ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾದಿ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ ಮುಖ್ಯೋಪಾಧ್ಯಾಯ: ಶ್ರೀರಾಮ ಸೇನೆ ಪ್ರತಿಭಟನೆ

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಸೆ.27 : ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಬೋಧನಾ ಮಾರ್ಗಸೂಚಿ ನಿಯಮವನ್ನು ಉಲ್ಲಂಘಿಸಿ ಪ್ರವಾದಿ ಅವರ ಕುರಿತು ಪ್ರಬಂಧ ಏರ್ಪಡಿಸಿ ಹಿಂದು ಪರ ಸಂಘಟನೆಯ ಕೆಂಗಣ್ಣಿಗೆ ಗುರಿಯಾದ ಘಟನೆ ಗದಗದಲ್ಲಿ ನಡೆದಿದೆ.

ಗದಗ ತಾಲೂಕಿನ ನಾಗಾವಿ ಗ್ರಾಮದ ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಬಿಜಾಪುರ ಎಂಬುವವರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರವಾದಿ ಕುರಿತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಈ ವಿಷಯ ತಿಳಿದು ಶ್ರಿರಾಮ ಸೇನೆಯ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹಿನ್ನೆಲೆ ಶಾಲೆಗೆ ಬಂದು ವಿಚಾರಣೆ ನಡೆಸಿದ ಬಿಇಒ ವಿ.ವಿ. ನಡುವಿನಮನಿ ಮುಖ್ಯೋಪಾಧ್ಯಾಯರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಘಟನೆ ಸಂಬಂಧ ಇಲಾಖೆ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ.

ಗದಗ: ಹೈಟೆಕ್ ಮನೆಗಳ ಹಂಚಿಕೆಯಲ್ಲಿ ತಾರತಮ್ಯ, ಬಡವರ ಕೆಂಗಣ್ಣಿಗೆ ಗುರಿಯಾದ ಶಾಸಕರುಗದಗ: ಹೈಟೆಕ್ ಮನೆಗಳ ಹಂಚಿಕೆಯಲ್ಲಿ ತಾರತಮ್ಯ, ಬಡವರ ಕೆಂಗಣ್ಣಿಗೆ ಗುರಿಯಾದ ಶಾಸಕರು

ಪ್ರವಾದಿ ಕುರಿತು ಪ್ರಬಂಧ ಬರೆಯಲು ಕಾರಣವೇನು?

ಪ್ರವಾದಿ ಕುರಿತು ಪ್ರಬಂಧ ಬರೆಯಲು ಕಾರಣವೇನು?

ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಬಿಜಾಪುರ ಹೇಳುವ ಪ್ರಕಾರ ''ಗದಗ ಮೂಲದ ಜುನೇದ್ ಸಾಬ್ ಉಮಚಗಿ ಎಂಬುವರು ಶಾಲೆಗೆ ಆಗಮಿಸಿ ಪ್ರವಾದಿ ಕುರಿತು ಪುಸ್ತಕ ವಿತರಿಸಿದರು. ಪುಸ್ತಕಗಳನ್ನು ಒದಿ ಅವರ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿದರೆ, ಉತ್ತಮ ಪ್ರಬಂಧಕ್ಕೆ ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಪ್ರವಾದಿಯ ಕುರಿತು ಎರಡು ಪುಸ್ತಕ ನೀಡಿದ್ದ ಜುನೇದ್, ಉತ್ತಮ ಪ್ರಬಂಧಗಳಿಗೆ 5 ಸಾವಿರ ರೂಪಾಯಿ, 3 ಸಾವಿರ ರೂಪಾಯಿ, 2 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದಾರೆ. ಅವರ ಸೂಚನೆಯಂತೆ ಮುಖ್ಯೋಪಾಧ್ಯಾಯರು ಪ್ರಬಂಧ ಬರೆಯಲು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.

ಮುಖ್ಯೋಪಾಧ್ಯಾಯರ ವಿರುದ್ಧ ಶ್ರೀರಾಮ ಸೇನೆ ಕಿಡಿ

ಮುಖ್ಯೋಪಾಧ್ಯಾಯರ ವಿರುದ್ಧ ಶ್ರೀರಾಮ ಸೇನೆ ಕಿಡಿ

ಶಾಲೆಯಲ್ಲಿ ವಿತರಿಸಿದ್ದ ಪ್ರವಾದಿ ಕುರಿತ ಪುಸ್ತಕಗಳನ್ನು ಕೆಲವು ವಿದ್ಯಾರ್ಥಿಗಳ ಪೋಷಕರು ಮನೆಯಲ್ಲಿ ನೋಡಿದ್ದಾರೆ. ಈ ಬಗ್ಗೆ ಶ್ರೀರಾಮ ಸೇನೆ ಕಾರ್ಯಕರ್ತರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಶ್ರೀರಾಮ ಸೇನೆ ಕಾರ್ಯಕರ್ತರು ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಬಿಜಾಪುರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮತಾಂತರ ಉದ್ದೇಶದಿಂದಲೇ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಆರೋಪಿಸಿ, ಕೆಲಹೊತ್ತು ಶಾಲಾ ಆವರಣದಲ್ಲಿ ಧರಣಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಣ್ಣೀರಿಟ್ಟ ಮುಖ್ಯೋಪಾಧ್ಯಾಯರು ತಪ್ಪಾಯ್ತು ಕ್ಷಮಿಸಿ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಗೋಗರೆದ ಘಟನೆ ನಡೆದಿದೆ.

ಮುಖ್ಯೋಪಾಧ್ಯಾಯರಿಗೆ ತರಾಟೆ ತೆಗೆದುಕೊಂಡ ಬಿಇಒ

ಮುಖ್ಯೋಪಾಧ್ಯಾಯರಿಗೆ ತರಾಟೆ ತೆಗೆದುಕೊಂಡ ಬಿಇಒ

ವಿಷಯ ಬೆಳಕಿಗೆ ಬರುತ್ತಿದ್ದಂತೆ ಬಿಇಒ ನಡುವಿನಮನಿ ಮತ್ತು ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿಇಒ ಅವರು ಮುಖ್ಯೋಪಾಧ್ಯಾಯರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಇಲಾಖಾ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ.

ಮುಖ್ಯೋಪಾಧ್ಯಾಯರ ರಾಜೀನಾಮೆಗೆ ಶ್ರೀರಾಮ ಸೇನೆ ಒತ್ತಡ

ಮುಖ್ಯೋಪಾಧ್ಯಾಯರ ರಾಜೀನಾಮೆಗೆ ಶ್ರೀರಾಮ ಸೇನೆ ಒತ್ತಡ

ಪ್ರವಾದಿ ಕುರಿತ ಪುಸ್ತಕದ 14 ನೇ ಪುಟದಲ್ಲಿ ಮತಾಂತರದ ಬಗ್ಗೆ ವಿವರಿಸಲಾಗಿದೆ. ಮದಿನಾ ವಾತಾವರಣದ ಬಗ್ಗೆ ಹೇಳಲಾಗಿದೆ. ಮದಿನಾದಲ್ಲಿ ದೊಡ್ಡ ಸಂಖ್ಯೆಯ ಜನರು ಮುಸ್ಲಿಂ ಸಂಪ್ರದಾಯವನ್ನು ಒಪ್ಪಿಕೊಂಡರು ಎಂದು ನಮೂದಿಸಲಾಗಿದೆ. ಅಲ್ಲದೇ ಇಸ್ಲಾಂ ಧರ್ಮದ ಪರಿಚಯವನ್ನೂ ಪುಸ್ತಕದಲ್ಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.


ಇನ್ನು ಶ್ರೀರಾಮ ಸೇನೆ ಸದಸ್ಯರು ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಬಿಜಾಪುರ ಅವರ ರಾಜೀನಾಮೆಗೆ ಆಗ್ರಹಿಸಿದ್ದರು.

English summary
Gadag's Nagavi government school Headmaster organized essay competition on Prophet: Sri Ram Sena protest. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X