಪಡೆದಿದ್ದಾರೆ. ತಮ್ಮ ವಿವಾಹವನ್ನು ಯೋಜಿಸುವ ನಿಟ್ಟಿನಲ್ಲಿ ಯಾವ ಅವಕಾಶವನ್ನೂ ಇಂದಿನ ಯುವ ಜನಾಂಗ ಬಿಟ್ಟುಕೊಡುವುದಿಲ್ಲ ಎಂಬುದನ್ನು ಈ ಟ್ರೆಂಡ್‌ ಸೂಚಿಸುತ್ತದೆ. ಆನ್‌ಲೈನ್‌ ವೈಯಕ್ತಿಕ ಸಾಲದ ಲಭ್ಯತೆಯೂ ಇದಕ್ಕೆ ಕಾರಣವಾಗಿದೆ.

ವಿವಾಹಕ್ಕಾಗಿ ವೈಯಕ್ತಿಕ ಸಾಲ ಅಥವಾ ವಿವಾಹ ಸಾಲಗಳನ್ನು ಬಜಾಜ್‌ ಫಿನ್‌ಸರ್ವ್‌ನಂತಹ ಸಂಸ್ಥೆಗಳು ಗಮನಾರ್ಹ ಪ್ರಮಾಣದಲ್ಲಿ ನೀಡುತ್ತಿವೆ.

ಅಂದರೆ, ವಿವಾಹದ ಸಮಯದಲ್ಲಿ ನೀವು ನಿಮ್ಮ ಉಳಿತಾಯಕ್ಕಿಂತ ಹೆಚ್ಚು ಪ್ರಮಾಣದ ಹಣವನ್ನು ವೆಚ್ಚ ಮಾಡಬಹುದು. ಅದರಲ್ಲೂ, ಆನ್‌ಲೈನ್‌ ಸೌಲಭ್ಯದಿಂದಾಗಿ ತಕ್ಷಣವೇ ಹಣಕಾಸಿನ ಸೌಲಭ್ಯವನ್ನು ನೀವು ಪಡೆಯಬಹುದು. ಈ ವಿವಾಹದ ಸಮಯದಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವುದು ಹೇಗೆ ಎಂಬ ವಿವರ ಇಲ್ಲಿದೆ.

Get loan easily in this Wedding Season with Bajaj Finserv

ನಿರ್ದಿಷ್ಟ ಸಾಲದಾತರಿಂದ ವಿವಾಹದ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಅರ್ಹತೆ ಮಾನದಂಡವನ್ನು ಗಮನದಲ್ಲಿಟ್ಟುಕೊಳ್ಳಿ. ಇದರಿಂದ ನಿಮ್ಮ ಅರ್ಜಿ ತಿರಸ್ಕಾರವಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ನಿಮಗೆ ಹಣವೂ ಸಿಗುತ್ತದೆ. ಒಂದೊಂದು ಸಾಲದಾತರಿಗೂ ಒಂದೊಂದು ಮಾನದಂಡವಿದ್ದು, ವಿವಾಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನೀವು ಪೂರೈಸಬೇಕಾದ ಕೆಲವು ನಿಯಮಗಳು ಹೀಗಿವೆ.

ನಿಮ್ಮ ಸಾಲದಾತರು ನಿಗದಿಸಿದ ಮಾನದಂಡಕ್ಕೆ ಅರ್ಹರಾಗಿ

• ವಯಸ್ಸಿನ ಅಗತ್ಯ: ನೀವು ಸಾಕಷ್ಟು ವರ್ಷ ಕೆಲಸ ಮಾಡಿರಬೇಕು ಎಂಬ ಮಾನದಂಡವನ್ನು ಸಾಲದಾತರು ನಿಗದಿಸುತ್ತಾರೆ. ಇದು ನೀವು ಮರುಪಾವತಿ ಮಾಡುವ ಗ್ಯಾರಂಟಿ ನೀಡುತ್ತದೆ. ಉದಾಹರಣೆಗೆ, ಬಜಾಜ್‌ ಫಿನ್‌ಸರ್ವ್‌ನಿಂದ ವಿವಾಹಕ್ಕೆ ವೈಯಕ್ತಿಕ ಸಾಲದ ಅರ್ಜಿ ಸಲ್ಲಿಸುವಾಗ ನೀವು 23 ರಿಂದ 55 ವರ್ಷದವರಾಗಿರಬೇಕು.
• ಮಾಸಿಕ ಸಂಬಳ: ಆದಾಯಕ್ಕೆ ಸಾಲ ಅನುಪಾತವು ಮಿತಿಯೊಳಗೆ ಇರಬೇಕು ಎಂಬ ವಿಚಾರದಲ್ಲಿ ಸಾಲದಾತರು ಕಟ್ಟುನಿಟ್ಟಾಗಿರುತ್ತಾರೆ. ಇದರ ಜೊತೆಗೆ, ಕನಿಷ್ಠ ಸಂಬಳವನ್ನು ಹೊಂದಿರಬೇಕು ಎಂಬ ಅಗತ್ಯವೂ ಸಾಲ ಮರುಪಾವತಿಯನ್ನು ಖಚಿತಪಡಿಸುತ್ತದೆ. ಉದಾಹರಣೆಗೆ, ಲಕ್ನೊದಲ್ಲಿ ವಾಸಿಸುತ್ತಿದ್ದರೆ ನೀವು ಮಾಸಿಕ ಕನಿಷ್ಠ 25,000 ರೂ. ಸಂಬಳ ಪಡೆಯುತ್ತಿರಬೇಕು ಮತ್ತು ನವದೆಹಲಿಯಲ್ಲಿ ವಾಸಿಸುತ್ತಿದ್ದರೆ ಮಾಸಿಕ 35,000 ರೂ. ಸಂಬಳ ಪಡೆಯುತ್ತಿರಬೇಕು.

ಉದ್ಯೋಗ, ಸಿಬಿಲ್ ಸ್ಕೋರ್

• ಉದ್ಯೋಗದ ವಿಧ: ಬಹುತೇಕ ಸಂದರ್ಭಗಳಲ್ಲಿ ನೀವು ಆದಾಯ ಹೊಂದಿದ್ದರಷ್ಟೇ ಸಾಲದು. ಸುಸ್ಥಿರ ಆದಾಯ ಮೂಲವೂ ಇರಬೇಕು. ದೀರ್ಘ ಅವಧಿಯವರೆಗೆ ನೀವು ಸಾಲ ಮರುಪಾವತಿ ಮಾಡಬೇಕಾಗುವುದರಿಂದ, ಪ್ರತಿಷ್ಠಿತ ಸಂಸ್ಥೆಗಳಲ್ಲಿ, ಎಂಎನ್‌ಸಿ ಅಥವಾ ಸಾರ್ವಜನಿಕ ಅಥವಾ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರಬೇಕು ಎಂದು ಸಾಲದಾತರು ಬಯಸುತ್ತಾರೆ.

• ಸಿಬಿಲ್ ಸ್ಕೋರ್‌: ವಿವಾಹ ಸಾಲವು ಅಡಮಾನ ರಹಿತ ಸಾಲವಾಗಿರುತ್ತದೆ. ಹೀಗಾಗಿ, ನಿಮ್ಮ ಸಿಬಿಲ್‌ ಸ್ಕೋರ್‌ ಮೇಲೆ ಹೆಚ್ಚು ಆಧರಿಸಿರುತ್ತದೆ. 750 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್‌ ಸೂಕ್ತ. ಹೀಗಿದ್ದರೆ ಉತ್ತಮ ವೈಯಕ್ತಿಕ ಸಾಲ ದರಗಳೊಂದಿಗೆ ನೀವು ಸಾಲ ಪಡೆಯಬಹುದು. ಸ್ವಲ್ಪ ಕಡಿಮೆ ಪ್ರಮಾಣದ ಸ್ಕೋರ್‌ಗೂ ಸಾಲ ಸಿಗುತ್ತದೆ. ಆದರೆ ಕಡಿಮೆ ಮೊತ್ತದ ಸಾಲಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ ಅಥವಾ ಹೆಚ್ಚಿನ ಬಡ್ಡಿ ದರವನ್ನು ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಸ್ಕೋರ್ 700 ಕ್ಕಿಂತ ಕಡಿಮೆ ಇದ್ದರೆ, ಸಾಲ ಅರ್ಜಿ ಸಲ್ಲಿಸುವುದಕ್ಕೂ ಮೊದಲು ಸ್ವಲ್ಪ ಹೆಚ್ಚಿಸಿಕೊಳ್ಳುವುದು ಉತ್ತಮ.

ನಿಮ್ಮ ಅರ್ಜಿಗೆ ಪೂರಕ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಿ

ನಿಮ್ಮ ಅರ್ಹತೆಯನ್ನು ದಾಖಲೆಗಳು ಸಾಬೀತು ಮಾಡುತ್ತವೆ. ಅರ್ಜಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗದಂತೆ ತಡೆಯಲು ಎಲ್ಲ ದಾಖಲೆಗಳನ್ನೂ ಸರಿಯಾಗಿ ಸಲ್ಲಿಸುವುದು ಅಗತ್ಯವಾಗಿರುತ್ತದೆ. ಇದು ಕೂಡ ಒಂದೊಂದು ಸಾಲದಾತರಿಗೂ ವಿಭಿನ್ನವಾಗಿರುತ್ತವೆ. ಹೀಗಾಗಿ, ನೀವು ಆಯ್ಕೆ ಮಾಡಿಕೊಳ್ಳುವ ಸಂಸ್ಥೆಯನ್ನು ಅವಲಂಬಿಸಿ ಬದಲಾಗುತ್ತದೆ. ಸಾಮಾನ್ಯವಾಗಿ ಅಗತ್ಯವಿರುವ ದಾಖಲೆಗಳ ಬಗ್ಗೆ ತಿಳಿದುಕೊಳ್ಳಲು, ಬಜಾಜ್‌ ಫಿನ್‌ಸರ್ವ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಒದಗಿಸಬೇಕಾದ ದಾಖಲೆಗಳನ್ನು ಇಲ್ಲಿ ನೋಡಿ.

• ಕೆವೈಸಿ ದಾಖಲೆಗಳು
• ಉದ್ಯೋಗಿ ಐಡಿ ಕಾರ್ಡ್‌
• ಕಳೆದ 2 ತಿಂಗಳ ಸ್ಯಾಲರಿ ಸ್ಲಿಪ್
• ಕಳೆದ 3 ತಿಂಗಳ ಸ್ಯಾಲರಿ ಖಾತೆಯ ಸ್ಟೇಟ್‌ಮೆಂಟ್‌

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ನಿಮ್ಮ ಸಾಲದಾತರ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ನೀವು ಅರ್ಹತೆ ಮಾನದಂಡಕ್ಕೆ ಹೊಂದುವಂಮತಿದ್ದರೆ ಮತ್ತು ಎಲ್ಲ ಅಗತ್ಯ ದಾಖಲೆಗಳನ್ನೂ ಸಂಗ್ರಹಿಸಿದ್ದರೆ, ಆನ್‌ಲೈನ್‌ನಲ್ಲಿ ವಿವಾಹ ಸಾಲಕ್ಕೆ ಸುಲಭವಾಗಿ ಅರ್ಜಿ ಸಲ್ಲಿಸಿದೆ. ಬಜಾಜ್‌ ಫಿನ್‌ಸರ್ವ್‌ನಿಂದ ಸಾಲ ಪಡೆಯಲು, ನೀವು ಅನುಸರಿಸಬೇಕಾದ ಒಂದು ಸಣ್ಣ ಸರಳ ಕ್ರಮ ಇಲ್ಲಿದೆ.

• ನಿಮ್ಮ ವೈಯಕ್ತಿಕ, ಉದ್ಯೊಗ ಮತ್ತು ಹಣಕಾಸು ವಿವರಗಳನ್ನು ಆನ್‌ಲೈನ್‌ನ ನಮೂನೆಯಲ್ಲಿ ನಮೂದಿಸಿ
ವೈಯಕ್ತಿಕ ಸಾಲ ಇಎಂಐ ಕ್ಯಾಲಕ್ಯುಲೇಟರ್‌ ಸಾಲ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡಿ.
• ಬಜಾಜ್‌ ಫಿನ್‌ಸರ್ವ್‌ ಪ್ರತಿನಿಧಿಗಳು ನಿಮ್ಮನ್ನು ಸಂಪರ್ಕಿಸಿದಾಗ, ಅಗತ್ಯ ದಾಖಲೆಗಳನ್ನು ಸಲ್ಲಿಸಿ
• ಪರಿಶೀಲನೆ ನಡೆದ ನಂತರ, 24 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್‌ ಖಾತೆಗೆ ಹಣವನ್ನು ಬಟವಾಡೆ ಮಾಡಲಾಗುತ್ತದೆ.

ವಿವಾಹದ ಸಮಯದಲ್ಲಿ ನಿಮ್ಮ ಹಣದ ಸಮಸ್ಯೆಯನ್ನು ಹೇಗೆ ವಿವಾಹ ಸಾಲದ ಮೂಲಕ ನೀಗಿಸಿಕೊಳ್ಳಬಹುದು ಎಂದು ತಿಳಿದುಕೊಂಡಿದ್ದೀರಿ. ಅತ್ಯಂತ ಸರಳವಾಗಿ 25 ಲಕ್ಷ ರೂ.ವರೆಗೂ ಸಾಲ ಪಡೆಯಲು ಬಜಾಜ್‌ ಫಿನ್‌ಸರ್ವ್‌ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿ. 60 ತಿಂಗಳವರೆಗಿನ ಕಂತುಗಳ ಸಾಲ ಸೌಲಭ್ಯ ಮತ್ತು ಇನ್ನಷ್ಟು ಅನುಕೂಲಕ್ಕಾಗಿ ಫ್ಲೆಕ್ಸಿ ಲೋನ್‌ ಸೌಲಭ್ಯವನ್ನು ಬಜಾಜ್‌ ಫಿನ್‌ಸರ್ವ್‌ ಒದಗಿಸುತ್ತದೆ.

ಅಗತ್ಯಕ್ಕೆ ಅನುಗುಣವಾಗಿ ಪಡೆಯಬಹುದು

ನೀವು ಸಾಲವನ್ನು ಹಂತ ಹಂತವಾಗಿ, ಅಗತ್ಯಕ್ಕೆ ಅನುಗುಣವಾಗಿ ಪಡೆಯಬಹುದು. ನೀವು ಪಡೆದ ಹಣಕ್ಕೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ಇನ್ನೂ ಮುಂದುವರಿದು, ಆರಂಭಿಕ ಅವಧಿಗೆ ಕೇವಲ ಬಡ್ಡಿಯನ್ನು ಕಂತುಗಳಲ್ಲಿ ಪಾವತಿ ಮಾಡುವ ಅವಕಾಶ ಒದಗಿಸುತ್ತದೆ. ಇದರಿಂದ ನಿಮ್ಮ ಮಾಸಿಕ ವೆಚ್ಚ ಶೇ. 45 ರಷ್ಟು ಕಡಿಮೆಯಾಗುತ್ತದೆ.

ಆದಾಗ್ಯೂ, ಆನ್‌ಲೈನ್‌ ಅರ್ಜಿ ಪ್ರಕ್ರಿಯೆಯನ್ನು ಸರಾಗಗೊಳಿಸಲು ಮತ್ತು ಕಿರಿಕಿರಿ ರಹಿತವಾಗಿಸಲು, ಬಜಾಜ್‌ ಫಿನ್‌ಸರ್ವ್‌ನಿಂದ ಪೂರ್ವ ಅನುಮೋದಿತ ಸಾಲ ಸೌಲಭ್ಯವನ್ನು ಪಡೆಯಬಹುದು. ಇದು ಗ್ರಾಹಕೀಯಗೊಳಿಸಿದ ವಿವಾಹ ಸಾಲಕ್ಕೆ ತ್ವರಿತ ಅನುಮತಿ ಮತ್ತು ಅನುಕೂಲವನ್ನು ಒದಗಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X