ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತರ್ ಧರ್ಮೀಯ ದಂಪತಿಗಳ ಕಗ್ಗೊಲೆ: ಜನವಾದಿ ಸಂಘಟನೆ ಖಂಡನೆ

|
Google Oneindia Kannada News

ಗದಗ, ಸೆ.27: ಗದಗದಲ್ಲಿ ಅಂತರ್ ಧರ್ಮೀಯ ವಿವಾಹವಾಗಿ ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿ ಬಸಾಪುರದಲ್ಲಿ ಅಂತರ್ ಧರ್ಮೀಯ ವಿವಾಹವಾಗಿದ್ದ ಅಶ್ರಫ್ ಅಲಿ(45) ಮತ್ತು ಸೋಮವ್ವ(38) ಮೃತರಾದವರು. 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ದಂಪತಿ ಗಳನ್ನು ಸೋಮವ್ವನ ಸಹೋದರ ದೇವಪ್ಪಹೊಟ್ಟಿ ಮರ್ಯಾದಾ ಹೆಸರಿನಲ್ಲಿ ಕೊಲೆ ಮಾಡಿರುವುದು ಹೇಯ ಕೃತ್ಯ.

ಚಿತ್ರದುರ್ಗ:ದಲಿತ ಯುವಕನನ್ನು ಮದ್ವೆಯಾಗಿದ್ದಕ್ಕೆ ಮಗಳ ಕೊಲೆ ಯತ್ನ ಚಿತ್ರದುರ್ಗ:ದಲಿತ ಯುವಕನನ್ನು ಮದ್ವೆಯಾಗಿದ್ದಕ್ಕೆ ಮಗಳ ಕೊಲೆ ಯತ್ನ

ಈ ಹಿಂದೆಯೂ ರಾಜ್ಯದ ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಮರ್ಯಾದಾ ಹೆಸರಿನಲ್ಲಿ ನಡೆದ ಹತ್ಯೆಗಳ ಸಂದರ್ಭಗಳಲ್ಲಿ ಪರಸ್ಪರ ಕಡು ವೈರಿಗಳಂತೆ ಒಬ್ಬರ ಮೇಲೊಬ್ಬರು ಬೀಳುವ ರಾಜ್ಯದ ಪ್ರಮುಖ ಮೂರೂ ಪಕ್ಷಗಳ ನಾಯಕರು ಸ್ವಜಾತಿ ಪ್ರೇಮದಿಂದ, ಅನ್ಯಾಯವಾಗಿ ಬಲಿಯಾದ ಮುಗ್ಧ ಪ್ರೇಮಿಗಳ ಸಾವಿಗೆ ಕುರುಡಾಗಿ ಕುಳಿತಿದ್ದೇ ಇಂಥಹ ಪ್ರಕರಣಗಳು ಮತ್ತೆ ಮತ್ತೆ ನಡೆಯಲು ಕಾರಣ ಎಂದು ತಿಳಿಸಿದೆ.

Janawadi Mahila Sanghatan condemns murder of couple as honour killing

ದೇಶದ ಸಂವಿಧಾನವು ವಯಸ್ಕರಿಗೆ ಆಯ್ಕೆ ಸ್ವಾತಂತ್ರ್ಯ ನೀಡಿದ್ದು, ತಮ್ಮ ಆಯ್ಕೆಯ ಜೀವನ‌ ಸಂಗಾತಿಯೊಡನೆ 13 ವರ್ಷಗಳಿಂದ ಬದುಕುತ್ತಿದ್ದ ತಂಗಿಯನ್ನು ಕೊಂದವನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಾರ್ಯಾದೆ ಹೆಸರಿನ ಹತ್ಯೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ನಾಗರಿಕ ಸಮಾಜಕ್ಕೆ ತಕ್ಕುದಾದ ನಡೆ ಅಲ್ಲ.ಇಂದಿಗೂ ಇರುವ ಅಸಮಾನ ವ್ಯವಸ್ಥೆ, ಹುಸಿ ಪ್ರತಿಷ್ಟೆಗಳಿಗೆ ಇಡೀ ಸಮಾಜ ನಾಚಿ ತಲೆ ತಗ್ಗಿಸಬೇಕಾಗಿದೆ.

ಮೈಸೂರು: ಮರ್ಯಾದಾ ಹತ್ಯೆ, ತಂದೆ ಸೇರಿ ಐವರ ಬಂಧನ ಮೈಸೂರು: ಮರ್ಯಾದಾ ಹತ್ಯೆ, ತಂದೆ ಸೇರಿ ಐವರ ಬಂಧನ

ಈ ಹಿಂದೆ ಹರ್ಯಾಣ, ಮಹಾರಾಷ್ಟ್ರ ರಾಜ್ಯಗಳಿಂದ ಇಂಥಹ ಘಟನೆಗಳು ವರದಿಯಾಗುವಾಗಲೇ, ಯುವ ಜನರ ಆಯ್ಕೆ ಹಕ್ಕುಗಳನ್ನು ಗೌರವಿಸುವ ಮತ್ತು ಅದಕ್ಕೆ ಚ್ಯುತಿ ಬಂದಾಗ ಜೊತೆ ನಿಂತು ಅವರ ಪರವಾಗಿ ಹೋರಾಟ ಮಾಡಿದ‌ ಜನವಾದಿ ಮಹಿಳಾ ಸಂಘಟನೆ ಮರ್ಯಾದೆಗೇಡು ಹತ್ಯೆ ಯ ವಿರುದ್ಧ ಕಾನೂನು ತರುವಂತೆ ಒತ್ತಾಯಿಸುತ್ತಲೇ ಇದೆ.ಕೇಂದ್ರ ಸರ್ಕಾರಕ್ಕೆ , ಮುಸ್ಲಿಂ ಮಹಿಳೆಯರನ್ನು ಬಾಣಲೆಯಿಂದ ಬೆಂಕಿಗೆ ನೂಕುವ ಕಾನೂನು ತಂದು ಟ್ರಿಪಲ್‌ ತಲಾಖ್ ನಿಷೇಧಿಸುವ ಬಗ್ಗೆ ಸುಗ್ರೀವಾಜ್ಞೆ ತರುವಲ್ಲಿ ಇರುವ ತರಾತುರಿ ಈ ವಿಷಯಗಳಲ್ಲಿ ಇಲ್ಲ.

ಮಂಡ್ಯ : ಮೋನಿಕಾಳದ್ದು ಮರ್ಯಾದಾ ಹತ್ಯೆಮಂಡ್ಯ : ಮೋನಿಕಾಳದ್ದು ಮರ್ಯಾದಾ ಹತ್ಯೆ

ಯಾಕೆಂದರೆ‌ ಇದಕ್ಕೆ ಮೌನ ಮತ್ತು ಅದಕ್ಕೆ ಆದೇಶ ಎರಡರಲ್ಲಿಯೂ ಓಟ್ ಬ್ಯಾಂಕ್‌ ರಾಜಕಾರಣ ವಿದೆ. ಇತ್ತೀಚಿನ ದಿನಗಳಲ್ಲಿಯೇ ದಕ್ಷಿಣ ಭಾರತ ದಲ್ಲಿಯೇ ವರದಿಯಾದ ಘೋರ ಪ್ರಕರಣಗಳನ್ನೂ ಗಮನಿಸಿ ಕಾನೂನು ತರಲು ಕೇಂದ್ರ ಸರಕಾರ ಮುಂದಾಗಬೇಕು. ಮತ್ತು ಕರ್ನಾಟಕ ರಾಜ್ಯ ಸರ್ಕಾರವೂ ಅತ್ತ ಗಮನ ಹರಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಒತ್ತಾಯಿಸಿದೆ.

English summary
Akhil Bharat Janawadi Mahila Snaghatan has condemned inter religious couple murder in Basapura of Gadag district and urged the government to taken action against miscreants with utmost punishment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X