ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ನಮ್ಮ ಹೊಣೆ ಅಭಿಯಾನ: ನ್ಯಾ. ಸಂತೋಷ್ ಹೆಗ್ಡೆ ಭಾಗಿ

|
Google Oneindia Kannada News

ಗದಗ, ಫೆಬ್ರವರಿ3 : ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ಹೋರಾಟ ನಡೆಸಿ ರಾಜಕೀಯ ಪಲ್ಲಟಕ್ಕೆ ನಾಂದಿ ಹಾಡಿದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಇದೀಗ ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಜಾಗೃತಿಗೆ ಮುಂದಾಗಿದ್ದಾರೆ.

ಫೆಬ್ರವರಿ ೨೪ರಂದು ಕೂಡಲಸಂಗಮದಿಂದ ಭ್ರಷ್ಟಾಚಾರ ಹಾಗೂ ಲೂಟಿಕೋರರ ವಿರುದ್ಧ ಆರಂಭಿಲಿರುವ ಚುನಾವಣೆ ನಮ್ಮ ಹೊಣೆ ಅಭಿಯಾನಕ್ಕೆ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಚಾಲನೆ ನೀಡಲಿದ್ದಾರೆ. ರಾಜ್ಯದ ವಿವಿಧ23 ಸಂಘಟನೆಗಳು, ಎಸ್ ಆರ್ ಹಿರೇಮಠ್ ಹೋರಾಟಕ್ಕೆ ಸಾಥ್ ನೀಡಲಿದ್ದು, ರಾಜ್ಯಾಧ್ಯಂತ ಅಭಿಯಾನ ನಡೆಯಲಿದೆ.

ಈ ಹಿಂದೆ ಕರ್ನಾಟಕದ ಅಕರಮ ಗಣಿಗಾರಿಕೆಗೆ ಕಡಿವಾಣ ಹಾಕಿದ್ದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಈ ಅಭಿಯಾನಕ್ಕೆ ಸಾಥ್ ನೀಡುತ್ತಿರುವುದು ವಿಶೇಷ.

Justice Hegde will take part pre election awareness programme

ಶನಿವಾರ ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್. ಆರ್. ಹಿರೇಮಠ್ ಈ ವಿಷಯ ತಿಳಿಸಿದರು. ಬಳ್ಳಾರಿ ನಂತರ ಇದೀಗ ಗದಗ ಜಿಲ್ಲೆಯ ಕಪ್ಪತ ಗುಡ್ಡದ ಮೇಲೆ ಅಕ್ರಮ ಗಣಿಕುಳಗಳ ಕಣ್ಣುಬಿದ್ದುದ್ದು ಕಪ್ಪತಗುಡ್ಡ ರಕ್ಷಿಸುವ ನಿಟ್ಟಿನಲ್ಲಿ ಫೆಬ್ರವರಿ 27 ರಂದು ಕಪ್ಪತಗುಡ್ಡ ಪರಿಸರದಲ್ಲಿ ವಾಸಿಸುತ್ತಿರುವ ಲಂಬಾಣಿ ಜನರೊಂದಿಗೆ ಚರ್ಚೆ ನಡೆಸಲಿದ್ದೇವೆ. ನಂತರ ಮುಂದಿನ ರೂಪುರೇಷೆ ನಿರ್ಧರಿಸಲಾಗುವುದು ಎಂದರು.
ರೈತರ ಸಮಸ್ಯೆ, ನಿರುದ್ಯೋಗ, ಆರೋಗ್ಯದ ಖಾಸಗೀಕರಣ ಮತ್ತು ಸಿಕ್ಷಣ ಕುರಿತಾದ ಸಮಸ್ಯೆಗಳ ವಿರುದ್ಧ ಗಂಭೀರವಾಗಿ ಧ್ವನಿ ಎತ್ತುವ ಕಾರ್ಯಕ್ರಮ ಮಾಡಲಾಗುತ್ತಿದೆ. ಹೊಸ ಸಮಾಜ ಪರಿಕಲ್ಪನೆಯಿಂದ ಈ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

English summary
Social worker who fought against illegal mining in the state, Samaja Parivarthana Samudaya chief SR Hiremath will launch an awareness campaign against political looters in the state. Former Lokayukta Justice Santosh Hegde will Inaugurate campaign on February 27 at Kudalasangama in Bagalkot district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X