ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈಮುಗಿದು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ ಸಚಿವ ಡಿ.ಕೆ.ಶಿವಕುಮಾರ್‌

|
Google Oneindia Kannada News

Recommended Video

ವೀರಶೈವ ಧರ್ಮ ರಚನೆ ಕುರಿತು ತಪ್ಪು ಮಾಡಿದೆವು ಎಂದ ಡಿ. ಕೆ. ಶಿವಕುಮಾರ್ | Oneindia Kannada

ಗದಗ, ಅಕ್ಟೋಬರ್ 18: ಜಾತಿ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ನಾನು ಮತ್ತು ನಮ್ಮ ಸರ್ಕಾರ ತಪ್ಪು ಮಾಡಿದೆವು, ನಮ್ಮನ್ನು ಕ್ಷಮಿಸಿಬಿಡಿ ಎಂದು ಡಿ.ಕೆ.ಶಿವಕುಮಾರ್ ಇಂದು ಕ್ಷಮೆ ಕೇಳಿದ್ದಾರೆ.

ಗದಗದಲ್ಲಿ ರಂಭಾಪುರಿ ಶ್ರೀಗಳ ದಸರಾ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದಲ್ಲಿ ಹಸ್ತಕ್ಷೇಪ ಮಾಡಿ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಿತು ಎಂದು ಮೊದಲ ಬಾರಿಗೆ ಬಹಿರಂಗವಾಗಿ ತಪ್ಪೊಪ್ಪಿಕೊಂಡರು.

ಬಳ್ಳಾರಿ ಉಪ ಚುನಾವಣೆ : 52 ಜನರ ವಿಶೇಷ ತಂಡ ರಚಿಸಿದ ಕಾಂಗ್ರೆಸ್‌!ಬಳ್ಳಾರಿ ಉಪ ಚುನಾವಣೆ : 52 ಜನರ ವಿಶೇಷ ತಂಡ ರಚಿಸಿದ ಕಾಂಗ್ರೆಸ್‌!

ನಮ್ಮ ಸರ್ಕಾರ ದೊಡ್ಡ ತಪ್ಪು ಮಾಡಿತು, ನಾನೂ ಸರ್ಕಾರದ ಭಾಗವಾಗಿದ್ದೆ, ನಾವು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದಾಗಿತ್ತು, ನಮ್ಮನ್ನು ತುಂಬು ಹೃದಯದಿಂದ ಕ್ಷಮಿಸಿಬಿಡಿ ಎಂದು ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.

ಅಷ್ಟೆ ಅಲ್ಲದೆ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದಲ್ಲಿ ಹಸ್ತಕ್ಷೇಪ ಮಾಡಿದ್ದು ನಮ್ಮ ಸರ್ಕಾರ ಮಾಡಿದ ಅಪರಾಧ ಎಂದು ಜನತೆಯ ಎದುರು ಕೈ ಮುಗಿದು ಕ್ಷಮಾಪಣೆ ಕೇಳಿದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ 'ಮುನ್ನುಗ್ಗಿ ದೆಹಲಿಗೆ'ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ 'ಮುನ್ನುಗ್ಗಿ ದೆಹಲಿಗೆ'

ಹಸ್ತಕ್ಷೇಪ ಮಾಡಿದ್ದರಿಂದ ನಮಗೆ ಸೋಲಾಯಿತು

ಹಸ್ತಕ್ಷೇಪ ಮಾಡಿದ್ದರಿಂದ ನಮಗೆ ಸೋಲಾಯಿತು

ರಾಜಕೀಯ ಪಕ್ಷಗಳು, ಸರ್ಕಾರಗಳು ಯಾವುದೇ ಕಾರಣಕ್ಕೂ ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದ ಅವರು, ಹಸ್ತಕ್ಷೇಪ ಮಾಡಿದರೆ ಏನಾಗುತ್ತದೆ ಎಂಬುದು ಕಳೆದ ವಿಧಾನಸುಭೆ ಚುನಾವಣೆ ಜನಾಭಿಪ್ರಾಯ ಬಂದಾಗ ನಮಗೆ ಅರಿವಾಯಿತು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕಾಂಗ್ರೆಸ್‌ನಲ್ಲಿ ಭಿನ್ನಮತ ಸಾಧ್ಯತೆ

ಕಾಂಗ್ರೆಸ್‌ನಲ್ಲಿ ಭಿನ್ನಮತ ಸಾಧ್ಯತೆ

ಡಿ.ಕೆ.ಶಿವಕುಮಾರ್‌ ಅವರ ಈ ಹೇಳಿಕೆಯಿಂದ ಕಾಂಗ್ರೆಸ್‌ ಪಕ್ಷದಲ್ಲಿಯೇ ಒಡಕು ಮೂಡುವ ಸಾಧ್ಯತೆ ಇದೆ. ಎಂಬಿ ಪಾಟೀಲ್ ಸೇರಿದಂತೆ ಉತ್ತರ ಕರ್ನಾಟಕ ಹಲವರು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡಿದ್ದರು. ಡಿ.ಕೆ.ಶಿ ಅವರ ಈ ಹೇಳಿಕೆಯಿಂದ ಅವರಿಗೆ ಮುಜುಗರ ಉಂಟಾಗಲಿದೆ.

ಸಿದ್ದರಾಮಯ್ಯ ಅವರಿಗೂ ಮುಜುಗರ

ಸಿದ್ದರಾಮಯ್ಯ ಅವರಿಗೂ ಮುಜುಗರ

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಪರೋಕ್ಷವಾಗಿ ಬೆಂಬಲ ನೀಡಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಚಿವ ಸಂಪುಟದ ಒಪ್ಪಿಗೆ ಪಡೆದುಕೊಂಡಿದ್ದ ಸಿದ್ದರಾಮಯ್ಯ ಅವರಿಗೂ ಡಿ.ಕೆ.ಶಿವಕುಮಾರ್ ಹೇಳಿಕೆ ಮುಜುಗರ ತರಲಿದೆ. ಬಿಜೆಪಿಗೆ ಇದೊಂದು ರಾಜಕೀಯ ಅಸ್ತ್ರವೂ ಆಗಲಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಈಗ ಏನಾಗಿದೆ

ಲಿಂಗಾಯತ ಪ್ರತ್ಯೇಕ ಧರ್ಮ ಈಗ ಏನಾಗಿದೆ

ಸಿದ್ದರಾಮಯ್ಯ ಅವರು ಈ ಬಗ್ಗೆ ಸಮಿತಿಯೊಂದನ್ನು ರಚಿಸಿ ವರದಿ ಪಡೆದು ಸಂಪುಟದ ಒಪ್ಪಿಗೆ ಪಡೆದು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅವಕಾಶ ಕೊಡಬೇಕೆಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ವರೆಗೆ ಆ ಪ್ರಸ್ತಾವನೆ ಕೇಂದ್ರದ ಬಳಿಯೇ ಇದೆ.

ಧರ್ಮ ಒಡೆದವ ಎನಿಸಿಕೊಂಡ ಸಿದ್ದರಾಮಯ್ಯ

ಧರ್ಮ ಒಡೆದವ ಎನಿಸಿಕೊಂಡ ಸಿದ್ದರಾಮಯ್ಯ

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು. ಇದು ಭಾರಿ ಜನವಿರೋಧಕ್ಕೆ ಕಾರಣವಾಗಿತ್ತು.

English summary
DK Shivakumar apologize personally and from behalf of his past government for interfering in Lingayatha separate religion. He said no party should interfere in caste and religion matters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X