ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಟದಿಂದ ಸಾಲಮಾಡಿಕೊಂಡ ರೈತರು: ಸ್ವಾಮೀಜಿ ವಿವಾದಾತ್ಮಕ ಹೇಳಿಕೆ!

|
Google Oneindia Kannada News

Recommended Video

ಚಟದಿಂದ ಸಾಲಮಾಡಿಕೊಂಡ ರೈತರು: ಸ್ವಾಮೀಜಿ ವಿವಾದಾತ್ಮಕ ಹೇಳಿಕೆ! | Oneindia Kannada

ಮುಂಡರಗಿ, ಜೂನ್ 25: ರೈತರ ಸಾಲಮನ್ನಾ ಕುರಿತಂತೆ ಗದಗ ಜಿಲ್ಲೆಯ ಮುಂಡರಗಿ ಮಠದ ನಿಜಗುಣಾನಂದ ಸ್ವಾಮೀಜಿ ನೀಡಿದ ಹೇಳಿಕೆ ಇದೀಗ ವಿವಾದವನ್ನು ಹುಟ್ಟುಹಾಕಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ ಅವರು, 'ರೈತರ ವ್ಯಸನದಿಂದಾಗಿ ಸಾಲವಾಗ್ತಾ ಇದೆ.ಇಸ್ಪೀಟ್ ಆಡಿ ಸಾಲ ಮಾಡಿಕೊಳ್ಳುತ್ತಿದ್ದಾರೆ' ಎಂಬ ಹೇಳಿಕೆ ನೀಡಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ.

ರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆ

"ವ್ಯಸನದಿಂದ ಸಾಲ ಮಾಡಿಕೊಂಡವನು ನೀನು. ರೈತ, ನೀನು ಉರುಳು ಹಾಕ್ಕೊಂಡು ಸತ್ತರೆ ನಾನೇನು ಮಾಡ್ಲಿ?, ಎಂದು ದೇವರು ರೈತರನ್ನು ಪ್ರಶ್ನಿಸುತ್ತಾನೆ ಎಂದು ನಿಜಗುಣಾನಂದ ಸ್ವಾಮಿ ಕೇಳಿದ್ದಾರೆ.

Gadag: Controversial statement on farmers by nijagunananda swamiji

'ಎಲ್ಲ ಸಮಸ್ಯೆಗೂ ದೇವರು ಪರಿಹಾರ ಕೊಡೋಹಾಗಿದ್ರೆ, ರೈತರ ಸಾಲದ ಸಮಸ್ಯೆಗೂ ಪರಿಹಾರ ಕೊಡಲಿ. ಇಸ್ಪೀಟ್ ಆಟ, ವ್ಯಸನ, ದೊಡ್ಡಸ್ತಿಕೆಯಿಂದ ರೈತರು ಸಾಲ ಮಾಡಿಕೊಂಡಿದ್ದಾರೆ. ಹಿತಮಿತಾದ ಜೀವನ ಮಾಡುವುದಕ್ಕೆ ಆರಂಭಿಸಿದರೆ ಸಾಲ ಮಾಡಿಕೊಳ್ಳುವ ಪ್ರಮೇಯ ಬರುವುದಿಲ್ಲ' ಎಂದು ಸ್ವಾಮೀಜಿ ಹೇಳಿದ್ದು, ಇದೀಗ ವಿವಾದ ಸೃಷ್ಟಿಸಿದೆ.

ಬೆಳೆಹಾನಿ, ಮಳೆಯ ಅಭಾವ, ಬರಗಾಲ, ಒಮ್ಮೊಮ್ಮೆ ಅತಿವೃಷ್ಟಿ, ಬೆಳೆಗೆ ಕಾಣಿಸಿಕೊಳ್ಳುವ ರೋಗಗಳು, ಹೆಚ್ಚುತ್ತಿರುವ ಕೂಲಿ ಹಣ, ಕೂಲಿಕಾರರ ಸಮಸ್ಯೆ, ಸರಿಯಾದ ಬಿತ್ತನೆ ಬೀಜ, ಗೊಬ್ಬರ ಇಲ್ಲದಿರುವುದು ಇತ್ಯಾದಿ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ರೈತನಿಗೆ ಸ್ವಾಮೀಜಿಗಳ ಈ ಹೇಳಿಕೆ ತೀವ್ರ ಆಘಾತ ತಂದಿದೆ.

English summary
Nijagunanada Swamiji of Mundaragi Math in Gadag district makes a controversial statement on farmers of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X