ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ; ಮೆಕ್ಕೆಜೋಳದ ಬೆಳೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ನವೆಂಬರ್ 14; ಗಜೇಂದ್ರಗಡ ತಾಲ್ಲೂಕಿನ ಕುಂಟೋಜಿ ಗ್ರಾಮದ ಗುಡ್ಡದ ಮೇಲಿನ ಹೊಲದಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳದ ಬೆಳೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸುಮಾರು 3 ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಫಸಲು ಹೊಲ್ಲದಲ್ಲೇ ಸುಟ್ಟು ಕರಕಲಾಗಿದೆ.

ಲಂಬಾಣಿ ತಾಂಡಾದ ರೈತ ಮಹಿಳೆ ಲಕ್ಷ್ಮವ್ವ ಉಮಲಪ್ಪ ರಾಠೋಡ ಸಾಲ ಮಾಡಿ ಬೆಳೆ ಬೆಳೆದಿದ್ದರು. ಬೆಳೆ ಕೈಗೆ ಬರುವ ಮೊದಲೇ ಸುಟ್ಟು ಬೂದಿಯಾದ ಕಾರಣ ಕಣ್ಣೀರು ಹಾಕಿದ್ದಾರೆ. ಕಿಡಿಗೇಡಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಗದಗ: ಗರ್ಭಿಣಿ ಹಸುವಿಗೆ ಮನೆಯವರಿಂದ ಸೀಮಂತ ಕಾರ್ಯಗದಗ: ಗರ್ಭಿಣಿ ಹಸುವಿಗೆ ಮನೆಯವರಿಂದ ಸೀಮಂತ ಕಾರ್ಯ

ಮಳೆಯಾಶ್ರಿತ ಒಣ ಬೇಸಾಯದ ಭೂಮಿಯಾದ ಕುಂಟೋಜಿ ಗುಡ್ಡದ ಮೇಲೆ ತಲೆತಲಾಂತರಿಂದ ಕೃಷಿ ಮಾಡಿಕೊಂಡು ಉಪಜೀವನ ನಡೆಸುತ್ತಿದ್ದಾರೆ. ಆಗಾಗ ಸುರಿಯುವ, ಕೈಕೊಡುವ ಮಳೆಯ ನಡುವೆಯೂ ಧೈರ್ಯಮಾಡಿ ಪ್ರತಿವರ್ಷ ಬಿತ್ತನೆ ಮಾಡುತ್ತಾರೆ.

ಬಾಗಲಕೋಟೆಯಿಂದ ಬಾಂಗ್ಲಾಗೆ ಮೆಕ್ಕೆಜೋಳ ರಫ್ತು ಬಾಗಲಕೋಟೆಯಿಂದ ಬಾಂಗ್ಲಾಗೆ ಮೆಕ್ಕೆಜೋಳ ರಫ್ತು

Unidentified People Set Fire To Corn Field At Gajendragad

ಗುಡ್ಡದ ಮೇಲಿನ ಕೃಷಿ ಚಟುವಟಿಕೆಗೆ ರೈತರು, ಕೃಷಿ ಕಾರ್ಮಿಕರು, ಮಹಿಳೆಯರು ಬರಲು ಹಾಗೂ ಗುಡ್ಡ ಹತ್ತಲು ಹಿಂದೇಟು ಹಾಕುವ ಸಂದರ್ಭದಲ್ಲಿ ಅವರ ಮನವೊಲಿಸಿ ಹೆಚ್ಚಿನ ಕೂಲಿ ನೀಡಿ ಇಲ್ಲಿನ ರೈತ ಸಮುದಾಯ ಕೃಷಿ ಮಾಡುತ್ತಾರೆ. ನಂತರ ಅದಕ್ಕೆ ಬೀಜೋಪಚಾರ, ಕಳೆ ತೆಗೆಯುವುದು, ರಂಟೆ ಹೊಡೆಯುವುದು, ಗೊಬ್ಬರ ಹಾಕುವುದು ಹೀಗೆ ಪರಿಶ್ರಮ ಪಡುತ್ತಾರೆ.

ಆಕಸ್ಮಿಕ ಬೆಂಕಿಗೆ 22 ಟ್ರ್ಯಾಕ್ಟರ್ ಲೋಡ್ ಮೆಕ್ಕೆಜೋಳ ಆಹುತಿಆಕಸ್ಮಿಕ ಬೆಂಕಿಗೆ 22 ಟ್ರ್ಯಾಕ್ಟರ್ ಲೋಡ್ ಮೆಕ್ಕೆಜೋಳ ಆಹುತಿ

ಬೆಳೆ ಬಂದಾಗ ಅಡವಿ ಜೀವಿಗಳಾದ ಹಂದಿ, ನವಿಲು, ಕೋತಿಗಳ ಉಪಟಳದ ನಡುವೆ ಹಾಗೂ ಕುರಿಗಾಹಿಗಳ, ದನಗಾರರ ಕಾಟದ ನಡುವೆ ಅಳಿದು ಉಳಿದ ಫಸಲನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಅದರಲ್ಲೂ ಈ ಬಾರಿ ಮಳೆ ಕೈಕೊಟ್ಟಿರುವ ಕಾರಣ ಬಹಳ ತೊಂದರೆ ಅನುಭವಿಸಿದ್ದಾರೆ.

ಅದರ ನಡುವೆ ಬೆಳೆದು ನಿಂತಿದ್ದ ಬೆಳೆಗ ಕಿಡಿಗೇಡಿಗಳು ಬೆಂಕಿಯಿಟ್ಟಿರುವ ಕಾರಣದಿಂದ ರೈತ ಮಹಿಳೆ ಕಂಗಾಲಾಗಿದ್ದಾಳೆ ಹಾಗೂ ಕಣ್ಣೀರು ಹಾಕುತ್ತಿದ್ದಾಳೆ. ಬೀಜೋಪಚಾರ, ಕೂಲಿ, ಕುಂಟೆ, ಗೊಬ್ಬರ ಸೇರಿಸಿ ಅಂದಾಜು 30 ಸಾವಿರ ರೂಪಾಯಿ ಖರ್ಚು ಮಾಡಿ, ಅಂದಾಜು 3 ಎಕರೆಯಷ್ಟು ಹೊಲಕ್ಕೆ ಈ ಬಾರಿ ಬಿತ್ತನೆ ಮಾಡಲಾಗಿತ್ತು.

"ಅನಾರೋಗ್ಯದ ನಡುವೆಯೂ ಹೊಲಕ್ಕೆ ಬರುತ್ತಿದ್ದೆ. ಕೆಲವೊಮ್ಮೆ ಕಾಲ ನೋವು ಜಾಸ್ತಿಯಾದಾಗ ಮಾತ್ರ ಬರುತ್ತಿರಲಿಲ್ಲ. ಬೆಂಕಿಯಿಂದಾಗಿ 3 ಎಕರೆಯ ಮೆಕ್ಕೆ ಜೋಳದಲ್ಲಿ ಅಂದಾಜು ಶೇ 70ರಷ್ಟು ಹೊಲ ಸುಟ್ಟು ಕರಕಲಾಗಿದೆ" ಎಂದು ಲಕ್ಷ್ಮವ್ವ ಉಮಲಪ್ಪ ರಾಠೋಡ್ ಅಳಲು ತೋಡಿಕೊಂಡರು.

"ಮನುಷ್ಯನಾಗಿ ಹುಟ್ಟಿದವನಿಗೆ ಬೆಳೆಗಳಿಗೆ ಬೆಂಕಿ ಇಡಲು ಮನಸ್ಸಾದರು ಹೇಗೆ ಬಂದಿತು?. ಮೆಕ್ಕೆಜೋಳ ಬೇಕು ಎಂದು ಕೇಳಿದರೆ ಎಲ್ಲಾ ಫಸಲನ್ನು ಅವರಿಗೆ ಕೊಟ್ಟು ಕಳುಹಿಸುತ್ತಿದ್ದೆ. ಯಾರು ಬೆಂಕಿ ಹಚ್ಚಿದ್ದಾರೋ ಅವರಿಗೆ ದೇವರು ಖಂಡಿತವಾಗಿ ಒಳ್ಳೆಯದನ್ನು ಮಾಡುವುದಿಲ್ಲ" ಎಂದು ಲಕ್ಷ್ಮವ್ವ ಆಕ್ರೋಶ ವ್ಯಕ್ತಪಡಿಸಿದರು.

ಬೆಳೆಗಳಿಗೆ ಬೆಂಕಿ ಇಡುವ ಪುಂಡರಿಗೆ ತಕ್ಕ ಶಿಕ್ಷೆ ನೀಡಲು ಆಯಾ ಭಾಗದ ರೈತ ಸಂಘಟನೆಗಳು ಮುಂದಾಗಬೇಕು. ಇದೊಂದು ಹೀನ ಕೃತ್ಯವಾಗಿದೆ. ತಿನ್ನುವ ಅನ್ನಕ್ಕೆ ಯಾವತ್ತೂ ಬೆಂಕಿ ಇಡುವ ಕೆಲಸ ಮಾಡಬಾರದು.

ಬೆಳೆನಾಶದಿಂದ ಕಂಗಾಲಾಗಿರುವ ರೈತ ಮಹಿಳೆಗೆ ಸೂಕ್ತ ಪರಿಹಾರ ಕೊಡಲು ಸಂಬಂಧಿಸಿದ ಇಲಾಖೆಯವರು ಮುಂದಾಗಬೇಕು ಹಾಗೂ ಬೆಂಕಿ ಇಟ್ಟವರನ್ನು ಹುಡುವ ಪ್ರಯತ್ನ ಮಾಡಬೇಕು ಎಂದು ಜೈ ಭೀಮ್ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಮೈಲಾರಪ್ಪ ವೀ. ಚಳ್ಳಮರದ ಆಗ್ರಹಿಸಿದರು.

ಲಾರಿ ಡಿಕ್ಕಿ, ಯುವತಿ ಸಾವು; ಗದಗ ತಾಲ್ಲೂಕಿನ ಪಾಪನಾಸಿ ತಾಂಡಾದ ಯುವತಿ ತಂದೆಯನ್ನು ರೈಲು ನಿಲ್ದಾಣಕ್ಕೆ ಬಿಡಲು ಆಗಮಿಸಿದ್ದಳು. ಗದಗ ರೈಲು ನಿಲ್ದಾಣದಿಂದ ಊರಿಗೆ ವಾಪಸ್ ಆಗುವಾಗ ಅಡವಿಸೋಮಾಪುರದ ಮಲ್ಲಿಕಾರ್ಜುನ ಮಠದ ಹತ್ತಿರ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾಳೆ.

ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಬೈಕ್ ಗೆ ಡಿಕ್ಕಿ ಹೊಡೆದ ಲಾರಿ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಪಾಪನಾಸಿ ಟೋಲ್‌ ಗೇಟಿನಲ್ಲಿ ಸ್ಥಳೀಯರು ತಪಾಸಣೆ ಮಾಡಿದಾಗ ಸಿಸಿಟಿವಿಯಲ್ಲಿ ವಾಹನದ ಸಂಖ್ಯೆ KA 01 C 3095 ಎಂದು ಪತ್ತೆಯಾಗಿದೆ.

ಮೃತಪಟ್ಟ ಯುವತಿಯನ್ನು ಶಿಲ್ಪಾ ಸೋಮನಾಥ ಕಾರಭಾರಿ (26) ಎಂದು ಗುರುತಿಸಲಾಗಿದೆ. ಗದಗ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Recommended Video

ಶ್ರೀಕೃಷ್ಣ ಹ್ಯಾಕರ್ ಆಗಿದ್ದು ಹೇಗೆ ಗೊತ್ತಾ! | Oneindia Kannada

English summary
Unidentified people set fire to Corn field at Gadag district Gajendragad. Around 3 acre of crop destroyed due to fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X