ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ: ಮಳೆ ನೀರಿನ ಜೊತೆಗೆ ಮನೆಗೆ ನುಗ್ಗಿದ ಚರಂಡಿ ನೀರು!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಗದಗ, ಮೇ 20: ಜಿಲ್ಲೆಯಲ್ಲಿ ಮಳೆ ಅವಾಂತರ ಸೃಷ್ಟಿಸಿಯಾಗಿದೆ. ನಗರದ ಗಂಗಿಮಡಿ ಬಡಾವಣೆಯ ಅನೇಕ‌ ಮನೆಗಳಿಗೆ ಮಳೆ ನೀರಿನ ಜೊತೆಗೆ ಚರಂಡಿ ನೀರು ನುಗ್ಗಿದೆ. ಬಡಾವಣೆ ಹಿಂಭಾಗದ ಡ್ರೈನೇಜ್ ಛೇಂಬರ್ ನಿಂದ ನೀರು ಹರಿದು ಮನೆಗಳಿಗೆ ನುಗ್ಗಿದೆ.

ರಾತ್ರಿ 10 ಗಂಟೆಯಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆಗಳಿಗೆ ನೀರು ನುಗ್ಗಲಾರಂಭಿಸಿತು. ಇದರಿಂದಾಗಿ ಜನರು ನಿದ್ದೆ ಇಲ್ಲದೆ, ಜಾಗರಣೆ ಮಾಡುವ ಪರಿಸ್ಥಿತಿ ಎದುರಾಗಿತ್ತು. ಮನೆಯಲ್ಲಿ ಹೊಕ್ಕ ನೀರನ್ನು ಬುಟ್ಟಿಗಳ ಸಹಾಯದಿಂದ ಹೊರ ಹಾಕುವ ಪ್ರಯತ್ನ ಮಾಡಿದರು. ಅದು ಕೂಡ ವ್ಯರ್ಥವಾಯಿತು.

Rainwater and Sewage Water flows to the home

ಕಾಲೋನಿಯ ಆಸ್ಮಾ ನದಾಫ್ ಎಂಬ ತುಂಬು ಗರ್ಭಿಣಿ, ಮಧ್ಯಾಹ್ನವಾದರೂ ಉಪಾಹಾರ ಸೇವಿಸದೇ ಹಾಗೇ ಕೂತ ದೃಶ್ಯ ಮನಕಲಕುವಂತಿತ್ತು. ಕುಸುಗಲ್‌ನಿಂದ ಹೆರಿಗೆಗಾಗಿ ತವರು ಮನೆಗೆ ಆಸ್ಮಾ ಬಂದಿದ್ರು. ನಿನ್ನೆ ಏಕಾಏಕಿ ಮನೆಗೆ ನೀರು ನುಗ್ಗಿದ ಪರಿಣಾಮ ಆಸ್ಮಾ ರಸ್ತೆಯಲ್ಲೇ ಕೂತಿದ್ದರು. ರಾತ್ರಿಯಿಂದ ಗರ್ಭಿಣಿಯರು, ವೃದ್ಧರು, ಮಕ್ಕಳು, ಮಹಿಳೆಯರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಮನೆಗೆ ನೀರು ನುಗ್ಗಿದ್ದ ಪರಿಣಾಮ ಮನೆಯ ಸಾಮಗ್ರಿಗಳು ತೇವ ಆಗಿವೆ. ಬೆಳಗಿನ ಉಪಹಾರಕ್ಕೂ ಒಲೆ ಹೊತ್ತಿಸಲು ಸಾಧ್ಯವಾಗಿರಲಿಲ್ಲ.

Rainwater and Sewage Water flows to the home

ಅವೈಜ್ಞಾನಿಕ ಡ್ರೈನೇಜ್ ಕಾಮಗಾರಿಯಿಂದ ಅನೇಕ‌ ಮನೆಗಳಿಗೆ ನೀರು ನುಗ್ಗುತ್ತಿದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ವೃದ್ಧೆ ಒಬ್ಬರು ಮನೆಯಿಂದ ನೀರು ಹೊರಹಾಕುತ್ತಾ ಕಣ್ಣೀರಿಟ್ಟ ದೃಶ್ಯವೂ ಕಂಡು ಬಂತು. ಜೀವನೋಪಾಯಕ್ಕಾಗಿ ಅಂತಾ ಮನೆಯಲ್ಲೇ ಚಿಕ್ಕ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಮಳೆ ರೌದ್ರ ನರ್ತನಕ್ಕೆ ಅಂಗಡಿ ಸಾಮಗ್ರಿಗಳು ನೀರುಪಾಲಾಗಿವೆ. ಒಂಟಿ ವೃದ್ಧೆ ಅಸಹಾಯಕಳಾಗಿ ಕಣ್ಣೀರಿಡುತ್ತಾ ತನ್ನ ಅಳಲು ತೋಡಿಕೊಂಡರು.

Recommended Video

KL ರಾಹುಲ್ ವಿರುದ್ಧ ಸೋತಿದ್ದು ಸ್ವಲ್ಪವೂ ಬೇಸರ ಇಲ್ಲ ಅಂತಾ ಶ್ರೇಯಸ್ ಅಯ್ಯರ್ ಹೇಳಿದ್ಯಾಕೆ? | Oneindia Kannada

English summary
in gadaga district Many homes in the city's river bed are flooded with rainwater and rainwater. Water from the rear drainage chamber of the building has penetrated the houses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X