ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾದಾಯಿ ವಿವಾದ ಮತ್ತೆ ನರಗುಂದ ಬಂದ್

|
Google Oneindia Kannada News

ಗದಗ, ಜನವರಿ 3 : ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನರಗುಂದ ಬಂದ್ ಗೆ ಕರೆನೀಡಿದ್ದಾರೆ.

ಲೋಕಸಭೆಯಲ್ಲಿ ಮಹದಾಯಿ ರಣಕಹಳೆ ಊದಿದ ಮುದ್ದಹನುಮೇಗೌಡಲೋಕಸಭೆಯಲ್ಲಿ ಮಹದಾಯಿ ರಣಕಹಳೆ ಊದಿದ ಮುದ್ದಹನುಮೇಗೌಡ

ನರಗುಂದ ಬಂದ್ ಹಿನ್ನೆಲೆ ಕಾಂಗ್ರೆಸ್ ಶಾಸಕ ಬಿ.ಆರ್. ಯಾವಗಲ್ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಡಿವೈಎಸ್ ಪಿ ಗುರು ಮತ್ತೂರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರ ವಿರೋಧ ಮಧ್ಯೆಯೂ ಟೈಯರ್ ಗೆ ಬೆಂಕಿ ಹಚ್ಚಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಭದ್ರತೆಗಾಗಿ 3 ಡಿವೈಎಸ್ಪಿ, 10 ಸಿಪಿಐ, 14 ಪಿಎಸ್ ಐ, 29 ಎಎಸ್ ಐ, 4 ಕೆಎಸ್ ಆರ್ ಪಿ, 5 ಡಿಆರ್ ತುಕಡಿ, 120 ಪೊಲೀಸ್ ಹಾಗೂ 100 ಜನ ಹೋಂ ಗಾರ್ಡ್ಸ್ ನೇಮಕ ಮಾಡಲಾಗಿದೆ.

ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಬಿಜೆಪಿ ಕಾರ್ಯರ್ತರು ಪ್ರತಿಭಟನೆ ನಡೆಸುತ್ತಿದ್ದು ಇದರಿಂದ ಹುಬ್ಬಳ್ಳಿಯಿಂದ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಬಿಜೆಪಿ ಕಾರ್ಯಕರ್ತರು ಕೂಡ ನರಗುಂದದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ: ಪ್ರಧಾನಿಗೆ ಅಂಬಿ ಕೇಳಿದ ನಾಲ್ಕು ಪ್ರಶ್ನೆಗಳು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ: ಪ್ರಧಾನಿಗೆ ಅಂಬಿ ಕೇಳಿದ ನಾಲ್ಕು ಪ್ರಶ್ನೆಗಳು

Mahadayi row: Nargun bandh again

ಕಳೆದ ವಾರವಷ್ಟೇ ಮಹಾದಾಯಿ ಹೋರಾಟಗಾರ ವೀರೇಶ ಸೊರಬದಮಠ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಬೆಳಗ್ಗೆಯಿಂದಲೇ ನರಗುಂದ ಸಂಪೂರ್ಣ ಬಂದ್ ಆಗಿದೆ, ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಬಂದ್ ಹಿನ್ನೆಲೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಮಹದಾಯಿ:ಪರಿಕ್ಕರ್ ಗೆ ಬುದ್ಧಿ ಹೇಳುವಂತೆ ಶಾ ಮೊರೆ ಹೋದ BSYಮಹದಾಯಿ:ಪರಿಕ್ಕರ್ ಗೆ ಬುದ್ಧಿ ಹೇಳುವಂತೆ ಶಾ ಮೊರೆ ಹೋದ BSY

ನರಗುಂದದ ಕೋರ್ಟ್ ಸರ್ಕಲ್, ಶಿವಾಜಿ ವರ್ತುಲದಲ್ಲಿ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

English summary
Urging for resolve Mahadayi river dispute farmers have called for bandh again in Naragund on Wednesday and stalled at Hubli- sollapur national highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X