ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರಿಯುವ ನೀರಿನಲ್ಲಿ ಈಜಿ ವಿದ್ಯುತ್ ಸಂಪರ್ಕ ಸ್ಥಗಿತ: ನರಗುಂದದ ಕೆಇಬಿ ಸಿಬ್ಬಂದಿಗೆ ಶ್ಲಾಘನೆ

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಸೆಪ್ಟೆಂಬರ್‌, 14: ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೆಇಬಿ ಲೈನ್‌ಮ್ಯಾನ್ ಒಬ್ಬರು ಹರಿಯುವ ನೀರಿನಲ್ಲಿಯೇ ಈಜಿ, ಸಮಸ್ಯೆಯಿರುವ ಸ್ಥಳಕ್ಕೆ ತೆರಳಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಕೊಣ್ಣೂರ ಗ್ರಾಮದ ಬಳಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸುತ್ತಲಿನ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ.

ಈ ಸಂದರ್ಭದಲ್ಲಿ ಕೊಣ್ಣೂರ ಗ್ರಾಮಕ್ಕೆ ನೀರು ಪೂರೈಕೆಯ ಉದ್ದೇಶಕ್ಕೆ ವಿದ್ಯುತ್‌ ಸರಬರಾಜು ಮಾಡುವ ಟ್ರಾನ್ಸ್ ಫಾರ್ಮರ್‌ಗಳು ಮುಳುಗುವ ಸಂದರ್ಭ ಎದುರಾಗಿತ್ತು. ಅಲ್ಲದೇ ಪ್ರಸ್ತುತ ಟ್ರಾನ್ಸಫರ್ಮರ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅನಿವಾರ್ಯತೆ ಇತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಈ ಭಾಗದ ಲೈನ್‌ಮ್ಯಾನ್ ಮಂಜುನಾಥ್‌ ಕುಂಬಾರ, ಸುಮಾರು 30 ಅಡಿ ದೂರ ನೀರಿನಲ್ಲಿ ಈಜಿ ಸ್ಥಳಕ್ಕೆ ತಲುಪಿದರು. ಸೂಕ್ತ ಸಮಯದಲ್ಲಿ ಟ್ರಾನ್ಸಫರ್ಮರ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹಿಂದಿರುಗಿದರು. ಇದರಿಂದ ಮುಂದಿನ ಟ್ರಾನ್ಸ್‌ಫರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಇದರಿಂದ ನೀರು ಸರಬರಾಜಿನ ವ್ಯವಸ್ಥೆಗೆ ಯಾವುದೇ ತೊಂದರೆ ಆಗದಂತೆ ಅನುವು ಮಾಡಿದ್ದಾರೆ. ಮಂಜುನಾಥ್‌ ಅವರ ಸಾಹಸಕ್ಕೆ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

ಕೂಡಲೇ ಈ ಟ್ರಾನ್ಸಫರ್ಮರ್‌ನ ಸಂಪರ್ಕ ಕಡಿತಗೊಳಿಸದಿದ್ದರೆ, ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ತೊಂದರೆ ಆಗುವಂತಿತ್ತು. ಇದರ ಸಂಪರ್ಕ ಕಡಿತಗೊಳಿಸಿದಾಗ ಮುಂದಿನ ಟ್ರಾನ್ಸಫರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಪ್ರತಿ ಬಾರಿ ಮಳೆ ಹೆಚ್ಚಾಗಿ ನದಿ ಉಕ್ಕಿ ಹರಿದಾಗ ಈ ಸಮಸ್ಯೆ ಎದುರಾಗುತ್ತದೆ. ಆದರೆ ಸಾರ್ವಜನಿಕರಿಗೆ ಕುಡಿಯುವ ನೀರಿನ ಸರಬರಾಜಿಗೆ ತೊಂದರೆ ಆಗಬಾರದೆಂಬುದು ಇಲಾಖೆಯ ಕಳಕಳಿ ಆಗಿದೆ. ಹೀಗಾಗಿ ಈ ಅಪಾಯವನ್ನು ಎದುರಿಸಲು ತಯಾರಾಗಿದ್ದೆ ಎಂದು ಮಂಜುನಾಥ್ ತಿಳಿಸಿದ್ದಾರೆ.

Gadag: KEB staff swim and cut the power connection

ಮಳೆರಾಯನ ಆರ್ಭಟಕ್ಕೆ ಕುಸಿದ ಮನೆ
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕಡೆ ಮನೆಗಳು ಕುಸಿದು ಬೀಳುತ್ತಿವೆ‌. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ 15ನೇ ವಾರ್ಡ್‌ನಲ್ಲಿ ಮನೆಯೊಂದು ಕುಸಿದಿದೆ. ಹಿರೇಮಠ ಓಣಿಯ ನಿವಾಸಿ ಶರಣಪ್ಪ ಮಡಿವಾಳರ ಎಂಬುವರ ಮನೆ ಇದ್ದಕ್ಕಿದ್ದಂತೆ ಕುಸಿದಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಕುಟುಂಬ
ರಾತ್ರಿ ಊಟ ಮಾಡಿ ಕುಳಿತಿರುವಾಗ ಇದ್ದಕ್ಕಿದ್ದಂತೆ ಮನೆಯ ಗೋಡೆ ಕುಸಿದು ಬಿದ್ದಿದೆ. ನಿಂಗಪ್ಪ ಮಡಿವಾಳ ಅವರ ಅವರ ಮೇಲೆ ಬಲಗಡೆ ಭಾಗದ ಗೋಡೆಯು ಬಿದ್ದಿದ್ದು, ಪರಿಣಾಮ ಕಾಲು ಹಾಗೂ ತೊಡೆಯ ಭಾಗಕ್ಕೆ ಪೆಟ್ಟಾಗಿದೆ. ಮನೆಯಲ್ಲಿದ್ದ ವಯಸ್ಸಾದ ತಾಯಿ ಶಾಂತಮ್ಮ ಮಡಿವಾಳರ ಅವರು ಮಣ್ಣಿನಲ್ಲಿ ಸಿಲುಕಿದ್ದರು. ನಂತರ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದರು. ಮನೆ ಬಿದ್ದ ಶಬ್ಧಕ್ಕೆ ಹಾಗೂ ಕುಟುಂಬದ ಸದಸ್ಯರ ಕಿರುಚಾಟ ಕೇಳಿ ಓಡಿ ಬಂದ ಓಣಿಯ ನಿವಾಸಿಗಳು ತಕ್ಷಣವೇ ಮಣ್ಣಿನಲ್ಲಿ, ಗೋಡೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.

Gadag: KEB staff swim and cut the power connection

ಬಳಿಕ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಕುಸಿಯುವ ಸಂದರ್ಭದಲ್ಲಿ ಮನೆಯ ಸದಸ್ಯರು, ಮಕ್ಕಳು ಅಡುಗೆ ಮನೆಯಲ್ಲಿದ್ದ ಕಾರಣ ಯಾವುದೇ ತೊಂದರೆ ಆಗಿಲ್ಲ. ಭಾರಿ ಅನಾಹುತದ ತಪ್ಪಿದ್ದು, ಕುಟುಂಬಸ್ಥರು ಇನ್ನು ಭಯದಲ್ಲಿದ್ದಾರೆ. ಈ ಓಣಿಯಲ್ಲಿ ಇನ್ನು ನಾಲ್ಕೈದು ಮನೆಗಳ ಗೋಡೆ, ಮೇಲ್ಛಾವಣಿ ಹಾಗೂ ಮುಂದಿನ ಭಾಗದ ಗೋಡೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿವೆ. ಯಾವುದೇ ಸಂದರ್ಭದಲ್ಲಿ ಗೋಡೆಗಳು ಬೀಳುವ ಹಂತದಲ್ಲಿದ್ದು, ಇಲ್ಲಿನ ನಿವಾಸಿಗಳು ಭಯದಿಂದ ಜೀವನ ನಡೆಸುತ್ತಿದ್ದಾರೆ.

English summary
KEB staff Manjunath of Naragunda taluk, cut off electricity supply in swimming water. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X