ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶುದ್ಧ ನೀರಿನ ದರ ಹೆಚ್ಚಳ, ಸರ್ಕಾರದ ವಿರುದ್ಧ ಎಚ್ಕೆ ಪಾಟೀಲ್ ಗರಂ

|
Google Oneindia Kannada News

ಬೆಂಗಳೂರು ಜೂನ್ 09: ಬಡವರ ಹಸಿವು ಇಂಗಿಸಲು ಪುಕ್ಕಟೆಯಾಗಿ ಅಕ್ಕಿ ವಿತರಿಸುವಾಗ, ಇಂದಿರಾ ಕ್ಯಾಂಟಿನ್ ನಲ್ಲಿ ರಿಯಾಯ್ತಿ ದರದಲ್ಲಿ ಆಹಾರ ನೀಡುತ್ತಾ, ಜನರ ಆರೋಗ್ಯ ರಕ್ಷಿಸಲು ಹಾಗೂ ದಾಹ ಇಂಗಿಸಲು ಅಗತ್ಯವಿರುವ ಶುದ್ದ ನೀರಿನ ದರದ ಹೆಚ್ಚಳದ ಚಿಂತನೆ ಕಾಂಗ್ರೆಸ್ ಪಕ್ಷದ ನಿಲುವಿಗೆ ವ್ಯತಿರಿಕ್ತವಾದದ್ದು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಗ್ರಾಮೀಣಾಭಿವೃದ್ದಿ ಸಚಿವರಾದ ಕೃಷ್ಣಭೈರೇಗೌಡರಿಗೆ ಪತ್ರವನ್ನು ಬರೆದಿದ್ದಾರೆ. ಶುದ್ದ ಕುಡಿಯುವ ನೀರು ಮಾನವನ ಆರೋಗ್ಯವಂತ ಜೀವನಕ್ಕೆ ಬೇಕಾಗಿರುವ ಮೂಲಭೂತ ಅವಶ್ಯಕತೆ. ಇಂದು ಕುಡಿಯುವ ನೀರು ಕಲುಷಿತಗೊಂಡಿರುವ ಈ ಕಾಲದಲ್ಲಿ, ಅಂತರ್ಜಲ ಮಟ್ಟ ತೀವ್ರ ಕುಸಿತಗೊಂಡಿದೆ.

ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸ್ಮಾರ್ಟ್ ಕಾರ್ಡ್ ಬಳಸಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸ್ಮಾರ್ಟ್ ಕಾರ್ಡ್ ಬಳಸಿ

ಈ ಸಂದರ್ಭದಲ್ಲಿ ಜನಾರೋಗ್ಯ ಆಘಾತಕಾರಿಯೂ ಆಗಿದೆ. ಹೀಗಾಗಿ ಎಲ್ಲರಿಗೂ ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ. ಶುದ್ದ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆ ಹೊಸ ವ್ಯವಸ್ಥೆ ರೂಪಿಸುವ ಆಲೋಚನೆಯನ್ನು ಸ್ವಾಗತಿಸುವೆ.

ನೀರಿನ ಮಹತ್ವ ಸಾರಲು ಸರ್ಕಾರದಿಂದ 'ಜಲಾಮೃತ' ಯೋಜನೆನೀರಿನ ಮಹತ್ವ ಸಾರಲು ಸರ್ಕಾರದಿಂದ 'ಜಲಾಮೃತ' ಯೋಜನೆ

ಶುದ್ದ ಕುಡಿಯುವ ನೀರು ಕೇವಲ ದಾಹ ತಣಿಸುವುದಿಲ್ಲ. ಈ ನೀರಿನ ಸೇವನೆಯಿಂದ ಜಲಮೂಲದಿಂದ ಬರುವ ರೋಗಗಳನ್ನು ತಡೆದು ಜನಾಂಗದ ಆರೋಗ್ಯ ರಕ್ಷಣೆಯ ಜೊತೆಗೆ ಅವರಲ್ಲಿ ಆರ್ಥಿಕ ಚೈತನ್ಯ ತುಂಬಲು ಬಹಳ ನೆರವಾಗುವುದೆಂಬುದನ್ನು ಮರೆಯಲಾಗದು.

ಶುದ್ದ ಕುಡಿಯುವ ನೀರಿನ ಪೂರೈಕೆ ದರ ಹೆಚ್ಚಳ

ಶುದ್ದ ಕುಡಿಯುವ ನೀರಿನ ಪೂರೈಕೆ ದರ ಹೆಚ್ಚಳ

ಈ ಪ್ರಸಂಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ, 10 ಪೈಸೆಗೊಂದು ಲೀಟರ್ ನೀರು ಪೂರೈಕೆ ಮಾಡುವುದನ್ನು ಬದಲಿಸಿ 25 ಪೈಸೆಗೆ ಏರಿಕೆ ಮಾಡುವ ಸರಕಾರದ ನಿಲುವು ಸರಿಯಲ್ಲ. ಈ ನಿಲುವು ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ತದ್ವಿರುದ್ದವಾಗಿರುವುದರಿಂದ ಶುದ್ದ ಕುಡಿಯುವ ನೀರಿನ ಪೂರೈಕೆ ದರ ಹೆಚ್ಚಳ ಮಾಡದಿರಲು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಬಡವರ ಪಕ್ಷಪಾತಿ ಪಕ್ಷ

ಕಾಂಗ್ರೆಸ್ ಪಕ್ಷ ಬಡವರ ಪಕ್ಷಪಾತಿ ಪಕ್ಷ. ಬಡವರು ಹಸಿವೆಯಿಂದ ಬಳಲಬಾರದೆಂದು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಬಡವರ ಉಪಹಾರ ಊಟಕ್ಕೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್ ತೆರೆದು ಕಾಂಗ್ರೆಸ್ ಪಕ್ಷದ ನಿಲುವು ಸದಾ ಬಡಜನರು ಎಂಬುದನ್ನು ಸ್ಮರಿಸುವೆ.

ನಮ್ಮ ಪಕ್ಷದ ಚಿಂತನೆಗೆ ವ್ಯತಿರಿಕ್ತವಾದದು

ಬಡವರು ಹಸಿವ ಇಂಗಿಸಲು ಪುಕ್ಕಟೆ ಅಕ್ಕಿ ವಿತರಿಸುವಾಗ ರಿಯಾಯತಿ ದರದಲ್ಲಿ ಆಹಾರ ನೀಡುತ್ತಾ ಅವರ ಆರೋಗ್ಯ ರಕ್ಷಿಸಲು, ದಾಹ ಇಂಗಿಸಲು ಶುದ್ದ ನೀರಿನ ದರ ಹೆಚ್ಚಳದ ಚಿಂತನೆಯೇ ನಮ್ಮ ಪಕ್ಷದ ನಿಲುವಿಗೆ ವ್ಯತಿರಿಕ್ತವಾದದು. ಆದ್ದರಿಂದ ಶುದ್ದ ಕುಡಿಯುವ ನೀರಿನ ದರ ಹೆಚ್ಚಳದ ಚಿಂತನೆಯೇ ನಮ್ಮ ಪಕ್ಷದ ನಿಲುವಿಗೆ ವ್ಯತಿರಿಕ್ತವಾದದು.

ಶುದ್ದ ನೀರು ಉಪಯೋಗಕ್ಕೆ ಪ್ರೋತ್ಸಾಹಿಸಲು ಪತ್ರ

ಆದ್ದರಿಂದ ಶುದ್ದ ಕುಡಿಯುವ ನೀರಿನ ದರ ಹೆಚ್ಚಿಸುವ ಬದಲು ನಿರ್ವಹಣೆ ವೆಚ್ಚದಲ್ಲಿಯೇ ಕೊರತೆಯನ್ನು ಸರಕಾರ ತುಂಬಿಕೊಡಲು ಹಾಗೂ ಶುದ್ದ ಕುಡಿಯುವ ನೀರು ಬಳಸುವ ಬಡವರಿಗೆ 10 ಪೈಸೆಗೆ ಲೀಟರ್ ನೀರು ಪೂರೈಸುವುದನ್ನು ಮುಂದುವರೆಸಿ ಬಡವರ ಜೀವನದ ಗುಣಮಟ್ಟ ಉನ್ನತೀಕರಿಸಲು ಗ್ರಾಮೀಣ ಜನರ ಆರೋಗ್ಯ ರಕ್ಷಣೆಯ ಈ ಶುದ್ದ ನೀರು ಉಪಯೋಗಕ್ಕೆ ಪ್ರೋತ್ಸಾಹಿಸಲು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

English summary
Gadag MLA HK Patil demands not to hike Drinking water price. HK Patil writes letter to CM HD Kumaraswamy and minister Krishna bhyegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X