ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ: ತನ್ನ ಮೈ ಮೇಲೆ ಛಾವಣಿ ಕುಸಿದರೂ ಕುಟುಂಬಸ್ಥರ ರಕ್ಷಣೆಗೆ ಕಿರುಚಿದ ಯಜಮಾನ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಗದಗ, ಮೇ21: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ‌ ಮನೆ ಮೆಲ್ಛಾವಣಿ ಕುಸಿದ ಪರಿಣಾಮ ಅವಶೇಷಗಳ ಅಡಿ ಸಿಲುಕಿದ್ದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ಕಳೆದ ಎರಡು ದಿನದಿಂದ ಜಿಲ್ಲೆಯಾದ್ಯಂತ ಮಹಾ ಮಳೆ ಅಬ್ಬರಿಸುತ್ತಿದೆ. ಇದರಿಂದಾಗಿ ಅನೇಕ ಮನೆಗಳು ಕುಸಿದಿವೆ. ಶಿಗ್ಲಿ ಗ್ರಾಮದ ಗುರುಶಾಂತಯ್ಯ ಎಂಬುವವರ ಮನೆಯೂ ರಾತ್ರಿ ಕುಸಿದಿತ್ತು. ಕುಟುಂಬದೊಂದಿಗೆ ವಿಶ್ರಮಿಸುತ್ತಿದ್ದ ಗುರುಶಾಂತಯ್ಯ ಮೈ ಮೇಲೆ ಏಕಾ ಏಕಿ ಮಣ್ಣಿಗೆ ಗೋಡೆ, ಛಾವಣಿ ಬಿದ್ದಿದೆ. ಜೊತೆಗಿದ್ದ ಪತ್ನಿ ಶೈಲಾ, ಇಬ್ಬರು ಮಕ್ಕಳೂ ಮಣ್ಣಿನ ಅಡಿ ಸಿಲುಕಿದ್ರು.

ರಾತ್ರಿ 12 ಗಂಟೆ ಸುಮಾರಿಗೆ ಏಕಾ ಏಕಿ ಛಾವಣಿ ಕುಸಿತ

ರಾತ್ರಿ 12 ಗಂಟೆ ಸುಮಾರಿಗೆ ಏಕಾ ಏಕಿ ಛಾವಣಿ ಕುಸಿದಿದೆ. ಭಯಗೊಂಡ ಗುರುಶಾಂತಯ್ಯ ಮಕ್ಕಳ ರಕ್ಷಣೆಗಾಗಿ ಕೂಗಿಕೊಂಡಿದಾರೆ. ನನಗೇ ಏನಾದರೂ ತೊಂದರೆಯಿಲ್ಲ. ಮಕ್ಕಳು ಬದುಕಬೇಕು ಎಂಬುವ ಹಂಬಲದಿಂದ ಜೋರಾಗಿ ಕಿರುಚಿದರಂತೆ. ಗುರುಶಾಂತಯ್ಯ ಕೂಗಾಟ ಚೀರಾಟ ಕೇಳಿ ಪಕ್ಕದ ಮನೆಯ ಮಹಿಳೆ ಹೊರ ಬಂದರು. ಸುತ್ತಲ ಜನರನ್ನು ಸೇರಿಸಿ ರಕ್ಷಣೆ ಮಾಡುವಂತೆ ಕೇಳಿಕೊಂಡಿರು. ಸ್ಥಳಕ್ಕೆ ಬಂದಿದ್ದ ಜನರು ಗುರುಶಾಂತಯ್ಯ ಕುಟುಂಬವನ್ನ ರಕ್ಷಿಸಿದಾರೆ.

Gadag: Home roof collapse due to heavy rain

ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಾಖಲು

ಗುರುಶಾಂತಯ್ಯ ಅವರ ಎದೆ, ಬೆನ್ನಿಗೆ ಬಲವಾದ ಪೆಟ್ಟಾಗಿದ್ದು ಮಾತನಾಡುವುದಕ್ಕೂ ಕಷ್ಟವಾಗುತ್ತಿದೆ. ಅವರನ್ನು ಕೂಡಲೇ ಶಿಗ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅದೃಷ್ಟವಶಾತ್ ಗುರುಶಾಂತಯ್ಯ ಅವರ ಕುಟುಂಬದ ಯಾವ ಸದಸ್ಯನಿಗೂ ಗಂಭೀರ ಗಾಯಗಳಾಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಅನ್ನಪೂರ್ಣಾ ಮುದಕ್ಕಮ್ಮ ನವರ್, ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದಾರೆ. ಯಾರಿಗೂ ಪ್ರಾಣಾಪಾಯ ಆಗಿಲ್ಲ. ಚಿಕಿತ್ಸೆ ನೀಡಲಾಗುತ್ತಿದೆ. ವರದಿ ಸಂಗ್ರಹಿಸಿ ಎನ್‌ಡಿಆರ್‌ಎಫ್ ಗೈಡ್ ಲೈನ್ ಪ್ರಕಾರ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Gadag: Home roof collapse due to heavy rain

ಮಹಾಮಳೆಗೆ ಜಿಲ್ಲೆಯಲ್ಲಿ ಮೊದಲ ವ್ಯಕ್ತಿ ಸಾವು

ಗದಗ ಜಿಲ್ಲೆ ಮಂಡರಗಿ ತಾಲೂಕಿನ ಯಕ್ಲಾಸಪುರದ ಕೋತಿ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಹೋಗಿದ್ದ ವ್ಯಕ್ತಿ ಶವ ಪತ್ತೆಯಾಗಿದೆ. ಯಕ್ಲಾಸಪುರ ಗ್ರಾಮದ ಟಿಪ್ಪು ಸುಲ್ತಾನ್(26) ಮೃತ ಯುವಕ ಅಂತಾ ಪತ್ತೆ ಹಚ್ಚಲಾಗಿದೆ. ಕನ್ಯೆ ನೋಡಿ ಬರುವುದಾಗಿ ಗುರುವಾರ ಹೋಗಿದ್ದ ಟಿಪ್ಪು ಸುಲ್ತಾನ್, ಕೊಪ್ಪಳದ ಉಪ್ಪಿನ ಬೆಟಗೇರಿಗೆ ಹೋಗಿದ್ದರು. ರಾತ್ರಿ ಮುಂಡರಗಿಯಲ್ಲೇ ಇದ್ದು, ಇಂದು ಗ್ರಾಮಕ್ಕೆ ಮರಳುವಂತೆ ಕುಟುಂಬ ತಿಳಿಸಿತ್ತಂತೆ. ಆದರೆ ಕುಟುಂಬಸ್ಥರ ಮಾತು ಕೇಳದೆ ರಾತ್ರಿ ಹಳ್ಳ ದಾಟಲು ಮುಂದಾಗಿದ್ದ ಟಿಪ್ಪು ಕೊಚ್ಚಿ ಹೋಗಿದ್ದು, ಬೈಕ್ ಸಮೇತ ನಾಪತ್ತೆಯಾಗಿದ್ದ. ಟಿಪ್ಪು ದೇಹ ಇಂದು ಪತ್ತೆಯಾಗಿದೆ.

Recommended Video

ನಮ್ಮ ಲೆಕ್ಕಾಚಾರವನ್ನು ಮ್ಯಾಕ್ಸ್ವೆಲ್ ಹೇಗೆ ಉಲ್ಟಾ ಮಾಡಿದ್ರು ಅಂತ ಹೇಳಿದ ಹಾರ್ದಿಕ್ | OneIndia Kannada

English summary
Gadag Rain: home collapsed in Shigli village. Neighbors protect 4 members including two children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X