ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೃದ್ಧಾಪ್ಯ ವೇತನಕ್ಕಾಗಿ 2 ಕಿ. ಮೀ. ನಡೆದುಕೊಂಡು ಬಂದ ಅಜ್ಜಿ

|
Google Oneindia Kannada News

ಗದಗ, ಮೇ 31; ಕೋವಿಡ್ ಹರಡುವಿಕೆ ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಹಲವು ಜನರಿಗೆ ಹಣಕಾಸಿನ ಸಂಕಷ್ಟ ಎದುರಾಗಿದೆ. ಇದರ ಮಧ್ಯೆಯೇ ಜನರು ಬದುಕು ನಡೆಸುತ್ತಿದ್ದಾರೆ. ಅಜ್ಜಿಯೊಬ್ಬರು ವೃದ್ಧಾಪ್ಯ ವೇತನಕ್ಕಾಗಿ 2 ಕಿ. ಮೀ. ನಡೆದುಕೊಂಡು ಬಂದ ಘಟನೆ ನಡೆದಿದೆ.

Recommended Video

ವೃದ್ಧಾಪ್ಯ ವೇತನ ಪಡೆಯಲು 2KM ನಡೆದುಕೊಂಡು ಬಂದ ಅಜ್ಜಿಗೆ ನಿರಾಸೆ | Oneindia Kannada

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಯಲ್ಲವ್ವ ಭಜಂತ್ರಿ ಎಂಬ ಅಜ್ಜಿ ವೃದ್ಧಾಪ್ಯ ವೇತನ ಪಡೆಯಲು ಅಂಚೆ ಕಚೇರಿಗೆ ಆಗಮಿಸಿದ್ದರು. ಲಾಕ್‌ಡೌನ್ ಪರಿಣಾಮ ಯಾವುದೇ ವಾಹನಗಳ ವ್ಯವಸ್ಥೆ ಇಲ್ಲದ ಕಾರಣ ನಡೆದುಕೊಂಡೇ ಬಂದಿದ್ದಾರೆ. ಆದರೆ ಹಣ ಸಿಗದೆ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.

ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು

ಗದಗ ನಗರದ ಹಳೇ ಡಿಸಿ ಆಫೀಸ್ ಸರ್ಕಲ್ ಬಳಿ ನಡೆದುಕೊಂಡು ಬಂದ ಯಲ್ಲವ್ವ ಭಜಂತ್ರಿಯನ್ನು ಪೊಲೀಸರು ವಿಚಾರಿಸಿದ್ದಾರೆ. ಆಗ ಅಜ್ಜಿ ವೃದ್ಧಾಪ್ಯ ವೇತನ ಪಡೆಯಲು ಬಂದಿದ್ದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಶೆಯೇರಿಸಿದ ಲಾಕ್ ಡೌನ್! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಶೆಯೇರಿಸಿದ ಲಾಕ್ ಡೌನ್!

ಗದಗ, ಮೇ 31; ಕೋವಿಡ್ ಹರಡುವಿಕೆ ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಹಲವು ಜನರಿಗೆ ಹಣಕಾಸಿನ ಸಂಕಷ್ಟ ಎದುರಾಗಿದೆ. ಇದರ ಮಧ್ಯೆಯೇ ಜನರು ಬದುಕು ನಡೆಸುತ್ತಿದ್ದಾರೆ. ಅಜ್ಜಿಯೊಬ್ಬರು ವೃದ್ಧಾಪ್ಯ ವೇತನಕ್ಕಾಗಿ 2 ಕಿ. ಮೀ. ನಡೆದುಕೊಂಡು ಬಂದ ಘಟನೆ ನಡೆದಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಯಲ್ಲವ್ವ ಭಜಂತ್ರಿ ಎಂಬ ಅಜ್ಜಿ ವೃದ್ಧಾಪ್ಯ ವೇತನ ಪಡೆಯಲು ಅಂಚೆ ಕಚೇರಿಗೆ ಆಗಮಿಸಿದ್ದರು. ಲಾಕ್‌ಡೌನ್ ಪರಿಣಾಮ ಯಾವುದೇ ವಾಹನಗಳ ವ್ಯವಸ್ಥೆ ಇಲ್ಲದ ಕಾರಣ ನಡೆದುಕೊಂಡೇ ಬಂದಿದ್ದಾರೆ. ಆದರೆ ಹಣ ಸಿಗದೆ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಗದಗ ನಗರದ ಹಳೇ ಡಿಸಿ ಆಫೀಸ್ ಸರ್ಕಲ್ ಬಳಿ ನಡೆದುಕೊಂಡು ಬಂದ ಯಲ್ಲವ್ವ ಭಜಂತ್ರಿಯನ್ನು ಪೊಲೀಸರು ವಿಚಾರಿಸಿದ್ದಾರೆ. ಆಗ ಅಜ್ಜಿ ವೃದ್ಧಾಪ್ಯ ವೇತನ ಪಡೆಯಲು ಬಂದಿದ್ದು ತಿಳಿದುಬಂದಿದೆ. ಅಜ್ಜಿಯ ಜೊತೆ ಮಾತುಕತೆ ನಡೆಸಿದ ಪೊಲೀಸರು ಅಂಚೆ ಕಚೇರಿ ಬಂದ್ ಆಗಿದೆ. ಈಗ ಅವು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಾಪಸ್ ಕಳಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಸದ್ಯ 5 ದಿನಗಳ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಕೈಯಲ್ಲಿ ಹಣ ಇಲ್ಲದ ಕಾರಣ ಭಜಂತ್ರಿ ನಗರದಿಂದ ಅಜ್ಜಿ ಯಲ್ಲವ್ವ ಭಜಂತ್ರಿ ನಡೆದುಕೊಂಡು ಅಂಚೆ ಕಚೇರಿಗೆ ಬಂದಿದ್ದರು. ಕಿವಿಯೂ ಸರಿಯಾಗಿ ಕೇಳದ ಅಜ್ಜಿ ಅಂಚೆ ಕಚೇರಿ ಮುಚ್ಚಿದೆ ಎಂದು ತಿಳಿದು ಕಣ್ಣೀರಿಟ್ಟರು, ಪೊಲೀಸರು ಆಕೆಯನ್ನು ವಾಪಸ್ ಕಳಿಸಿದರು.

ಅಜ್ಜಿಯ ಜೊತೆ ಮಾತುಕತೆ ನಡೆಸಿದ ಪೊಲೀಸರು ಅಂಚೆ ಕಚೇರಿ ಬಂದ್ ಆಗಿದೆ. ಈಗ ಅವು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಾಪಸ್ ಕಳಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಸದ್ಯ 5 ದಿನಗಳ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.

ಕೈಯಲ್ಲಿ ಹಣ ಇಲ್ಲದ ಕಾರಣ ಭಜಂತ್ರಿ ನಗರದಿಂದ ಅಜ್ಜಿ ಯಲ್ಲವ್ವ ಭಜಂತ್ರಿ ನಡೆದುಕೊಂಡು ಅಂಚೆ ಕಚೇರಿಗೆ ಬಂದಿದ್ದರು. ಕಿವಿಯೂ ಸರಿಯಾಗಿ ಕೇಳದ ಅಜ್ಜಿ ಅಂಚೆ ಕಚೇರಿ ಮುಚ್ಚಿದೆ ಎಂದು ತಿಳಿದು ಕಣ್ಣೀರಿಟ್ಟರು, ಪೊಲೀಸರು ಆಕೆಯನ್ನು ವಾಪಸ್ ಕಳಿಸಿದರು.

English summary
Yallavva Bajantri walked 2 km to get her old age pension in Gadag. Due to complete lockdown post office closed. Police sent back old women to home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X