ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾತುಕತೆ ಮೂಲಕ ಮಹದಾಯಿ ವಿಚಾರ ಇತ್ಯರ್ಥ: ಮೋದಿ

|
Google Oneindia Kannada News

Recommended Video

ಗದಗದಲ್ಲಿ ಕೊನೆಗೂ ಮಹದಾಯಿ ಬಗ್ಗೆ ಮೌನ ಮುರಿದು ಮಾತಾಡಿದ ನರೇಂದ್ರ ಮೋದಿ | Oneindia Kannada

ಗದಗ, ಮೇ 5: ಮಹದಾಯಿ ವಿವಾದದ ಕುರಿತು ಇದುವರೆಗೂ ಮಾತನಾಡದ ಪ್ರಧಾನಿ ನರೇಂದ್ರ ಮೋದಿ, ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಗದಗದಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಮೋದಿ ಅವರು ಮಹದಾಯಿ ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಜತೆಗೆ ಕಾಂಗ್ರೆಸ್ಅನ್ನೂ ಕುಟುಕಿದರು.

In Pics : ಕರ್ನಾಟಕದಾದ್ಯಂತ ಬಿಜೆಪಿಯಿಂದ ಭರ್ಜರಿ ಪ್ರಚಾರ

ಮಾತಿನ ಆರಂಭದಲ್ಲಿ ಗದುಗಿನ ಶ್ರೀ ವೀರನಾರಾಯಣ, ಗಾನಯೋಗಿ ಪಂಚಾಕ್ಷರಿ ಗವಾಯಿ, ಸಂತ ಶಿಶುನಾಳ ಶರೀಫ, ಸ್ವಾತಂತ್ರ್ಯ ಹೋರಾಟಗಾರ ಮುಂಡರಗಿ ಭೀಮರಾಯ ಅವರನ್ನು ಮೋದಿ ನೆನಪಿಸಿಕೊಂಡರು.

ಗುಡುಗು ಮಿಂಚುಗಳ ನಡುವೆ ಮೋದಿ ಮಾತಿನ ಕಾಮನಬಿಲ್ಲು!ಗುಡುಗು ಮಿಂಚುಗಳ ನಡುವೆ ಮೋದಿ ಮಾತಿನ ಕಾಮನಬಿಲ್ಲು!

ಬೇರೆಲ್ಲ ರಾಜ್ಯಗಳಲ್ಲಿ ಸೋತಾಗ ಕಾಂಗ್ರೆಸ್‌ ಅಷ್ಟು ಕಂಗೆಟ್ಟಂತೆ ಕಂಡಿರಲಿಲ್ಲ. ಆದರೆ ಈಗ ಕರ್ನಾಟಕದಲ್ಲಿ ಸೋಲಲಿದೆ ಎಂಬುದು ಗೊತ್ತಾದಾಗ ಎಲ್ಲರೂ ಕಂಗಾಲಾಗಿದ್ದಾರೆ. ಏಕೆಂದರೆ ಸರ್ಕಾರದ ದುಡ್ಡು ಲೂಟಿ ಮಾಡಲು ಕಾಂಗ್ರೆಸ್‌ ಟ್ಯಾಂಕ್ ನಿರ್ಮಾಣ ಮಾಡಿದೆ. ಈ ಟ್ಯಾಂಕ್‌ನಲ್ಲಿನ ಸ್ವಲ್ಪ ಹಣ ಮಂತ್ರಿಗಳ ಮನೆಗೆ ಹೋಗುತ್ತಿದೆ. ಉಳಿದದ್ದು ದೆಹಲಿಗೆ ಹೋಗುತ್ತಿದೆ ಎಂದು ಮೋದಿ ಕಾಂಗ್ರೆಸ್‌ಅನ್ನು ಟೀಕಿಸಿದರು.

ಗದಗಿನ ಸುತ್ತಮುತ್ತ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಿರುವ ಹತ್ತಿ ಬೆಳೆಗೆ ಪೂರಕವಾಗುವಂತಹ ಜವಳಿ ನೀತಿ ಜಾರಿಗೆ ತರುವ ಮೂಲಕ ಹತ್ತಿ ಬೆಳೆಗಾರರ ಹಿತ ಕಾಯುವ ಭರವಸೆ ನೀಡಿದರು.

ಜೆಡಿಎಸ್ ಎಂದೂ ಸರ್ಕಾರ ಮಾಡುವುದಿಲ್ಲ : ಮೋದಿಜೆಡಿಎಸ್ ಎಂದೂ ಸರ್ಕಾರ ಮಾಡುವುದಿಲ್ಲ : ಮೋದಿ

ಗದಗದಲ್ಲಿ ಮೋದಿ ಅವರ ಭಾಷಣದ ಕೆಲವು ಅಂಶಗಳು ಇಲ್ಲಿವೆ

ಮಾತುಕತೆ ಮೂಲಕ ಮಹದಾಯಿಗೆ ಪರಿಹಾರ

ಮಾತುಕತೆ ಮೂಲಕ ಮಹದಾಯಿಗೆ ಪರಿಹಾರ

ಗೋವಾದಲ್ಲಿ ಚುನಾವಣೆ ಸೋತ ನಂತರ, ಕಾಂಗ್ರೆಸ್ ಮಹದಾಯಿ ವಿಷಯದಲ್ಲಿ ಕರ್ನಾಟಕದ ಜನರ ಮುಂದೆ ನಾಟಕವಾಡುತ್ತಿದೆ. ಆದ ಕಾರಣ ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಸೋಲಲಿದೆ. ಮಹದಾಯಿ ವಿಚಾರವನ್ನು ನಾವು ಮಾತುಕತೆ ಮುಖಾಂತರ ಪರಿಹರಿಸಲು ಬದ್ಧರಾಗಿದ್ದೇವೆ

ಎಳೆಎಳೆಯಾಗಿ ಬಿಚ್ಚಿಡುವೆ

ಎಳೆಎಳೆಯಾಗಿ ಬಿಚ್ಚಿಡುವೆ

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಸೃಷ್ಟಿಸುತ್ತಿರುವ ಗೊಂದಲವನ್ನು ಎಳೆಎಳೆಯಾಗಿ ನಿಮ್ಮ ಮುಂದೆ ಬಿಚ್ಚಿಡುತ್ತೇನೆ. 2007 ರಲ್ಲಿ ಗೋವಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು 'ಯಾವುದೇ ಕಾರಣಕ್ಕೂ ಮಹದಾಯಿ ನೀರಿನ ಒಂದು ಹನಿಯನ್ನೂ ಸಹ ಕರ್ನಾಟಕಕ್ಕೆ ಹರಿಸುವುದಿಲ್ಲ' ಎಂದಿದ್ದರು. ಈ ಮಾತು ಮರೆತುಹೋಯಿತೇ ಮುಖ್ಯಮಂತ್ರಿಗಳೇ?

ಅಟಕಾನ, ಲಟಕಾನ, ಬಟಕಾನ ಮಾಡುವುದೇ ಕಾಂಗ್ರೆಸ್‌ನ ಕೆಲಸ. ಎಲ್ಲರಿಗೂ ನೀರಿನ ಹಕ್ಕು ಇದೆ. ಮಹದಾಯಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ನಾವು ಸಿದ್ಧರಿದ್ದೇವೆ.

ಜಾಗ ಒದಗಿಸದ ಸರ್ಕಾರ

ಜಾಗ ಒದಗಿಸದ ಸರ್ಕಾರ

ಗದಗ-ವಾಡಿ ರೈಲು ನಿಲ್ದಾಣ ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಅಗತ್ಯವಾಗಿದೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿದೆ. ರೈಲು ನಿಲ್ದಾಣಕ್ಕೆ ಬೇಕಾಗಿರುವ ಯೋಜನೆ ಸಿದ್ಧವಿದೆ. ಹಣ ಕೂಡ ಇದೆ. ಆದರೆ ರೈಲು ನಿಲ್ದಾಣಕ್ಕೆ ಬೇಕಾದ ಜಾಗವನ್ನು ಸರ್ಕಾರ ಇನ್ನೂ ಒದಗಿಸಿಕೊಟ್ಟಿಲ್ಲ

ಅಕ್ರಮ ಗಣಿಗಾರಿಕೆ ಪ್ರಯತ್ನ

ಅಕ್ರಮ ಗಣಿಗಾರಿಕೆ ಪ್ರಯತ್ನ

ಕಪ್ಪತ್ತಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ ಮಾಡಬಹುದು ಎಂಬುದು ಕಾಂಗ್ರೆಸ್ ಸರ್ಕಾರಕ್ಕೆ ತಿಳಿಯಿತು. ಕೂಡಲೇ ಗಣಿಗಾರಿಕೆ ಆರಂಭಿಸಲು ಷಡ್ಯಂತ್ರ ರೂಪಿಸಿತು. ಆದರೆ ಯಾವಾಗ ಬಿಜೆಪಿ ಮತ್ತು ಇಲ್ಲಿನ ಜನರು ಅದನ್ನು ವಿರೋಧಿಸಲು ಆರಂಭಿಸಿದರೋ, ಒಂದೇ ವರ್ಷದೊಳಗೆ ಅಕ್ರಮ ಗಣಿಗಾರಿಕೆಯ ಆಟಕ್ಕೆ ಅಂತ್ಯ ಹಾಡಿತು.

ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವ ಮೂಲಕವಾದರೂ ತಮ್ಮ ಕಿಸೆಗಳನ್ನು ತುಂಬಿಕೊಳ್ಳುವುದು ಕಾಂಗ್ರೆಸ್ ಸಂಸ್ಕೃತಿ. ಕಪ್ಪತ್ತಗುಡ್ಡದ ಅರಣ್ಯಗಳಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಅವಕಾಶಗಳನ್ನು ಕಂಡುಕೊಂಡಿತು.

ಕೆರೆಗಳನ್ನು ಬಿಲ್ಡರ್‌ಗಳಿಗೆ ಮಾರಾಟ

ಕೆರೆಗಳನ್ನು ಬಿಲ್ಡರ್‌ಗಳಿಗೆ ಮಾರಾಟ

ಕೆರೆಗಳಲ್ಲಿನ ಹೂಳನ್ನು ಎತ್ತುವ ಪ್ರಯತ್ನವನ್ನು ಕಾಂಗ್ರೆಸ್‌ ಸರ್ಕಾರ ಮಾಡಿಲ್ಲ. ಕೆರೆ ಬರಿದಾಗುವುದನ್ನೇ ಅವರು ಕಾಯುತ್ತಿದ್ದಾರೆ, ಬರಿದಾದ ಕೂಡಲೇ ಅದನ್ನು ಬಿಲ್ಡರ್‌ಗಳಿಗೆ ಮಾರಾಟ ಮಾಡಲು ಹೊರಡುತ್ತಾರೆ. ಸುಳ್ಳು ಹೇಳಿ ಜನರ ಕಣ್ಣಿಗೆ ಮಣ್ಣೆರಚುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು. ಮಹದಾಯಿ ವಿಚಾರದಲ್ಲಿ ಅವರು ಮಾಡುತ್ತಿರುವ ರಾಜಕಾರಣವೇ ಇದಕ್ಕೆ ಉದಾಹರಣೆ.

ಕಾಂಗ್ರೆಸ್ 'ಪಿಪಿಪಿ' ಆಗಲಿದೆ

ಕಾಂಗ್ರೆಸ್ 'ಪಿಪಿಪಿ' ಆಗಲಿದೆ

ಕರ್ನಾಟಕದಲ್ಲಿ ಕಾಂಗ್ರೆಸ್‌ ಟಿಕೆಟ್ ಹಂಚಿಕೆಗೆ ಟೆಂಡರ್ ಕರೆಯಲಾಗಿತ್ತು. ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮೇಲಿನವರಿಗೆ ಅತಿ ಹೆಚ್ಚು ಹಣವನ್ನು ಯಾರು ತಲುಪಿಸುತ್ತಾರೋ ಅವರಿಗೆ ಹುದ್ದೆಗಳನ್ನು ನೀಡಬೇಕು ಎಂಬ ಒಪ್ಪಂದ ಈಗಲೇ ಆಗಿದೆ. ಮತದಾರರೇ, ಬಹಳ ಜಾಗ್ರತೆಯಿಂದ ಇರಬೇಕು. ಈ ಚುನಾವಣೆಯಲ್ಲಿ ನೀವು ಕಾಂಗ್ರೆಸ್‌ ಅನ್ನು ಸೋಲಿಸಲಿದ್ದೀರಿ. ನಂತರ ಅದು ಐಎನ್‌ಸಿ ಬದಲು 'ಪಿಪಿಪಿ' ಕಾಂಗ್ರೆಸ್ ಆಗಲಿದೆ. ಪಿ.ಪಿ.ಪಿ. ಕಾಂಗ್ರೆಸ್ ಅಂದರೆ 'ಪಂಜಾಬ್, ಪುದುಚೆರಿ, ಪರಿವಾರ ಪಾರ್ಟಿ'.

ಷರೀಫರ ಮಾತು ಉಲ್ಟಾ

ಷರೀಫರ ಮಾತು ಉಲ್ಟಾ

ದುಡ್ಡು ಕೆಟ್ಟದ್ದು ನೋಡಾ ಎಂದು ಸಂತ ಶಿಶುನಾಳ ಷರೀಫರು ಹೇಳಿದ್ದರು. ಶಿಶುನಾಳ ಷರೀಫರ ಮಾತನ್ನು ಕಾಂಗ್ರೆಸ್‌ ಉಲ್ಟಾ ಮಾಡಿದೆ. ಅಪ್ಪನೂ ದೊಡ್ಡವನಲ್ಲ. ದುಡ್ಡೇ ದೊಡ್ಡಪ್ಪ ಅಂತ ಮಾಡಿದೆ. ಇಲ್ಲಿನ ಮುಖ್ಯಮಂತ್ರಿಗಳಂತೂ ಹಣವೇ ಮುಖ್ಯವೆಂದುಕೊಂಡಿದ್ದು, ಸೀದಾ ರುಪಯ್ಯಾ ಸರ್ಕಾರ ಮಾಡಿದ್ದಾರೆ.

English summary
Prime minister Narendra Modi broke his silence on Mahadayi and said the issue will be resolve by talks between two states
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X