ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್ ಬಗ್ಗೆ ಅರಿವು ಮೂಡಿಸಲು ದೇವರ ಮೊರೆ ಹೋದ ಪೊಲೀಸ್!

|
Google Oneindia Kannada News

ಗದಗ, ಏಪ್ರಿಲ್ 23: ತಿಳಿಸಿ ಹೇಳಿದ್ದಾಯಿತು, ಬಾರಿಸಿ ಹೇಳಿದ್ದಾಯಿತು. ಆದರೆ, ಜನರು ಮಾತ್ರ ಲಾಕ್ ಡೌನ್ ನಿಯಮ ಪಾಲನೆ ಮಾಡುತ್ತಿಲ್ಲ. ಅಂತಿಮವಾಗಿ ಪೊಲೀಸರು ದೇವರ ಮೊರೆ ಹೋಗಿದ್ದಾರೆ. ಜನರಿಗೆ ಬುದ್ಧಿ ಹೇಳಲು ಪೊಲೀಸರು ಕರೆತಂದಿದ್ದು 'ಯಮ'ನನ್ನು.

Recommended Video

ಏಪ್ರಿಲ್ ಫೂಲ್ ಆದ ಕುಡುಕರು | April Fool | Liquor Shop | Oneindia kannada

ಗದಗ ಜಿಲ್ಲೆಯ ಬೆಟಗೇರಿ ಠಾಣೆಯ ಪೊಲೀಸ್ ಸಿಬ್ಬಂದಿ ದೇವರ ಮೊರೆ ಹೋಗಿದ್ದಾರೆ. ಕೊರೊನಾ ಕುರಿತು ಜಾಗೃತಿ ಮೂಡಿಸಲು ಯಮ ಇಬ್ಬರು ಕಿಂಕರರ ಜೊತೆ ಆಗಮಿಸಿದ್ದಾನೆ. ಪೊಲೀಸರು ವಾಹನದಲ್ಲಿಯೇ ಓಡಾಡುತ್ತಿದ್ದಾನೆ.

'ನಾವು ಪೊಲೀಸ್ ಕರ್ತವ್ಯದ ಜೊತೆಗೆ ನಿಮ್ಮ ಒಳಿತಿಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನೀವು ಇಲ್ಲಸಲ್ಲದ ನೆಪ ಹೇಳಿಕೊಂಡು ಹೊರಗೆ ಬರುವುದಕ್ಕಿಂದ ಮೊದಲು ಒಂದು ಕ್ಷಣ ಯೋಚಿಸಿ' ಎಂದು ಪೊಲೀಸರು ಕರೆ ನೀಡಿದ್ದಾರೆ.

 ವೈರಲ್ ವಿಡಿಯೋ: ಪ್ರಾಣಿಗಳ ಜೀವ ಉಳಿಸಿದ ಪೊಲೀಸ್ ಪೇದೆಗಳು ವೈರಲ್ ವಿಡಿಯೋ: ಪ್ರಾಣಿಗಳ ಜೀವ ಉಳಿಸಿದ ಪೊಲೀಸ್ ಪೇದೆಗಳು

ಲಾಕ್ ಡೌನ್ ನಿಯಮಗಳನ್ನು ಪಾಲನೆ ಮಾಡಿ. ನಾವು ಕುಟುಂಬದ ಜವಾಬ್ದಾರಿಯನ್ನು ಮರೆತು ನಿಮ್ಮ ರಕ್ಷಣೆಗೆ ನಿಂತಿದ್ದೇವೆ. ನಮ್ಮ ಪ್ರಯತ್ನಕ್ಕೆ ನಿಮ್ಮ ಕೈಜೋಡಿಸಿ. ಕೊರೊನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡೋಣ ಎಂಬುದು ಪೊಲೀಸರು ಮನವಿ.

ಲಾಕ್‌ಡೌನ್‌ ಮಧ್ಯೆ ಭೇಟಿ ಮಾಡೋಣ ಎಂದ ಸ್ನೇಹಿತರಿಗೆ ಪಂಚ್ ಕೊಟ್ಟ ಪುಣೆ ಪೊಲೀಸ್ಲಾಕ್‌ಡೌನ್‌ ಮಧ್ಯೆ ಭೇಟಿ ಮಾಡೋಣ ಎಂದ ಸ್ನೇಹಿತರಿಗೆ ಪಂಚ್ ಕೊಟ್ಟ ಪುಣೆ ಪೊಲೀಸ್

ಪೊಲೀಸ್ ಸಿಬ್ಬಂದಿಗಳ ಪ್ರಯತ್ನ

ಪೊಲೀಸ್ ಸಿಬ್ಬಂದಿಗಳ ಪ್ರಯತ್ನ

ಗದಗ ಜಿಲ್ಲೆಯ ಬೆಟಗೇರಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಕೊರೊನಾ, ಲಾಕ್ ಡೌನ್ ಬಗ್ಗೆ ಅರಿವು ಮೂಡಿಸಲು ವಿನೂತನ ಪ್ರಯತ್ನ ನಡೆಸಿದ್ದಾರೆ. ಯಮ ಮತ್ತು ಕಿಂಕರ ವೇಷಧಿಸಿ ರಸ್ತೆಗೆ ಇಳಿದಿದ್ದಾರೆ.

ಯಮನ ವೇಷ ಧರಿಸಿದ ಪೊಲೀಸ್

ಯಮನ ವೇಷ ಧರಿಸಿದ ಪೊಲೀಸ್

ಬೆಟಗೇರಿ ಠಾಣೆಯ ಪಿಎಸ್‌ಐ ರಾಜೇಶ ಅವರ ಈ ಪ್ರಯತ್ನಕ್ಕೆ ಚಂದ್ರು ದೊಡ್ಡಮನಿ, ದಶರಥ ಹಾಗೂ ಅಲಂದಾರ ಅವರು ಸಹಕಾರ ನೀಡಿದ್ದಾರೆ. ಜನರಿಗೆ ಕಲೆಯ ಮೂಲಕವೂ ತಿಳುವಳಿಕೆ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ವಾಹನ ಸವಾರರಿಗೆ ತಿಳುವಳಿಕೆ

ವಾಹನ ಸವಾರರಿಗೆ ತಿಳುವಳಿಕೆ

ಯಮ ಮತ್ತು ಕಿಂಕರಂತೆ ವೇಷ ಧರಿಸಿದ ಪೊಲೀಸರು ಬೆಟಗೇರಿ ಮುಖ್ಯ ರಸ್ತೆಯಲ್ಲಿ ಪೊಲೀಸ್ ವಾಹನದಲ್ಲಿಯೇ ಸಂಚಾರ ನಡೆಸಿದ್ದಾರೆ. ಅನಗತ್ಯವಾಗಿ ಓಡಾಡುವ ಜನರನ್ನು ಹಿಡಿದು ಲಾಕ್ ಡೌನ್ ನಿಯಮ ಪಾಲನೆ ಮಾಡುವಂತೆ ಅರಿವು ಮೂಡಿಸಿದ್ದಾರೆ.

ಪೊಲೀಸರು ಬ್ಯುಸಿ

ಪೊಲೀಸರು ಬ್ಯುಸಿ

ಲಾಕ್ ಡೌನ್ ಕಾರ್ಯದಲ್ಲಿ ಬ್ಯುಸಿಯಾಗಿರುವ ಪೊಲೀಸರಿಗೆ ಜನರು ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರತಿ ಮನೆಯ ಮುಂದೆ ರಂಗೋಲಿ, ಹೂಮಳೆ ಮತ್ತು ನಿಮ್ಮ ಚಪ್ಪಾಳೆಗಳ ಮೂಲಕ ಪೊಲೀಸರನ್ನು ಸ್ವಾಗತಿಸುತ್ತಿದ್ದಾರೆ.

English summary
Gadag district Betageri police dressed as Yama the lord of death and walked on the streets to create awareness on coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X