ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿಗರನ್ನು ಸೆಳೆದ ಬಿಂಕದಕಟ್ಟಿ ಮೃಗಾಲಯದ ನೂತನ ಅತಿಥಿಗಳು

By Gururaj
|
Google Oneindia Kannada News

ಗದಗ, ಜುಲೈ 10 : ಬಿಂಕದಕಟ್ಟಿ ಮೃಗಾಲಯದ ನೂತನ ಅತಿಥಿಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಪ್ರತಿದಿನ ಸುಮಾರು 500 ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಗದಗ ಜಿಲ್ಲೆಯ ಬಿಂಕದಕಟ್ಟಿ ಮೃಗಾಲಯಕ್ಕೆ ಆರು ತಿಂಗಳ ಹಿಂದೆ ಎರಡು ಹುಲಿಗಳನ್ನು ಮೈಸೂರಿನ ಮೃಗಾಲಯದಿಂದ ತರಲಾಗಿತ್ತು. ಹುಲಿಗಳನ್ನು ಪ್ರವಾಸಿಗರ ದರ್ಶನಕ್ಕೆ ಮುಕ್ತಗೊಳಿಸಿ ಆರು ತಿಂಗಳು ಕಳೆದಿದೆ.

ವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳುವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳು

ಮೈಸೂರಿನಿಂದ ಅನಸೂಯಾ ಮತ್ತು ಲಕ್ಷಣ ಎಂಬ ಹುಲಿಗಳನ್ನು ತರಲಾಗಿತ್ತು. ಜನವರಿಯಲ್ಲಿ ಅವುಗಳನ್ನು ಪ್ರವಾಸಿಗರ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ. ಹುಲಿಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

Two new attraction in Binkadaokatti zoo in Gadag

ಸಾಮಾನ್ಯ ದಿನಗಳಲ್ಲಿ 400 ರಿಂದ 500 ಜನರು, ಶನಿವಾರ ಮತ್ತು ಭಾನುವಾರ ಸುಮಾರು 700 ಜನರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಹುಲಿಗಳನ್ನು ನೋಡಲು ಜನರು ಆಗಮಿಸುತ್ತಿರುವುದರಿಂದ ಮೃಗಾಲಯದ ವರಮಾನವೂ ಹೆಚ್ಚಾಗುತ್ತಿದೆ.

ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಭುತಾನೆಂದೆಂಬ ವ್ಯಾಘ್ರಹಬ್ಬಿದಾ ಮಲೆ ಮಧ್ಯದೊಳಗೆ ಅರ್ಭುತಾನೆಂದೆಂಬ ವ್ಯಾಘ್ರ

ಅನಸೂಯಾ ಮತ್ತು ಲಕ್ಷಣ ಹುಲಿಗಳನ್ನು ಬೇರೆ ಬೇರೆಯಾಗಿಯೇ ಇಡಲಾಗಿದೆ. ಅವುಗಳು ಹೊಂದಿಕೊಂಡ ಬಳಿಕ ಒಟ್ಟಿಗೆ ಬಿಡಲು ಮೃಗಾಲಯದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೃಗಾಲಯದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಪ್ರವಾಸಿಗರನ್ನು ಸೆಳೆಯಲು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.

ಬಿಂಕದಕಟ್ಟಿ ಮೃಗಾಲಯ ಸುಮಾರು 40 ಎಕರೆ ವಿಸ್ತೀರ್ಣದಲ್ಲಿದೆ. ಮೊದಲು ಕಿರುಮೃಗಾಲಯವಾಗಿತ್ತು, ಈಗ ಸಣ್ಣ ಮೃಗಾಲಯ ಎಂದು ಬಡ್ತಿ ನೀಡಲಾಗಿದೆ. ಮೃಗಾಲಯದ ಆವರಣದಲ್ಲಿ 2.5 ಕಿ.ಮೀ. ಉದ್ದದ ವಾಕಿಂಗ್ ಪಥ ನಿರ್ಮಾಣ ಮಾಡಲಾಗಿದೆ.

ಕಳೆದ ಆರು ತಿಂಗಳಿನಲ್ಲಿ ಮೃಗಾಲಯಕ್ಕೆ 69,765 ಪ್ರವಾಸಿಗರು ಭೇಟಿ ನೀಡಿದ್ದಾರೆ. 14.76 ಲಕ್ಷ ಆದಾಯ ಬಂದಿದೆ. ಮಳೆಗಾಲದ ಬಳಿಕ ಮತ್ತಷ್ಟು ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆ ಇದೆ.

English summary
Visitors to the Binkadaokatti zoo in Gadag will able to see two new faces. Anasuya and Laxmana two tigers attracting visitors of zoo. Tiger brought from Mysuru zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X