ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಹಾರಕ್ಕೆ ಬಂದರು, ಹೋಟೆಲ್‌ ಬಾಲ ಕಾರ್ಮಿಕನನ್ನು ರಕ್ಷಿಸಿದರು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಗದಗ, ಮೇ27: ಗದಗ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಒಂದಾದ ಶಿವಾನಿ ವೆಜ್‌ನಲ್ಲಿ ಬಾಲ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ. ಹೋಟೆಲ್‌ಗೆ ಉಪಹಾರ ಸೇವಿಸಲು ಬಂದಿದ್ದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಅಪ್ರಾಪ್ತ ಬಾಲಕ ಸರ್ವ್ ಮಾಡಲು ಬಂದಿದ್ದು ನೋಡಿ ಕಾರ್ಯಾಚರಣೆ ನಡೆಸಿದರು.

ಕಚೇರಿ ಕೆಲಸದ ಮಧ್ಯೆ ಮಕ್ಕಳ ರಕ್ಷಣಾ ಘಟಕದ ಡಿಸಿಪಿಒ ಅನುಪಮಾ ಸಿಬ್ಬಂದಿಯೊಂದಿಗೆ ಉಪಹಾರ ಸೇವಿಸಲು ಹೋಟೆಲ್‌ಗೆ ಬಂದಿದ್ದರು. ಈ ವೇಳೆ ಟೇಬಲ್‌ಗೆ ಬಾಲಕನೋರ್ವ ಸರ್ವ್ ಮಾಡಿದ್ದು, ಅವನನ್ನು ವಿಚಾರಿಸಿದಾಗ 15 ವರ್ಷ ಎಂದು ತಿಳಿದು ಬಂದಿದೆ‌.

ಕೂಡಲೇ ವಿಷಯವನ್ನು ಕಾರ್ಮಿಕರ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಕಾರ್ಮಿಕ ಇನ್ಸ್‌ಪೆಕ್ಟರ್ ಗಿರೀಶ್ ಬಂಕದಮನಿ, ಬಾಲ ಕಾರ್ಮಿಕರ ಯೋಜನಾ ನಿರ್ದೇಶಕ ಸಂದೇಶ ಪಾಟೀಲ ಸ್ಥಳಕ್ಕೆ ಬಂದರು.

Officers Rescued Child labour Who Serving As Hotel Server

ಹೋಟೆಲ್ ಮ್ಯಾನೇಜರ್, ಬಾಲಕನಿಂದ ಮಕ್ಕಳ ಘಟಕ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ ಮಾಹಿತಿ ಸಂಗ್ರಹ ಮಾಡಿದೆ. ಅಲ್ಲದೇ ಬಾಲಕನ್ನು ಶಾಲೆಗೆ ಸೇರಿಸಿ ದಾಖಲಾತಿಗಳನ್ನು ಒದಗಿಸುವಂತೆ ತಾಕೀತು ಮಾಡಿದರು.

ಅಣ್ಣನನ್ನು ಭೇಟಿಯಾಗಲು ಬಂದಿದ್ದ; ಧಾರವಾಡ ಮೂಲದ 15 ವರ್ಷದ ಬಾಲಕ ಕಳೆದ ದಿನಗಳಿಂದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಹೋಟೆಲ್‌ನಲ್ಲಿ ಬಾಲಕ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Officers Rescued Child labour Who Serving As Hotel Server

ಆದರೆ ಅಧಿಕಾರಿಗಳ ಎದುರು ಹೋಟೆಲ್ ಮ್ಯಾನೇಜರ್ ನಮ್ಮಲ್ಲಿ ಧಾರವಾಡ ಮೂಲದ ಬಾಲು ಎಂಬ ವ್ಯಕ್ತಿ ಕೆಲಸ ಮಾಡುತ್ತಿದ್ದ. ಆತನ ಸಹೋದರನಾಗಿರೋ ಈ ಬಾಲಕ ಅಣ್ಣನ ಭೇಟಿಗೆ ಹೋಟೆಲ್ ಗೆ ಬಂದಿದ್ದ ಎಂದು ಹೇಳಿದ್ದಾರೆ.

ಹೋಟೆಲ್ ಸಿಬ್ಬಂದಿ ಹೇಳುವ ಪ್ರಕಾರ ಬಾಲಕ ಅಣ್ಣನನ್ನು ನೋಡುವುದಕ್ಕೆ ಬಂದಿದ್ದ. ಅಣ್ಣ ಹೊರಗಡೆ ಹೋಗಿದ್ದ ಎನ್ನುವ ಕಾರಣಕ್ಕೆ ಟೇಬಲ್‌ಗೆ ಸರ್ವಿಸ್ ಕೊಡುತ್ತಿದ್ದ. ಕೇವಲ ಎರಡು ದಿನಗಳಿಂದ ಬಾಲಕ ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ.ಹೋಟೆಲ್ ಸಿಬ್ಬಂದಿ ಬೇರೆ ಬೇರೆ ಹೇಳಿಕೆ ನೀಡಿ ಅಧಿಕಾರಿಗಳಿಗೆ ಗೊಂದಲ ಮೂಡಿಸಿದರು.

Officers Rescued Child labour Who Serving As Hotel Server

ದೊಡ್ಡ ಹೋಟೆಲ್‌ಗಳ ಪರಿಸ್ಥಿತಿಯೇ ಹೀಗಾದರೆ ಹಳ್ಳಿಗಳಲ್ಲಿ ಹೇಗಿರಬೇಡ?. ಅಧಿಕಾರಿಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಮೂಲಕ ಮಾಲೀಕರಿಗೆ ಖಡಕ್ ಸಂದೇಶ ನೀಡಬೇಕಾಗುತ್ತದೆ ಎಂಬ ಒತ್ತಾಯ ಕೇಳಿಬಂದಿದೆ.

Recommended Video

Rajnath Singh ಕೇಂದ್ರ ರಕ್ಷಣಾ ಸಚಿವರು ಕರ್ನಾಟಕದಲ್ಲಿ ಯೋಗ | OneIndia Kannada

English summary
Officers who come to hotel for Coffee break rescued child labour at Gadag hotel. Boy hand over to the family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X