ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಗದಗದಲ್ಲಿ ಪುಡಿ ರೌಡಿ ಅಟ್ಟಹಾಸ: ಆಟೋ ಚಾಲಕರಿಂದ ಹಫ್ತಾ ವಸೂಲಿ

|
Google Oneindia Kannada News

ಗದಗ, ಜುಲೈ 14: ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ನಂತರ ಜನಜೀವನ ಮತ್ತೆ ಹಳಿಗೆ ಮರುಳುತ್ತದೆ. ಜನರು ಕೆಲಸಕ್ಕೆ ಮರಳಿ ಮತ್ತೆ ತಮ್ಮ ಜೀವನ ಕಟ್ಟಿಕೊಳ್ಳುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಆಟೋ ಓಡಿಸಿ ತಮ್ಮ ಪ್ರತಿದಿನದ ಜೀವನ ನಡೆಸುತ್ತಿರುವ ಚಾಲಕರಿಗೆ ವ್ಯಕ್ತಿಯೋರ್ವ ಧಮ್ಕಿ ಹಾಕಿ ಹಫ್ತಾ ವಸೂಲಿ ಮಾಡುತ್ತಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

Recommended Video

ಗದಗದಲ್ಲಿ ಪುಡಿ ರೌಡಿಯ ಅಟ್ಟಹಾಸ-ಆಟೋ ಚಾಲಕರಿಗೆ ಹಫ್ತಾ ನೀಡುವಂತೆ ಧಮ್ಕಿ..!

ಪ್ರತಿದಿನ ದುಡಿದು ತಿನ್ನುವ ಆಟೋ ಚಾಲಕರಿಗೆ ಧಮ್ಕಿ ಹಾಕುವ ಪುಡಿ ರೌಡಿ ವಿರುದ್ಧ ಆಟೋ ಚಾಲಕರು ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ.

 Gadag: Rowdy Collecting Haftha From Auto Drivers; Filed Complaint

ಈ ಬಗ್ಗೆ ಮಾತನಾಡಿದ ಗದಗ ಆಟೋ ಚಾಲಕ ಬಸವರಾಜ, "ಆಟೋ ಅಡ್ಡಗಟ್ಟಿ, ಇಲ್ಲಿ ಯಾರೂ ಓಡಾಡುವ ಹಾಗಿಲ್ಲ ಎಂದು ಬೈದಿದ್ದಾನೆ. ಹಾಗೆಲ್ಲ ಬೈಯಬೇಡ ಎಂದಿದ್ದಕ್ಕೆ, ನಿನ್ನ ಆಟೋದಲ್ಲಿ ಹಾಡು ಹಾಕು ಎಂದ. ನಾನು ಹಾಕುವುದಿಲ್ಲ ಎಂದಿದಕ್ಕೆ ಸುಮ್ಮನೆ ಹೋದೆ. ನನಗೆ ಒಂದು ಬಾಡಿಗೆ ಸಿಕ್ಕಿದೆ ಎಂದು ಹೋದೆ.''

"ನಂತರ ಒಂದು ಚಹಾದ ಅಂಗಡಿ ಹತ್ತಿರ ಹೋಗಿ, ನಾನು ಬಂದಾಗ ಅಂಗಡಿ ಬಂದ್ ಮಾಡಬೇಕು ಎಂದು ಗದರಿಸಿದ. ಮತ್ತೆ ನಮ್ಮ ಮೂರು ಆಟೋಗಳಿಗೆ ಕಲ್ಲು ಎಸೆಯುತ್ತೇನೆ ಎಂದು ಹೇಳಿದ. ನಮ್ಮ ಆಟೋಗಳ ಮೂರು ಬದಲಿ ಚಕ್ರಗಳು (ಸ್ಟೇಪ್ನಿ) ಕಳವು ಆಗಿವೆ. ಅವನೇ ಮಾಡಿರಬಹುದು,'' ಎಂದು ಆಟೋ ಚಾಲಕ ಬಸವರಾಜ ಆರೋಪಿಸಿದ್ದಾನೆ.

ಗದಗ ನಗರ ನಿವಾಸಿ ರೋಹಿತ್ ಕಟ್ಟೀಮನಿ ಏರಿಯಾದಲ್ಲಿ ಪುಂಡಾಟಿಕೆ ಮಾಡುತ್ತಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಗದಗ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐಗೆ ಆಟೋ ಚಾಲಕರು ದೂರು ನೀಡಿದ್ದಾರೆ.

English summary
Rowdy collecting haftha from auto drivers, the incident happened in Gadag city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X