ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ; ಪ್ರವಾಸಿಗರು ಸೋಮವಾರದಿಂದ ಮೃಗಾಲಯ ವೀಕ್ಷಿಸಬಹುದು

|
Google Oneindia Kannada News

ಗದಗ, ಜೂನ್ 07 : ಕರ್ನಾಟಕದಲ್ಲಿ ಸೋಮವಾರದಿಂದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಮೃಗಾಲಯ, ಜೈವಿಕ ಉದ್ಯಾನ, ಪಕ್ಷಿಧಾಮ, ರಾಷ್ಟ್ರೀಯ ಉದ್ಯಾನಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿವೆ.

ಕೊರೊನಾ ವೈರಸ್ ಸೋಂಕು ಹಡರದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಕರ್ನಾಟಕ ಸರ್ಕಾರದ ಆದೇಶದಂತೆ ಗದಗ ಮೃಗಾಲಯಕ್ಕೆ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿತ್ತು. ಜೂನ್ 8ರ ಸೋಮವಾರದಿಂದ ಮೃಗಾಲಯ ಪುನಃ ಬಾಗಿಲು ತೆರೆಯಲಿದೆ.

ಮುಂಬೈನಿಂದ ಗದಗ ತಲುಪಿದ ರೈಲು: 124 ಪ್ರಯಾಣಿಕರ ಮೇಲೆ ಡಿಸಿ, ಎಸ್‌ಪಿ ನಿಗಾಮುಂಬೈನಿಂದ ಗದಗ ತಲುಪಿದ ರೈಲು: 124 ಪ್ರಯಾಣಿಕರ ಮೇಲೆ ಡಿಸಿ, ಎಸ್‌ಪಿ ನಿಗಾ

ಸರ್ಕಾರದ ಮಾರ್ಗಸೂಚಿಗಳ ಅನ್ವಯ ಮೃಗಾಲಯದಲ್ಲಿ ಜನರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಮವಾರದಿಂದ ಮೃಗಾಲಯಕ್ಕೆ ಜನರು ಭೇಟಿ ನೀಡಬಹುದು ಎಂದು ಗದಗ ಜಿಲ್ಲಾಡಳಿತದ ಆದೇಶದಲ್ಲಿ ತಿಳಿಸಲಾಗಿದೆ.

ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ

Gadag

ಮೃಗಾಲಯಕ್ಕೆ ಆಗಮಿಸುವ ಜನರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್‌ ಧರಿಸಿರಬೇಕು. ಕೈಗಳ ಸ್ವಚ್ಛತೆಗೆ ಸ್ಯಾನಿಟೈಸರ್ ಬಳಸಬೇಕು. ಸಾಮಾಜಿಕ ಅಂತರವನ್ನು ಕಾಪಾಡಬೇಕು ಎಂದು ಸೂಚನೆ ನೀಡಲಾಗಿದೆ.

 ಜೂನ್ 8ಕ್ಕೆ ತೆರೆಯಲು ಸಜ್ಜಾಗುತ್ತಿದೆ ಮೈಸೂರು ಮೃಗಾಲಯ ಜೂನ್ 8ಕ್ಕೆ ತೆರೆಯಲು ಸಜ್ಜಾಗುತ್ತಿದೆ ಮೈಸೂರು ಮೃಗಾಲಯ

"ಪ್ರವಾಸಿಗರ ಸುರಕ್ಷತೆಗಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಜನರು ಸಹಕಾರ ನೀಡಬೇಕು" ಎಂದು ಗದಗ ಮೃಗಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಹೇಳಿದ್ದಾರೆ.

English summary
After lock down Zoo at Binkadakatti in Gadag district of Karnataka to open for public from June 8, 2020. Mask mandatory to visit zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X