• search
  • Live TV
ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಸಿದ್ದ ಮಠದ ಜಾತ್ರೆ ರದ್ದು; ಕಣ್ಣೀರಿಟ್ಟ ಸ್ವಾಮೀಜಿ

|
Google Oneindia Kannada News

ಗದಗ, ಏಪ್ರಿಲ್‌ 23: ಕೊರೊನಾ ಮಹಾಮಾರಿಯಿಂದ ಲಾಕ್‌ಡೌನ್ ಆಚರಣೆಯಲ್ಲಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಅನೇಕ ಕಡೆ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತದೆ.

ಆದರೆ, ಲಾಕ್‌ಡೌನ್ ಇರುವುದರಿಂದ ಜಾತ್ರೆಗಳಿಗೂ ತಡೆ ಹೇರಲಾಗಿದೆ. ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದ್ದ ಜಾತ್ರೆಗಳು ವಿಧಿಯಿಲ್ಲದೆ ನಿಂತಿವೆ.

ಗದಗ; ಕೊರೊನಾಕ್ಕೆ ವೃದ್ಧೆ ಬಲಿ; ಸೋಂಕು ಹರಡಿದ್ದು ಹೇಗೆ? ಗದಗ; ಕೊರೊನಾಕ್ಕೆ ವೃದ್ಧೆ ಬಲಿ; ಸೋಂಕು ಹರಡಿದ್ದು ಹೇಗೆ?

ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ಗದಗ ಜಿಲ್ಲೆಯ ಶಿರಹಟ್ಟಿ ಫಕೀರ್ ಸ್ವಾಮಿ ಮಠದ ಜಾತ್ರೆಯನ್ನೂ ರದ್ದು ಮಾಡಲಾಗಿದೆ.‌ ಪ್ರತಿ ವರ್ಷ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದ್ದ ಈ ಜಾತ್ರೆಯನ್ನು ಕೊರೊನಾ ಕಾರಣದಿಂದ ರದ್ದು ಮಾಡಿದ್ದೇವೆ ಎಂದು ಹೇಳಿ, ಮಠದ ಪ್ರಸ್ತುತ ಮಠಾಧಿಪತಿ ಫಕೀರ್ ಸಿದ್ದರಾಮ ಶ್ರೀ ಕಣ್ಣೀರಿಟ್ಟಿದ್ದಾರೆ.

ಶ್ರೀಗಳು ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿರಹಟ್ಟಿಯ ಈ ಮಠ ಕರ್ನಾಟಕದಲ್ಲಿ 16 ನೇ ಶತಮಾನದಿಂದಲೂ ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ.

English summary
Shirahatti Swamiji Emotion For Shirahtti Mutt Fair Canceled due to coronavirus lockdown. video viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X