ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಮುಸೌರ್ಹಾದತೆಯ ಹರಿಕಾರನಿಗೆ ಮುಖ್ಯಮಂತ್ರಿಗಳ ಅಂತಿಮ ನಮನ

|
Google Oneindia Kannada News

ಗದಗ, ಅಕ್ಟೋಬರ್ 22 : 'ತ್ರಿವಿಧ ದಾಸೋಹಿ, ಕೋಮು ಸೌಹಾರ್ದತೆಯ ಬೆಳವಣಿಗೆಯ ಹರಿಕಾರರಾಗಿದ್ದ ಗದುಗಿನ ತೋಂಟದಾರ್ಯಮಠದ ಡಾ. ಸಿದ್ದಲಿಂಗ ಸ್ವಾಮೀಜಿ ಅಗಲಿಕೆ ವಯೆಕ್ತಿಕವಾಗಿ ಸಹಜವಾಗಿ ದೊಡ್ಡಮಟ್ಟದಲ್ಲಿ ತಮಗೆ ಮತ್ತು ನಾಡಿಗೆ ಅಘಾತವಾಗಿದೆ. ಅವರ ಜೀವನ ಎಲ್ಲರಿಗೂ ಮಾದರಿ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಭಾನುವಾರ ಗದಗಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ ಗದಗ ಇದರ 19ನೇ ಪೀಠಾಧಿಪತಿಯಾಗಿದ್ದ ಡಾ. ತೋಂಟದ ಸಿದ್ದಲಿಂಗ ಸ್ವಾಮಿಗಳ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಗದಗ: ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿ ಇನ್ನಿಲ್ಲಗದಗ: ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿ ಇನ್ನಿಲ್ಲ

kumaraswamy

ಮಠದ 20ನೇ ಪೀಠಾಧಿಪತಿಯಾಗಿ ನೇಮಕಗೊಂಡ ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರನ್ನು ಗೌರವಿಸಿ, ಆಶೀರ್ವಾದ ಪಡೆದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತೋಂಟದಾರ್ಯ ಶ್ರೀಗಳ ಅಂತ್ಯಸಂಸ್ಕಾರ: ಹೆಚ್ಚಿನ ಭದ್ರತೆ ನಿಯೋಜನೆತೋಂಟದಾರ್ಯ ಶ್ರೀಗಳ ಅಂತ್ಯಸಂಸ್ಕಾರ: ಹೆಚ್ಚಿನ ಭದ್ರತೆ ನಿಯೋಜನೆ

ತೋಂಟದಾರ್ಯಮಠದ ಈಗಿನ ಉತ್ತರಾಧಿಕಾರಿಯಾಗಿರುವ ನಾಗನೂರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಠದ ಕ್ಷೇತ್ರದಿಂದಲೇ ತಾವು ಗ್ರಾಮವಾಸ್ತವ್ಯ ಕಾರ್ಯಕ್ರಮ ಆರಂಭಿಸಿದೆ. ತೋಂಟದ ಡಾ. ಸಿದ್ದಲಿಂಗ ಸ್ವಾಮೀಜಿ ಈ ಕಾರ್ಯ ಜನತೆಯ ಹತ್ತಿರಕ್ಕೆ ಹೋಗಿ ಬಡಜನರ ನೋವಿಗೆ ಧ್ವನಿಯಾಗುವ, ಪರಿಹಾರ ನೀಡುವ ಉತ್ತಮ ಪ್ರಯತ್ನವಾಗಿದೆ ಇದರಿಂದ ತಮಗೆ ಖುಷಿಯಾಗಿದೆ ಎಂದು ತಮ್ಮನ್ನು ಹುರಿದುಂಬಿಸಿದ್ದನ್ನು ಮುಖ್ಯಮಂತ್ರಿಗಳು ನೆನಪಿಸಿಕೊಂಡರು.

ಕನ್ನಡ ನಾಡಿನ ಬೆಳವಣಿಗೆಯಲ್ಲಿ ಹಾಗೂ ಶಿಕ್ಷಣ, ಸಾಮಾಜಿಕ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಿದ್ದಲಿಂಗ ಸ್ವಾಮೀಜಿ ನೀಡಿರುವ ಕೊಡುಗೆಗಳು ಬಹುಕಾಲ ನೆನಪಿಡುವಂತಹ ಕಾರ್ಯಗಳಾಗಿವೆ ಎಂದು ಹೇಳಿದ ಮುಖ್ಯಮಂತ್ರಿಗಳು, ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ನೆನಪಿನಲ್ಲಿ ಕೋಮು ಸೌಹಾರ್ದತೆ ಪ್ರಶಸ್ತಿ ನೀಡುವ ಚಿಂತನೆ ಇದೆ ಎಂದರು.

Tontadarya Mutt

ಸುತ್ತೂರು, ಆದಿಚುಂಚನಗಿರಿ ಸೇರಿದಂತೆ ವಿವಿಧ ಮಠಗಳ ಶ್ರೀಗಳು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗದಗ ಜಿಲ್ಲಾ ಪಂಚಾಯತಿ ಪ್ರಭಾರ ಅಧ್ಯಕ್ಷೆ ರೂಪಾ ಅಂಗಡಿ, ಸಂಸದ ಶಿವಕುಮಾರ ಉದಾಸಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
Karnataka Chief Minister H.D.Kumaraswamy paid lat tribute to Siddalinga Swamiji of Tontadarya Mutt Gadag, Who passed away following severe cardiac attack on October 20, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X