ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತ ಮಠಕ್ಕೆ ಮುಸ್ಲಿಂ ಮಠಾಧೀಶ: ಗದಗಲ್ಲೊಂದು ಮಾದರಿ ಅಧ್ಯಾತ್ಮ

|
Google Oneindia Kannada News

ಗದಗ, ಫೆಬ್ರವರಿ 20: ಧರ್ಮಗಳ ನಡುವೆ ಕಂದಕಗಳು ಏಳುತ್ತಿರುವ ಪ್ರಸ್ತುತ ಸಮಾಜಿಕ ಕಾಲಘಟ್ಟದಲ್ಲಿ, ಧರ್ಮವನ್ನು ಮೀರಿ ನಿಂತು ಮನುಷ್ಯತ್ವ ಸಾರುವ ಘಟನೆಗಳು ಅಲ್ಲಲ್ಲಿ ವರದಿಗಳಾಗುತ್ತಿವೆ. ಅಂತಹುದೇ ಒಂದು ಘಟನೆ ಕರ್ನಾಟಕ ಮುಕುಟ ಗದಗದಲ್ಲಿ ನಡೆದಿದೆ.

ಗದಗದ ಅಸುಟ್ಟಿ ಹಳ್ಳಿಯ ಮುರುಘರಾಜೇಂದ್ರ ಕೋನೇಶ್ವರ ಶಾಂತಿಧಾಮ ಮಠಕ್ಕೆ ಮುಸ್ಲಿಂ ಯುವಕರೊಬ್ಬರನ್ನು ಮಠಾಧೀಶರಾಗಿ ಆಯ್ಕೆ ಮಾಡಲಾಗುತ್ತಿದೆ. ಶರೀಫ ರಹೀಮನ್‌ ಸಾಬ್ ಫೆಬ್ರವರಿ 26 ಕ್ಕೆ ಮುರುಘರಾಜೇಂದ್ರ ಮಠಕ್ಕೆ ಮಠಾಧೀಶರಾಗಿ ಪೀಠಾರೋಹಣ ಮಾಡಲಿದ್ದಾರೆ.

ಹಿಂದೂ ಮಗಳ ಮದುವೆಯನ್ನು ದೇವಸ್ಥಾನದಲ್ಲಿ ಮಾಡಿದ ಮುಸ್ಲಿಂ ದಂಪತಿಹಿಂದೂ ಮಗಳ ಮದುವೆಯನ್ನು ದೇವಸ್ಥಾನದಲ್ಲಿ ಮಾಡಿದ ಮುಸ್ಲಿಂ ದಂಪತಿ

ರಹೀಮನ್ಸ್ ಸಾಬ್ ಅವರು ಹಲವು ವರ್ಷಗಳಿಂದ ಮಠಪರಂಪರೆಯನ್ನು ಹತ್ತಿರದಿಂದ ಕಂಡವರಾಗಿದ್ದು, ಶಿಷ್ಯ ಪಂಪರೆಯನ್ನು ನಿಭಾಯಿಸಿದ್ದಾರೆ. ರಹೀಮನ್‌ ಸಾಬ್ ಅವರ ಕುಟುಂಬವು ಮುರುಘರಾಜೇಂದ್ರ ಮಠದ ಭಕ್ತರೇ ಆಗಿದ್ದರು.

ಮುರುಘರಾಜೇಂದ್ರ ಕೋನೇಶ್ವರ ಶಾಂತಿಧಾಮ ಮಠವು, 350 ವರ್ಷ ಇತಿಹಾಸವುಳ್ಳದ್ದಾಗಿದ್ದು, ಕೊರನೇಶ್ವರ ಸಂತಾನ ಮಠ ಕಾಜ್ಹುರಿಗೆ ಸಂಬಂಧಿಸಿದ್ದಾಗಿದೆ. ಈ ಮಠವು ಖ್ಯಾತ ಚಿತ್ರದುರ್ಗದ ಜಗದ್ಗುರು ಮುರುಗರಾಜೇಂದ್ರ ಮಠದ 361 ಮಠಗಳಲ್ಲಿ ಒಂದಾಗಿದೆ.

ಈಗಾಗಲೇ ವಿಧಿ-ವಿಧಾನ ಮುಗಿದಿದೆ

ಈಗಾಗಲೇ ವಿಧಿ-ವಿಧಾನ ಮುಗಿದಿದೆ

ಕ್ಹಾಜುರಿ ಮಠದ ಮರುಘರಾಜೇಂದ್ರ ಕೋನೇಶ್ವರ ಶಿವಯೋಗಿ ಅವರು ಈಗಾಗಲೇ ದಿವಾನ್ ರಹೀಮನ್ಸ್‌ ಸಾಬ್‌ ಗೆ ಕಳೆದ ವರ್ಷದ ನವೆಂಬರ್‌ನಲ್ಲಿಯೇ ದೀಕ್ಷೆ ನೀಡಿ, ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. 'ಆತ ಬಸವಣ್ಣನ ಅನುಯಾಯಿ, ಆತನಿಗೆ ಸಮಾಜವನ್ನು ಕಲ್ಯಾಣ ಮಾಡುವ ಆಕಾಂಕ್ಷಿ ಇದೆ, ನಾವು ಅದಕ್ಕೆ ಅನುವು ಮಾಡಿಕೊಟ್ಟಿದ್ದೇವೆ' ಎಂದು ಕೋನೇಶ್ವರ ಶಿವಯೋಗಿ ಹೇಳಿದ್ದಾರೆ.

ಲಿಂಗಾಯತ ಆಚರಣೆ, ವಿಚಾರಗಳ ತರಬೇತಿ

ಲಿಂಗಾಯತ ಆಚರಣೆ, ವಿಚಾರಗಳ ತರಬೇತಿ

ಕೆಲವಾರು ವರ್ಷಗಳಿಂದಲೂ ಆತನಿಗೆ ಲಿಂಗಾಯತ ಆಚರಣೆ, ವಿಚಾರಗಳ ಬಗ್ಗೆ ತರಬೇತಿ ನೀಡಿದ್ದೇವೆ. ಮಠದ ಪರಿಸರವನ್ನು ಹತ್ತಿರದಿಂದ ನೋಡಿರುವ ಶರೀಫ ರಹೀಮನ್‌ ಸಾಬ್ ಗೆ ಧಾರ್ಮಿಕ ವಿಧಿ ವಿಧಾನಗಳ ಅರಿವು ಸಾಕಷ್ಟಿದೆ, ಇಷ್ಟಲಿಂಗ ಧಾರಣೆ ಎಂಬುದು ವ್ಯಕ್ತಿ ಪ್ರಧಾನವಲ್ಲ, ತತ್ವ ಪ್ರಧಾನ ಶರೀಫರಿಗೆ ಬಸವ ತತ್ವದಲ್ಲಿ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

'ಮುಸ್ಲಿಮರ ಗೋರಿಗಳ ಮೇಲೆ ರಾಮ ಮಂದಿರ ಕಟ್ಟುತ್ತೀರಾ?''ಮುಸ್ಲಿಮರ ಗೋರಿಗಳ ಮೇಲೆ ರಾಮ ಮಂದಿರ ಕಟ್ಟುತ್ತೀರಾ?'

ಜಮೀನು ದಾನ ನೀಡಿದ್ದ ರಹೀಮನ್‌ ತಂದೆ

ಜಮೀನು ದಾನ ನೀಡಿದ್ದ ರಹೀಮನ್‌ ತಂದೆ

ಆಸುತಿ ಮಠಕ್ಕೆ ಶರೀಫ ರಹೀಮನ್‌ ಸಾಬ್ ಅವರ ತಂದೆ ದಿವಂಗತ ರಹೀಮ್‌ಸಾಬ್ ಮುಲ್ಲಾ ಅವರು ಎರಡು ಎಕರೆ ಭೂಮಿಯನ್ನು ದಾನವಾಗಿ ಕೊಟ್ಟಿದ್ದರು. ಅದೇ ಭೂಮಿಯಲ್ಲಿ ಮಠವನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ.

ರಹೀಮನ್‌ ಸಾಬ್‌ ಗೆ ಮದುವೆಯಾಗಿದೆ

ರಹೀಮನ್‌ ಸಾಬ್‌ ಗೆ ಮದುವೆಯಾಗಿದೆ

ಮಠಾಧೀಶರಾಗುತ್ತಿರುವ ಶರೀಫ ರಹೀಮನ್‌ ಸಾಬ್ ಅವರಿಗೆ ಮದುವೆಯಾಗಿದೆ. ಅವರಿಗೆ ಮೂರು ಜನ ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಾನೆ. ಕೋನೇಶ್ವರ ಶಿವಯೋಗಿ ಅವರು ಹೇಳುವ ಪ್ರಕಾರ, ಸಂಸಾರದಿಂದ ಸದ್ಗತಿಯಲ್ಲಿ ಲಿಂಗಾಯತ ಧರ್ಮವು ನಂಬಿಕೆ ಇಟ್ಟಿದೆ ಹಾಗಾಗಿ ಕುಟುಂಬಸ್ತ ವ್ಯಕ್ತಿ ಸ್ವಾಮೀಜಿ ಆಗಬಾರದು ಎಂಬುದೇನೂ ಇಲ್ಲ ಎಂದಿದ್ದಾರೆ.

ಸಂತ ಶಿಶುನಾಳ ಶರೀಫ ಹುಟ್ಟಿದ ಭೂಮಿ

ಸಂತ ಶಿಶುನಾಳ ಶರೀಫ ಹುಟ್ಟಿದ ಭೂಮಿ

ಫೆಬ್ರವರಿ 26 ರಂದು ಶರೀಫ ರಹೀಮನ್‌ ಸಾಬ್ ಅವರು ಮುರುಘರಾಜೇಂದ್ರ ಕೋನೇಶ್ವರ ಶಾಂತಿಧಾಮ ಮಠ ಮೊದಲ ಮುಸ್ಲಿಂ ಮಠಾಧೀಶರಾಗಿ ಪೀಠಾರೋಹಣ ಮಾಡಲಿದ್ದಾರೆ. ಸಂತ ಶಿಶುನಾಳ ಶರೀಫರಂತಹಾ ಸಂತ ಶ್ರೇಷ್ಟರನ್ನು ಕಂಡಿರುವ ಉತ್ತರ ಕರ್ನಾಟಕ ಭೂಮಿ ಮತ್ತೆ ಅಂತಹುದೇ ಒಂದು ಪ್ರಯತ್ನಕ್ಕೆ ಕೈ ಹಾಕಿದೆ. ಅದೂ ಭಾರತವೆಲ್ಲಾ ಧರ್ಮಗಳ ನಡುವೆ ಒಡೆದು ಹೋಗುತ್ತಿರುವಾಗ.

English summary
Lingayat mutt Muragarajendra Koneshwar Shantidham in Gadag to have its first Muslim pontiff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X