• search
  • Live TV
ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ: ಮಕ್ಕಳ ಸ್ಕೂಲ್ ಫೀಸ್‌ಗೆ ಕೂಡಿಟ್ಟಿದ್ದ 1 ಲಕ್ಷ ರೂ ಮತ್ತು ಚಿನ್ನಾಭರಣ ಕಳ್ಳತನ

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಸೆಪ್ಟೆಂಬರ್, 13: ಗದಗ ನಗರದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಕಳ್ಳರ ಪಾಲಿಗೆ ಇದು ವರದಾನವಾಗಿದೆ. ಒಂದು ಕಡೆ ಮಳೆಯಿಂದ ಜನರು ತತ್ತರಿಸಿದ್ದರೆ, ಮತ್ತೊಂದೆಡೆ ಕಳ್ಳರ ಹಾವಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಮಳೆಯ ಅಬ್ಬರದ ನಡುವೆ ವಿದ್ಯುತ್ ಸ್ಥಗಿತಗೊಂಡಿರುವ ಏರಿಯಾಗಳನ್ನೇ ಟಾರ್ಗೆಟ್ ಮಾಡಿ, ಯಾರೂ ಇಲ್ಲದಿರುವ ಮನೆಗಳನ್ನು ಹುಡುಕಿ ಹಣ, ಚಿನ್ನಕ್ಕೆ ಕನ್ನ ಹಾಕುತ್ತಿದ್ದಾರೆ. ಇದೇ ಮಳೆರಾಯನ ಅಬ್ಬರವನ್ನೇ ವರದಾನವಾಗಿಸಿಕೊಂಡು ಮನೆಯೊಳಗೆ ಯಾರೂ ಇರದ ವೇಳೆಯಲ್ಲಿ ಕಳ್ಳರು ಅಟ್ಟಹಾಸ ಮೆರೆದಿದ್ದಾರೆ.

ಕಾರವಾರ; ಬೇರೆ ಖಾತೆಯಿಂದ ಹೆಂಡತಿ ಖಾತೆಗೆ 2.69 ಕೋಟಿ ವರ್ಗಾಯಿಕೊಂಡ ಬ್ಯಾಂಕ್‌ ಉದ್ಯೋಗಿಕಾರವಾರ; ಬೇರೆ ಖಾತೆಯಿಂದ ಹೆಂಡತಿ ಖಾತೆಗೆ 2.69 ಕೋಟಿ ವರ್ಗಾಯಿಕೊಂಡ ಬ್ಯಾಂಕ್‌ ಉದ್ಯೋಗಿ

ಹುಡ್ಕೋ ಕಾಲೋನಿಯ ಮನೆಯಲ್ಲಿ ಕಳ್ಳತನ
ಗದಗ ನಗರದ ಹುಡ್ಕೋ ಕಾಲೋನಿಯ ದೀಪಕ್ ಪವಾರ್ ಎಂಬುವವರ ಮನೆಯಲ್ಲಿ ಕಳ್ಳತನ ಆಗಿದೆ. ಮನೆಯವರೆಲ್ಲ ಹುಬ್ಬಳ್ಳಿಗೆ ಹೋಗಿದ್ದರು. ಇದನ್ನು ಗಮನಿಸಿದ ಖದೀಮರು ನಿನ್ನೆ ಮಧ್ಯರಾತ್ರಿ 1 ಗಂಟೆಯಿಂದ 3 ಗಂಟೆಯ ಸುಮಾರಿಗೆ ಮನೆಯ ಬೀಗ ಮುರಿದು, ಟ್ರಸ್ಯೂರಿಯಲ್ಲಿ ಮಕ್ಕಳಿಗಾಗಿ ಕೂಡಿಟ್ಟಿದ್ದ 120 ಗ್ರಾಂ ಚಿನ್ನಾಭರಣ, ಮತ್ತು ಒಂದು ಲಕ್ಷ ರೂಪಾಯಿಯನ್ನು ದೋಚಿಕೊಂಡು ಹೋಗಿದ್ದಾರೆ. ಮಕ್ಕಳ ಸ್ಕೂಲ್ ಫೀಸ್‌ಗಾಗಿ ಹಣ ಕೂಡಿಟ್ಟಿದ್ದರಂತೆ. ಜೊತೆಗೆ ದೀಪಕ್ ಪವಾರ್‌ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರ ಮದುವೆಗಾಗಿ ಚಿನ್ನಾಭರಣ ಖರೀದಿಸಿ ಕೂಡಿಟ್ಟಿದ್ದರು. ಚಿನ್ನದ ಸರ, ಉಂಗುರ, ನೆಕ್ಲೆಸ್‌ಗಳನ್ನು ಕೂಡಿಟ್ಟಿದ್ದರು. ಆದರೆ ಎಲ್ಲವನ್ನೂ ದೋಚಿ ಪರಾರಿ ಆಗಿದ್ದರು.

ಅದೇ ಟ್ರಸ್ಯೂರಿಯ ಡ್ರಾವೇರ್‌ನಲ್ಲಿ ಪುಸ್ತಕದ ಕೆಳಗೆ 10 ಸಾವಿರ ರೂಪಾಯಿ ಇಟ್ಟಿದ್ದರು. ಆದರೆ ಅವು ಮಾತ್ರ ಕಳ್ಳರ ಕಣ್ಣಿಗೆ ಬಿದ್ದಿಲ್ಲ. ಮತ್ತು ಚಿಲ್ಲರೆಗಳನ್ನೂ ಸಹ ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಪಕ್ಕದ ಮನೆಯವರು ಇದನ್ನು ಗಮನಿಸಿದಾಗ ಮನೆಯ ಬಾಗಿಲು ತೆರೆದಿದ್ದು, ಮನೆಯ ಯಜಮಾನ ದೀಪಕ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ದೀಪಕ್‌ ಮನೆಗೆ ಹಿಂತಿರುಗಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಇನ್ನು ಕಳ್ಳತನ ಆಗಿರುವ ಬಗ್ಗೆ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳರು ಓಡಾಡಿರುವ ಬಗ್ಗೆ ಸುಳಿವು ಸಿಕ್ಕಿದೆ. ಆದರೆ ಅವರ ಮುಖಚರ್ಯೆ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನು ಈ ಸಂಬಂಧ ಗದಗ ನವರತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದಷ್ಟು ಬೇಗ ನಮ್ಮ ಚಿನ್ನಾಭರಣ ಮತ್ತು ಹಣ ಪತ್ತೆ ಮಾಡಿಸಿಕೊಡಿ ಎಂದು ದೀಪಕ್ ಪವಾರ್ ಕಿಟುಂಬದವರು ಕಣ್ಣೀರು ಹಾಕಿದ್ದಾರೆ.

English summary
Deepak Pawar of Hudko Colony Gadag in tears after children's school fees of Rs 1 lakh and gold jewelery were stolen, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X