ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ; ಪಬ್ಜಿ ಆಡಬೇಡ ಎಂದು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಯುವಕ ಆತ್ಮಹತ್ಯೆ

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಅಕ್ಟೋಬರ್ 1: ಆನ್​​ಲೈನ್ ಕ್ಲಾಸ್ ಎಂದು ಹೇಳಿಕೊಂಡು ಪಬ್ಜಿ ಗೇಮ್ ಆಡುತ್ತಿದ್ದ ಯುವಕನಿಗೆ, ಪೋಷಕರು ಬುದ್ಧಿ ಹೇಳಿ ಮೊಬೈಲ್ ಕಸಿದುಕೊಂಡಿದ್ದಕ್ಕೆ ಬೇಸರಗೊಂಡು ಆತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಇಂದು ನಡೆದಿದೆ.

ಪಟ್ಟಣದ ಹಿರೆಪೇಟೆ ನಿವಾಸಿ ಕಾರ್ತಿಕ್ ಬುಲಿ (17) ಎಂಬ ಯುವಕ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದ್ವಿತೀಯ ಪಿಯುಸಿ ಓದುತ್ತಿದ್ದ ಕಾರ್ತಿಕ್, ಯಾವಾಗಲೂ ಪಬ್ಜಿ ಗೇಮ್​ ಆಡುತ್ತಿದ್ದ. ಆನ್​ಲೈನ್ ಕ್ಲಾಸ್ ಎಂದು ಹೇಳಿಕೊಂಡು ಯಾವಾಗಲೂ ಮೊಬೈಲ್ ಹಿಡಿದು ಆಟ ಆಡುತ್ತಲಿದ್ದ. ಕಾರ್ತಿಕ್ ಈ ರೀತಿ ಆಟ ಆಡುವುದನ್ನು ಗಮನಿಸಿದ ಪೋಷಕರು ಆಟ ಆಡುವುದನ್ನು ಬಿಟ್ಟು ಸರಿಯಾಗಿ ಓದು ಎಂದು ಬೈದು ಬುದ್ಧಿ ಮಾತು ಹೇಳಿ ಆತನಿಂದ ಮೊಬೈಲ್ ಕಸಿದುಕೊಂಡಿದ್ದಾರೆ.

ಪಬ್‌ಜಿ ಆಡಲು ಅಜ್ಜನ ಖಾತೆಯಿಂದಲೇ 2.3 ಲಕ್ಷ ರೂ. ಎಗರಿಸಿದ ಮೊಮ್ಮಗಪಬ್‌ಜಿ ಆಡಲು ಅಜ್ಜನ ಖಾತೆಯಿಂದಲೇ 2.3 ಲಕ್ಷ ರೂ. ಎಗರಿಸಿದ ಮೊಮ್ಮಗ

ಆನಂತರ ಕಾರ್ತಿಕ್, ಪೋಷಕರನ್ನು ಮೊಬೈಲ್ ವಾಪಸ್ ಕೊಡುವಂತೆ ಕೇಳಿಕೊಂಡಿದ್ದಾನೆ. ಮೊಬೈಲ್​ ಕೊಡದ ಹಿನ್ನೆಲೆ‌ಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣ ಹೋಗಿದೆ.

Gadag: Parents Scold For Playing Pubg Game Young Man Committed Suicide

ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆಗೆ ನಡೆಸಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

English summary
A young man committed suicide today in the town of Gajendragada in Gadag for not getting mobile phone from his parents
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X