ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವಿಲು ತೀರ್ಥ ಡ್ಯಾಂನಿಂದ 12,500 ಕ್ಯೂಸೆಕ್ ನೀರು ಬಿಡುಗಡೆ: ಗದಗ ಜಿಲ್ಲೆಗೆ ಪ್ರವಾಹ ಭೀತಿ

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಸೆಪ್ಟೆಂಬರ್‌, 13: ಮಳೆ ಕಡಿಮೆ ಆಯ್ತು ಅನ್ನುವಷ್ಟರಲ್ಲೇ ಇದೀಗ ಜಿಲ್ಲೆಯ ಜನರಿಗೆ ಮಲಪ್ರಭಾ ‌ನದಿಯ ಪ್ರವಾಹದ ಭೀತಿ ಶುರು ಆಗಿದೆ. ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಮಳೆರಾಯನ ಅಬ್ಬರ ಹೆಚ್ಚಾಗಿದ್ದರಿಂದ ಸವದತ್ತಿ ಬಳಿಯ ನವಿಲು ತೀರ್ಥ ಡ್ಯಾಂ ಸಂಪೂರ್ಣವಾಗಿ ಭರ್ತಿ ಆಗಿದೆ.

ಹೀಗಾಗಿ ಜಲಾಶಯಕ್ಕೆ ಇನ್ನೂ ನೀರು ಹರಿದು ಬರುತ್ತಿರುವುದರಿಂದ, ಡ್ಯಾಂನಿಂದ ಮಲಪ್ರಭಾ ನದಿಗೆ ಒಂದೇ ಬಾರಿಗೆ 12,500 ಕ್ಯೂಸೆಕ್‌ ನೀರು ಹರಿಬಿಟ್ಟಿದ್ದಾರೆ. ಪರಿಣಾಮ ಗದಗ ಜಿಲ್ಲೆಯ ನರಗುಂದ ತಾಲೂಕು ಮತ್ತು ರೋಣ ತಾಲೂಕಿನ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹದ ಭೀತಿಯಲ್ಲಿವೆ. ಅದರಲ್ಲೂ ಗದಗ ಜಿಲ್ಲೆಯ ಆರಂಭಿಕ ಹಳ್ಳಿಗಳಾದ ನರಗುಂದ ತಾಲೂಕಿನ ಲಖಮಾಪುರ, ವಾಸನ, ಶಿರೋಳ, ಬೆಳ್ಳೇರಿ, ಕೊಣ್ಣೂರ, ಬೂದಿಹಾಳ, ಕಲ್ಲಾಪೂರ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಜೊತೆಗೆ ಡಂಗೂರ ಸಾರುವ ಮೂಲಕ ನದಿಗೆ ನೀರು ಬಿಟ್ಟಿದ್ದು, ಜನ,‌ ಜಾನುವಾರುಗಳು ನದಿ ತೀರಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಗದಗ; ಮಳೆ ಆರ್ಭಟಕ್ಕೆ 40 ಮನೆಗಳು ಜಲಾವೃತಗದಗ; ಮಳೆ ಆರ್ಭಟಕ್ಕೆ 40 ಮನೆಗಳು ಜಲಾವೃತ

ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಮಲಪ್ರಭಾ
ಇನ್ನು ಇತ್ತ ಲಖಮಾಪುರ ಗ್ರಾಮದಲ್ಲಿ ಈಗಾಗಲೇ ನೀರು ಸ್ವಲ್ಪ ಪ್ರಮಾಣದಲ್ಲಿ ಆವರಿಸಿಬಿಟ್ಟಿದೆ. ಗ್ರಾಮದಲ್ಲಿನ ಸುಮಾರು ಮೂರ್ನಾಲ್ಕು ಮನೆಗಳು ಜಲಾವೃತವಾಗಿವೆ. ನದಿಯ ನೀರು ಅಪಾಯದ ಮಟ್ಟದಲ್ಲಿ ಹರಿದು ಬರದತಿದ್ದು, ತಾಲೂಕು ಆಡಳಿತ ಮುಂಜಾಗ್ರತೆಗಾಗಿ ಗಂಜಿಕೇಂದ್ರ ತೆರೆಯಲು ನಿರ್ಧರಿಸಿದೆ. ಕೆಲವರು ಜಾನುವಾರುಗಳನ್ನು ಹೊಡೆದುಕೊಂಡು ನದಿ ನೀರು ಬಾರದೆ ಇರುವ ಜಮೀನುಗಳ ಬಳಿ ಹೋಗಿ ವಾಸ ಮಾಡಲು ನಿರ್ಧಾರ ಮಾಡಿದ್ದಾರೆ. ಗ್ರಾಮದ ಬಳಿಯ ಜಮೀನುಗಳಲ್ಲಿ ನೀರು ಹೊಕ್ಕಿದ್ದು, ಕಬ್ಬು, ಸೂರ್ಯಕಾಂತಿ, ಮೆಕ್ಕೆಜೋಳ ಸಂಪೂರ್ಣಾ ಜಲಾವೃತವಾಗಿವೆ.

Release 12,500 cusecs of water from Navilu Tirtha Dam to Malaprabha River; Flood threat in Gadag district

ಜನರಿಗೆ ಮತ್ತೊಮ್ಮೆ ನೆರೆ ಭೀತಿ
ವರ್ಷದ ಹಿಂದಷ್ಟೆ ಪ್ರವಾಹ ಭೀತಿ ಅನುಭವಿಸಿದ್ದ ಜಿಲ್ಲೆಯ ಜನರಿಗೆ ಉಕ್ಕಿ ಹರಿಯುತ್ತಿರುವ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ಮತ್ತೊಮ್ಮೆ ನೆರೆ ಭೀತಿ ಸೃಷ್ಟಿಸಿದೆ. ಸತತವಾಗಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದರಿಂದ ಪಶ್ಚಿಮ ಘಟ್ಟ ಸಹಿತ ಉತ್ತರ ಕರ್ನಾಟಕ ಭಾಗದಲ್ಲಿರುವ ಬೆಣ್ಣೆಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಮತ್ತೊಂದೆಡೆ ನವಿಲುತೀರ್ಥ ಜಲಾಶಯ ಈಗಾಗಲೇ ಭರ್ತಿ ಆಗುವ ಪ್ರಮಾಣದಲ್ಲಿದ್ದು, ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಸಂದರ್ಭದಲ್ಲೂ ಡ್ಯಾಂನಿಂದ ನೀರು ಹೊರಬಿಡಲಾಗುವುದು ಎಂದು ಡ್ಯಾಂ ಅಧಿಕಾರಿಗಳು ಸೂಚನೆ ನೀಡಿದ್ದರು. ಇದರಿಂದ ನದಿ ಪಾತ್ರದ ಗ್ರಾಮಸ್ಥರು ಆತಂಕ್ಕೆ ಒಳಗಾಗಿದ್ದರು.

ಸದ್ಯ ಧಾರವಾಡ ಮತ್ತು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಣ್ಣೆಹಳ್ಳ ರಭಸವಾಗಿ ಹರಿದಿದ್ದು, ನರಗುಂದ ತಾಲೂಕಿನ ಯಾವಗಲ್ ಗ್ರಾಮದ ಸೇತುವೆಯೊಂದು ಜಲಾವೃತವಾಗಿತ್ತು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡು, ವಾಹನ ಸವಾರರು ಪರದಾಡಿದ್ದರು. ನರಗುಂದ ಮತ್ತು ರೋಣ ಸಂಪರ್ಕಿಸುವ ಈ ಸೇತುವೆ ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿತ್ತು. ಜೊತೆಗೆ ನೂರಾರು ಎಕರೆ ಬೆಳೆ ಸಹ ನೀರು ಜಲಾವೃತವಾಗಿವೆ.

Release 12,500 cusecs of water from Navilu Tirtha Dam to Malaprabha River; Flood threat in Gadag district

ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು
ಬೆಳಗಾವಿ ಜಿಲ್ಲೆ ಖಾನಾಪುರ ಪ್ರದೇಶದಲ್ಲಿ ನಿರಂತರ ಮಳೆ ಆಗುತ್ತಿರುವ ಕಾರಣ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಸದ್ಯ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಡ್ಯಾಂನಿಂದ ಇಂದು ಒಂದೇ ಬಾರಿಗೆ 12,500 ಕ್ಯೂಸೆಕ್ ನೀರು ಹೊರಬಿಡಲಾಗಿದೆ. 2079.50 ಅಡಿ ಎತ್ತರದ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದ್ದು, ನದಿಗೆ ನೀರು ಹರಿಬಿಡಲಾಗಿದೆ. ನದಿ ಪಾತ್ರದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಡ್ಯಾಂ ಅಧಿಕಾರಿಗಳು ಸಂದೇಶ ರವಾನಿಸಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಸಿದೆ.

ನದಿ ತೀರದ ಜನರಿಗೆ ಸಂಕಷ್ಟ
ಕೆಲವು ದಿನಗಳ ಹಿಂದೆಯಷ್ಟೇ ಬೆಣ್ಣೆಹಳ್ಳ ಉಕ್ಕಿ ಹರಿದ ಕಾರಣದಿಂದ ನರಗುಂದ ಮತ್ತು ರೋಣ ತಾಲೂಕಿನ ಯಾವಗಲ್, ಹದ್ಲಿ, ಖಾನಾಪುರ, ಗಂಗಾಪುರ, ಮಾಡವಾಳ, ಅಸೂಟಿ ಗ್ರಾಮಗಳು ಸಂಕಷ್ಟ ಎದುರಿಸಿದ್ದವು. ಇದರ ಜೊತೆಗೆ ಮಲಪ್ರಭಾ ನದಿಯೂ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಮೆಣಸಗಿ, ಹೊಳೆ ಆಲೂರ, ಶಿರೋಳ, ಕೊಣ್ಣೂರು ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳು ಮೊದಲ ಹಂತದಲ್ಲಿಯೇ ನೆರೆಗೆ ತುತ್ತಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ನವಿಲುತೀರ್ಥ ಜಲಾಶಯದ ಅಧಿಕಾರಿಗಳ ಜೊತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ. ಒಳಹರಿವು ಆಧರಿಸಿ ಇಂದು ನೀರನ್ನು ಹೊರಬಿಟ್ಟಿದ್ದಾರೆ.

English summary
Navilu Theertha Dam is full filled, 12,500 cusecs of water released to Malaprabha river. flood fear started in Gadag, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X