ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗದಲ್ಲಿ ಮಳೆ ಅವಾಂತರ; ರೇಷ್ಮೆ ಬೆಳೆ ರೈತ ಕಂಗಾಲು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಗದಗ, ಮೇ 9: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ‌ ಜಾಲವಾಡಗಿ ಗ್ರಾಮದಲ್ಲಿ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ರೇಷ್ಮೆ ಲಾಭದ‌ ನಿರೀಕ್ಷೆಯಲ್ಲಿದ್ದ ರೈತ ವೀರನಗೌಡ್ರವರು ಲಕ್ಷಾಂತರ ರೂಪಾಯಿ ಮೌಲ್ಯದ ರೇಷ್ಮೆ ಶೆಡ್ಡುಗಳು ನಿರ್ಮಿಸಿ ರೈಷ್ಮೆ ಬೆಳೆಯುತ್ತಿದ್ದರು. ಜೀವನಕ್ಕೆ ಆದಾಯವಾಗಿದ್ದ ಈ ರೇಷ್ಮೆ ಶೆಡ್ಡುಗಳು ಬಿರುಗಾಳಿ ಮಳೆಗೆ ನಾಶವಾಗಿವೆ.

ಕೊರೋನಾ ನಂತರ ಇತ್ತೀಚಿಗೆ ಚೇತರಿಸಿಕೊಂಡಿದ್ದ ರೈತನಿಗೆ ಮತ್ತೆ ಬಡಸಿಡಿಲು ಬಡಿದಂತಾಗಿದೆ ಎಂದರೆ ತಪ್ಪಾಗಲಾರದು. ಗದಗ ಜಿಲ್ಲೆಯ ಹಲವಡೆ ಗಾಳಿ, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಿಂದಾಗಿ ಜನರ ಜೀವನ ಹೇಳತೀರದು, ಮುಂಡರಗಿ ತಾಲೂಕಿನ ಕಲಕೇರೆ-ಮುಂಡರಗಿ ಮರಗಳು ಧರೆಗುರುಳಿ ಕೆಲಕಡೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಮೇ ತಿಂಗಳ ಮಳೆ; ಮಾವು ಕೊಯ್ಲು, ರೈತರು ಅನುಸರಿಸಬೇಕಾದ ಕ್ರಮ ಮೇ ತಿಂಗಳ ಮಳೆ; ಮಾವು ಕೊಯ್ಲು, ರೈತರು ಅನುಸರಿಸಬೇಕಾದ ಕ್ರಮ

ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಗಾಳಿ ಬೀಸಿದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿವೆ. ಇದರಿಂದ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿ, ಜನರು ಕತ್ತಲಲ್ಲಿ ಕಾಲ ಕಳೆಯುವಂತಾಯಿತು. ಭಾನುವಾರ ಸಂಜೆ ಏಕಾಏಕಿ ಬಿರುಗಾಳಿ‌ ಸಮೇತ ಮಳೆ ರಣಾರ್ಭಟಕ್ಕೆ ಸಿಕ್ಕು ನೆಲಕ್ಕುರುಳಿದ ಶೆಡ್ಡುಗಳು. ಇದನ್ನು ಕಂಡ ರೈತರು ಕಂಗಾಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಹಾಕಿ ನಿರ್ಮಿಸಿದ್ದ ಶೆಡ್ಡುಗಳು ಹಾನಿಯಾಗಿರುವುದರಿಂದ ರೈತ ವೀರನಗೌಡ್ರ ಪಾಟೀಲ ಪರಿಹಾರಕ್ಕೆ ಸರ್ಕಾರಕ್ಕೆ ಮೊರೆಹೋಗಿದ್ದಾರೆ.

 ಚಿತ್ರದುರ್ಗ; ಮಳೆಗೆ ಬೆಳೆ ನಷ್ಟ, ಸಿಡಿಲಿಗೆ ಇಬ್ಬರು ಬಲಿ ಚಿತ್ರದುರ್ಗ; ಮಳೆಗೆ ಬೆಳೆ ನಷ್ಟ, ಸಿಡಿಲಿಗೆ ಇಬ್ಬರು ಬಲಿ

ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಗಾಳಿ ಬೀಸಿದ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿವೆ. ಇದರಿಂದ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿ, ಜನರು ಕತ್ತಲಲ್ಲಿ ಕಾಲ ಕಳೆಯುವಂತಾಯಿತು. ಭಾನುವಾರ ಸಂಜೆ ಏಕಾಏಕಿ ಬಿರುಗಾಳಿ‌ ಸಮೇತ ಮಳೆ ಆರ್ಭಟಕ್ಕೆ ಸಿಕ್ಕು ಶೆಡ್ಡುಗಳು ನೆಲಕ್ಕುರುಳಿದವು. ಇದನ್ನು ಕಂಡು ರೈತರು ಕಂಗಾಲಾದರು. ಲಕ್ಷಾಂತರ ರೂಪಾಯಿ ಹಾಕಿ ನಿರ್ಮಿಸಿದ್ದ ಶೆಡ್ಡುಗಳು ಹಾನಿಯಾಗಿರುವುದರಿಂದ ರೈತ ವೀರನಗೌಡ್ರ ಪಾಟೀಲ ಪರಿಹಾರಕ್ಕೆ ಸರ್ಕಾರಕ್ಕೆ ಮೊರೆಹೋಗಿದ್ದಾರೆ.

ಚಿತ್ರದುರ್ಗ, ಹುಬ್ಬಳ್ಳಿಯಲ್ಲೂ ಭಾರೀ ಮಳೆ

ಚಿತ್ರದುರ್ಗ, ಹುಬ್ಬಳ್ಳಿಯಲ್ಲೂ ಭಾರೀ ಮಳೆ

ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಬಿರುಗಾಳಿ ಆಲಿಕಲ್ಲು ಮಳೆಗೆ ಬಾಳೆ ಗಿಡ, ತೆಂಗು ಸೇರಿದಂತೆ ಅಡಿಕೆ ಮರಗಳು ಧರೆಗುರುಳಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ತಾಲೂಕಿನ ಕಸ್ತೂರಿರಂಗಪ್ಪನಹಳ್ಳಿ ಗ್ರಾಮದ ಚಿಕ್ಕಣ್ಣ ಇವರಿಗೆ ಸೇರಿದ ಸುಮಾರು ಎರಡು ಎಕರೆಯಲ್ಲಿ ಫಸಲಿಗೆ ಬಂದಿದ್ದ ಬೆಳೆದ ಬಾಳೆ ತೋಟ ನೆಲಕಚ್ಚಿದೆ. ಇದರಿಂದ ಚಿಕ್ಕಣ್ಣನಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ರೈತರಿಗೆ ಬೆಳೆ ನಷ್ಟ

ರೈತರಿಗೆ ಬೆಳೆ ನಷ್ಟ

ಗಾಳಿ, ಮಳೆಗೆ ಹಾನಿಗೊಳಗಾದ ರೈತರ ಜಮೀನುಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರ್ಮಪುರ ಹೋಬಳಿಯ ಹೊಸಕೆರೆ ವ್ಯಾಪ್ತಿಯ ಕಂದಾಯ ಅಧಿಕಾರಿ ವರದರಾಜು ರೈತರ ಜಮೀನುಗಳಿಗೆ ಭೇಟಿ ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆದರು. ಕೆ.ಆರ್.ಹಳ್ಳಿಯ ಅಧಿಕಾರಿ ಬಾಳೆ ತೋಟಕ್ಕೆ ಭೇಟಿ ನೀಡಿದರು. ಆದಿವಾಲ ಹಾಗೂ ಪಟ್ರೇಹಳ್ಳಿಯಲ್ಲಿ ರೈತರ ಜಮೀನುಗಳಿಗೆ ಅಧಿಕಾರಿ ಲಕ್ಷ್ಮೀಪತಿ ಕೂಡ ಭೇಟಿ ನೀಡಿದರು.

ಬೆಂಗಳೂರಿನಲ್ಲಿ ಧಾರಾಕಾರ ಮಳೆ

ಬೆಂಗಳೂರಿನಲ್ಲಿ ಧಾರಾಕಾರ ಮಳೆ

ಕಳೆದ ವಾರದಿಂದ ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಪ್ರತಿದಿನ ಸಂಜೆಯಾಗುತ್ತಲೇ ಗುಡುಗು, ಸಿಡಿಲಿನ ಆರ್ಭಟದ ಜೊತೆ ಸುರಿಯುತ್ತಿರುವ ಮಳೆಗೆ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆಗಳು ಜಲಾವೃತಗೊಂಡು ಸಂಚಾರ ದಟ್ಟಣೆ ಉಂಟಾಗುತ್ತಿದೆ. ಮಳೆ ನೀರು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿ ಜನರು ಬಿಬಿಎಂಪಿಗೆ ಹಿಡಿಶಾಪ ಹಾಕಿದರು. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ನಗರದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

Recommended Video

ಆಟಗಾರನ ನೋವು ನೋಡಲಾರದೆ ಅಂಪೈರ್ ಮಾಡಿದ್ದೇನು | Oneindia Kannada

English summary
Heavy rain lashed Dharwad and Gadag district. Silk shed damaged due to wind and tree fell on car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X