ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗದಲ್ಲಿ ಮಳೆ ಹಾನಿಗೀಡಾದ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ: ಎಚ್‌.ಕೆ ಪಾಟೀಲ್‌

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಆಗಸ್ಟ್‌, 07: ಗದಗದಲ್ಲಿ ಭಾರೀ ಮಳೆಯಿಂದ ಹಲವು ಮನೆಗಳು ಕುಸಿದು ಬಿದ್ದಿದ್ದು, ಹಾನಿಗೊಳಗಾದವರಿಗೆ ಇನ್ನು ಪರಿಹಾರ ಕೊಟ್ಟಿಲ್ಲ ಎಂದು ಶಾಸಕ ಹೆಚ್‌.ಕೆ ಪಾಟೀಲ್‌ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭೀಕರ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಬೆಳೆದ ಬೆಳೆಗಳೆಲ್ಲ ಜಲಾವೃತವಾಗಿ ಅನ್ನದಾತ ಭಾರೀ ತೊಂದರೆ ಅನುಭವಿಸುತ್ತಿದ್ದಾನೆ. ಆದರೆ ರಾಜ್ಯ ಸರ್ಕಾರ ಮಾತ್ರ ಪರಿಹಾರ ಕೊಡುವುದಕ್ಕೆ ಮುಂದಾಗುತ್ತಿಲ್ಲ ಎಂದು ಶಾಸಕ ಹೆಸ್‌.ಕೆ ಪಾಟೀಲ್‌ ಅಸಮಾಧಾನ ಹೊರಹಾಕಿದರು. ಗದಗನಲ್ಲಿ ಮಾತನಾಡಿದ ಅವರು ಬೆಳೆದು ನಿಂತ ಬೆಳೆ ನೆಲಕಚ್ಚಿವೆ. ಬೆಳೆ ಪರಿಹಾರವನ್ನ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಗದಗ; ಶ್ರಾವಣ ಶನಿವಾರ ಹನುಮ ಮೂರ್ತಿ ಕಳ್ಳತನ ಗದಗ; ಶ್ರಾವಣ ಶನಿವಾರ ಹನುಮ ಮೂರ್ತಿ ಕಳ್ಳತನ

'ಪರಿಹಾರದ ವಿಷಯದಲ್ಲಿ ಸರ್ಕಾರ ಗಪ್ ಚುಪ್'

ಇನ್ನು ಗದಗ ನಗರದ ಬೆಟಗೇರಿ ಭಾಗದಲ್ಲಿ ನಿರಂತರವಾಗಿ ಮಳೆ ಸುರಿದು ಹಲವು ಮನೆಗಳು ಕುಸಿದು ಬಿದ್ದಿವೆ. ಆದರೆ ಹತ್ತು ದಿನದ ಹಿಂದೆ ಮಳೆಯಿಂದಾಗಿ ಹಾನಿಗೊಳಗಾದವರಿಗೆ ಇನ್ನೂ ಪರಿಹಾರದ ಹಣ ಮುಟ್ಟಿಲ್ಲ. ಬಿದ್ದ ಮನೆಗಳಿಗೆ ಪರಿಹಾರ ನೀಡದೇ ಸರ್ಕಾರ ಗಪ್ ಚುಪ್ ಆಗಿದೆ. ತಕ್ಷಣ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಗೆಯೇ ‌ಕಿತ್ತು ಹೋಗಿರುವ ರಸ್ತೆಗಳನ್ನು ದುರಸ್ತಿ ಮಾಡಿಸಿ. ರಸ್ತೆಗಳು ಗುಂಡಿ ಬಿದ್ದಿದ್ದು, ವಾಹವ ಸವಾರರು ಪರದಾಡುವಂತೆ ಆಗಿದೆ. ತಕ್ಷಣ ಎಲ್ಲಾ ಕಡೆ ರಸ್ತೆ ರಿಪೇರಿ ಕೆಲಸವನ್ನು ಮಾಡಿಸಬೇಕು. ಹದಗೆಟ್ಡ ರಸ್ತೆಗಳ ಬಗ್ಗೆ ಜನ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಗದಗ ನಗರದಲ್ಲೂ ರಸ್ತೆ ಪಾಟ್ ಹೋಲ್ ಸಮಸ್ಯೆ ಇದೆ. ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ, ಸೋಮವಾರದಿಂದ ಕೆಲಸ ಆರಂಭವಾಗುತ್ತದೆ ಎಂದರು.

Rain Damaged Houses in Gadag not Received Compensation: HK Patil

ವಯಸ್ಸಿನ ಬಗ್ಗೆ ತಕರಾರು ಯಾಕೆ?:

ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯನವರ ವಯಸ್ಸಿನ ಚರ್ಚೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಿದ್ಧರಾಮಯ್ಯನವರಿಗೆ ವಯಸ್ಸು ಎಷ್ಟಾದರು ಇರಲಿ ತಕರಾರು ಯಾಕೆ? ಎಂದು ಕಿಡಿಕಾರಿದರು. ಸಿದ್ದರಾಮಯ್ಯನವರೇ ನನಗೆ 75 ವಯಸ್ಸು ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹುಟ್ಟಿದ್ದ ದಿನಾಂಕ ನಮ್ಮ ಅಪ್ಪ, ಅಮ್ಮನಿಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ ಟೀಚರ್ ದಾಖಲಿಸಿದ್ದು ಎಂದು ಅವರೇ ಹೇಳಿಕೊಂಡಿದ್ದಾರೆ. ಅವರ ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ, ನಾವು ಒಪ್ಪಿಕೊಂಡಿದ್ದೇವೆ. ಅವರ ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Rain Damaged Houses in Gadag not Received Compensation: HK Patil

ಸಿದ್ಧರಾಮೋತ್ಸವ ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವ ಕಾರ್ಯಕ್ರಮ ಆಗಿತ್ತು. ನಮ್ಮ ಪಕ್ಷಕ್ಕೆ ಇದರಿಂದ ದೊಡ್ಡ ಶಕ್ತಿ ಬಂದಿದೆ. ಈ ಕಾರಣಕ್ಕೆ ಬಹಳ ಜನ ಗಾಬರಿಯಾಗಿದ್ದಾರೆ. ಅದಕ್ಕೇನೂ ಮಾಡಲು ಆಗುವುದಿಲ್ಲ. ಜನರ ಪ್ರೀತಿಗಾಗಿ ಅಷ್ಟು ದೊಡ್ಡ ಕಾರ್ಯಕ್ರಮ ಆಗಿದೆ. ಅವರಿಗೆ 75 ವಯಸ್ಸು ಪೂರ್ಣಗೊಂಡಿಲ್ಲ ಎಂದು ಹುಡುಕುವುದರಲ್ಲಿ ಏನೂ ಲಾಭ ಇಲ್ಲ. ಅವರಿಗೆ 73, 74 ವಯಸ್ಸು ಎಂದು ಹುಡುಕಿದರೆ ಏನೂ ಲಾಭ ಇಲ್ಲ ಎಂದು ಗುಡುಗಿದರು.

English summary
MLA HK Patil expressed anger against government saying many houses collapsed due to heavy rain in Gadag and no compensation given to victims. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X