ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗದಲ್ಲಿ ವೀರಶೈವ-ಲಿಂಗಾಯತ ಸಮಾವೇಶ, 8 ನಿರ್ಣಯ

|
Google Oneindia Kannada News

ಗದಗ, ಡಿಸೆಂಬರ್ 24 : 'ವೀರಶೈವ-ಲಿಂಗಾಯತ ಎರಡೂ ಒಂದೇ' ಎನ್ನುವ ಸಂದೇಶ ಸಾರಲು ಗದಗದಲ್ಲಿ ಭಾನುವಾರ ಬೃಹತ್ ಸಮಾವೇಶ ನಡೆಯಿತು. ಲಕ್ಷಾಂತರ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಅಧ್ಯಯನ ಸಮಿತಿ ಸದಸ್ಯರಿಗೆ ಧರ್ಮದ ತಿಳುವಳಿಕೆ ಇಲ್ಲ: ರಂಭಾಪುರಿ ಶ್ರೀಅಧ್ಯಯನ ಸಮಿತಿ ಸದಸ್ಯರಿಗೆ ಧರ್ಮದ ತಿಳುವಳಿಕೆ ಇಲ್ಲ: ರಂಭಾಪುರಿ ಶ್ರೀ

ಗದಗದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಿತು. 1,200ಕ್ಕೂ ಅಧಿಕ ವೀರಶೈವ ಲಿಂಗಾಯತ ಧರ್ಮದ ಮಠಾಧೀಶರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Veerashaiva-Lingayat huge rally in Gadag

'ವೀರಶೈವ ಲಿಂಗಾಯತ ಧರ್ಮದ ಜನಜಾಗೃತಿ ಸಮಾವೇಶ' ಎಂಬ ಹೆಸರಿನಲ್ಲಿ ನಡೆಯಿತು. 8 ನಿರ್ಣಯಗಳನ್ನು ಮಂಡನೆ ಮಾಡಲಾಯಿತು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳ ನೂರೂರು ಮಠಾಧೀಶರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಯಾವ್ ಪುರುಷಾರ್ಥಕ್ಕೆ ಈ ಕಮಿಟಿ ಮಾಡಿದ್ದಾರೆː ಜಗದೀಶ್ ಶೆಟ್ಟರ್ ಗರಂಯಾವ್ ಪುರುಷಾರ್ಥಕ್ಕೆ ಈ ಕಮಿಟಿ ಮಾಡಿದ್ದಾರೆː ಜಗದೀಶ್ ಶೆಟ್ಟರ್ ಗರಂ

ಪ್ರತ್ಯೇಕ ಲಿಂಗಾಯತ ಧರ್ಮದ ಸಮಾವೇಶಗಳಿಗೆ ಸೆಡ್ಡು ಹೊಡೆಯಲು. ವೀರಶೈವ ಲಿಂಗಾಯತ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಆಂದೋಲ ಶ್ರೀಗಳು, 'ವೀರಶೈವ ಧರ್ಮ ಒಡೆಯಲು ಸಿಎಂ ತ್ರೀ ಈಡಿಯಟ್ಸ್ ತಯಾರು ಮಾಡಿದ್ದಾರೆ' ಎಂದರು. ಈ ಮೂಲಕ ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಮತ್ತು ಬಸವರಾಜ ಹೊರಟ್ಟಿ ಅವರನ್ನು ಜರಿದರು.

ಸಮಾವೇಶದಲ್ಲಿ ಕೈಗೊಂಡ 8 ನಿರ್ಣಯಗಳು

* ವೀರಶೈವ-ಲಿಂಗಾಯತ ಧರ್ಮ ಹಿಂದೆ, ಇಂದು, ಮುಂದೆ ಹಾಗೂ ಎಂದೆಂದಿಗೂ ಒಂದೇ

* ವೀರಶೈವ-ಲಿಂಗಾಯತ ಒಂದೇ ಎನ್ನುವ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ನಿಲುವನ್ನು ಬೆಂಬಲಿಸಿ, ಅನುಮೋದಿಸುವುದು

* ಕಾಂಗ್ರೆಸ್ ಸರ್ಕಾರವು ಚುನಾವಣೆಗೆ ಮುನ್ನ ತರಾತುರಿಯಲ್ಲಿ ರಚಿಸಿರುವ ಪೂರ್ವಗ್ರಹ ಪೀಡಿತ ಸಮಿತಿಯನ್ನು ವಿಸರ್ಜಿಸಬೇಕು ಎಂದು ಅಲ್ಪಸಂಖ್ಯಾತರ ಆಯೋಗವನ್ನು ಆಗ್ರಹಿಸುವುದು

* ಅಲ್ಪಸಂಖ್ಯಾತ ಮಾನ್ಯತೆ ನೀಡುವ ನೆಪದಲ್ಲಿ ವೀರಶೈವ-ಲಿಂಗಾಯತರಿಗೆ ದೊರೆಯುವ ಜಾತಿ ಆಧಾರಿತ ಮೀಸಲಾತಿ ಸೌಲಭ್ಯದಿಂದ ಶಾಶ್ವತವಾಗಿ ವಂಚಿತಗೊಳಿಸಲು ಹಾಗೂ ಧರ್ಮವನ್ನು ಒಡೆಯಲು ಕಾಂಗ್ರೆಸ್ ಸರ್ಕಾರ ನಡೆಸಿದ ಹುನ್ನಾರದ ಕುರಿತು ಎಚ್ಚರ ವಹಿಸುವುದು.

* ವೀರಶೈವ-ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ವಹಿಸುವುದು

* ವೀರಶೈವ-ಲಿಂಗಾಯತ ಸಮಾಜದ ಸಂಖ್ಯಾಬಲಕ್ಕೆ ಅನುಗುಣವಾಗಿ 2ಎ ಪ್ರವರ್ಗದಲ್ಲಿ ಅಥವ ಪ್ರತ್ಯೇಕ ಪ್ರವರ್ಗವನ್ನೇ ರಚಿಸಿ ಕನಿಷ್ಠ ಶೇ 15ರಷ್ಟು ಮೀಸಲಾತಿ ನೀಡಲು ಒತ್ತಾಯಿಸುವುದು.

* ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಕಳಸಾ ಬಂದೂರಿ, ಮಹದಾಯಿ ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ಯರ್ಥಪಡಿಸಬೇಕು. ಮಹದಾಯಿ ಯೋಜನೆ ಜಾರಿಗೊಳಿಸಿ ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕು.

* ಲಿಂಗಾಯತ ಸ್ವತಂತ್ರ ಧರ್ಮ ಪ್ರತಿಪಾದಿಸುತ್ತಿರುವ ಕಾಂಗ್ರೆಸ್ ನಾಲ್ವರು ಸಚಿವರಿಗೆ ವಕೀಲರ ನೋಟಿಸ್ ಜಾರಿಗೊಳಿಸಿದ ಶಶಿಧರ ಶಾನಭೋಗ ಅವರನ್ನು ಬೆಂಬಲಿಸುವುದು ಮತ್ತು ಮುಂದಿನ ಕಾನೂನು ಕ್ರಮಗಳಿಗೆ ನೆರವು ನೀಡುವುದು.

* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವರನ್ನು ಒಡೆಯಲು ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ ಹಾಗೂ ವಿನಯ ಕುಲಕರ್ಣಿ ಎಂಬ ಥ್ರೀ ಈಡಿಯಟ್ಸ್ ಗಳನ್ನ ಸಿದ್ಧಗೊಳಿಸಿದ್ದಾರೆ.

English summary
Veerashaiva-Lingayat huge rally in Gadag. 8 resolutions passed in the resolution. ಗದಗದಲ್ಲಿ ವೀರಶೈವ-ಲಿಂಗಾಯತ ಸಮಾವೇಶ, 8 ನಿರ್ಣಯ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X