ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರ‍್ಯಾಂಬೋ'ಗೆ ಕಂಬನಿಯ ವಿದಾಯ ಹೇಳಿದ ಗದಗ ಪೊಲೀಸ್

|
Google Oneindia Kannada News

ಗದಗ, ಫೆಬ್ರವರಿ 04: 190 ವಿವಿಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಹಿಡಿಯಲು ಪೊಲೀಸರಿಗೆ ನೆರವಾಗಿದ್ದ ಪೊಲೀಸ್ ಇಲಾಖೆಯ 'ರ‍್ಯಾಂಬೋ'ಗೆ ಗದಗ ಪೊಲೀಸರು ಅಂತಿಮ ನಮನ ಸಲ್ಲಿಸಿದರು.

ಗದಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಮಾರು 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 'ರ‍್ಯಾಂಬೋ' ಭಾನುವಾರ ಹೃದಯಾಘಾತದಿಂದ ಮೃತಪಟ್ಟಿತ್ತು. ಹಲವಾರು ಅಪರಾಧ ಪ್ರಕರಣ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ವಾನಕ್ಕೆ ಕಂಬನಿಯ ವಿದಾಯ ಹೇಳಲಾಯಿತು.

ಗದಗ ಪೊಲೀಸರ ಪರಿಸರ ಪ್ರೇಮಕ್ಕೆ ಹೇಳಿ ಸಲಾಂ ಗದಗ ಪೊಲೀಸರ ಪರಿಸರ ಪ್ರೇಮಕ್ಕೆ ಹೇಳಿ ಸಲಾಂ

ನಗರದ ಹೆಲ್ತ್​ಕ್ಯಾಂಪ್​ನ ಪೊಲೀಸ್ ಮೈದಾನದಲ್ಲಿ ನೂತನ ಜಿಲ್ಲಾ ವರಿಷ್ಠಾಧಿಕಾರಿ ಯತೀಶ, ಡಿಎಸ್ಪಿ ಪ್ರಲ್ಹಾದ್ ಸೇರಿ ವಿವಿಧ ಅಧಿಕಾರಿಗಳು 'ರ‍್ಯಾಂಬೋ'ಗೆ ಪುಷ್ಪನಮನ ಸಲ್ಲಿಸಿದರು.

ವಾಡಿ-ಗದಗ ರೈಲು ಯೋಜನೆ, ರೈತರ ಜಮೀನಿಗೆ 17 ಲಕ್ಷ ಪರಿಹಾರವಾಡಿ-ಗದಗ ರೈಲು ಯೋಜನೆ, ರೈತರ ಜಮೀನಿಗೆ 17 ಲಕ್ಷ ಪರಿಹಾರ

Police Plays Tribute For Dog Rambo

ಕೆಲವು ಸಮಯ ಮೌನಾಚರಣೆ ಮಾಡಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವದೊಂದಿಗೆ 'ರ‍್ಯಾಂಬೋ' ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಗದಗ ಕಪ್ಪತಗುಡ್ಡ ಉಳಿಸಿ: ಸಿಎಂಗೆ ಪತ್ರ ಬರೆದು ಎಚ್ಚರಿಸಿದ ಎಚ್ಕೆ ಪಾಟೀಲ್ಗದಗ ಕಪ್ಪತಗುಡ್ಡ ಉಳಿಸಿ: ಸಿಎಂಗೆ ಪತ್ರ ಬರೆದು ಎಚ್ಚರಿಸಿದ ಎಚ್ಕೆ ಪಾಟೀಲ್

11 ವರ್ಷಗಳ ಅವಧಿಯಲ್ಲಿ ನರಸಾಪುರ ಕಳ್ಳತನ, ಶಿರಹಟ್ಟಿ ಕೊಲೆ ಪ್ರಕರಣ, ಶಿಗ್ಲಿ ಕಳ್ಳತನ, ಗಂಗಿಮಡಿ ಕಳ್ಳತನ, ಗದಗ ವಿವೇಕಾನಂದ ನಗರ ಕಳ್ಳತನ, ಮುಳುಗುಂದ, ಬೆಟಗೇರಿ ಕೊಲೆ ಪ್ರಕರಣ, ಗಜೇಂದ್ರಗಡ ಕಳ್ಳತನ ಸೇರಿದಂತೆ 190 ವಿವಿಧ ಪ್ರಕರಣಗಳಲ್ಲಿ 'ರ‍್ಯಾಂಬೋ' ಪೊಲೀಸರಿಗೆ ನೆರವಾಗಿತ್ತು.

ಕೊಲೆ, ದರೋಡೆ, ಕಳ್ಳತನದ 12 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ 'ರ‍್ಯಾಂಬೋ' ಪ್ರಮುಖ ಪಾತ್ರ ವಹಿಸಿತ್ತು ಎಂದು ಅಧಿಕಾರಿಗಳು ನೆನಪು ಮಾಡಿಕೊಂಡರು.

English summary
Gadag police tribute for dog Rambo that work along with them for 11 years. Police dog help the officials to solve 190 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X