ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗದಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಉಚಿತ ಆಟೋ ಸೇವೆ

|
Google Oneindia Kannada News

ಗದಗ, ಜೂನ್ 24: ನಾಳೆಯಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗಲಿದೆ. ಹೀಗಾಗಿ, ಗದಗದಲ್ಲಿ ಶಾಲಾ ಮಕ್ಕಳಿಗೆ ಉಚಿತ ಆಟೋ ಪ್ರಯಾಣದ ವ್ಯವಸ್ಠೆ ಮಾಡಲಾಗಿದೆ.

ಯಂಗ್‌ ಇಂಡಿಯಾ ಪರಿವಾರದಿಂದ ಪರೀಕ್ಷೆ ಬರೆಯಲು ಹೋಗುವ ಮಕ್ಕಳಿಗೆ ಉಪಯೋಗ ಆಗಲಿ ಎನ್ನುವ ದೃಷ್ಟಯಿಂದ ಈ ಸೇವೆಯನ್ನು ನೀಡಲಾಗುತ್ತಿದೆ. ಅವಳಿ ನಗರಗಳಾದ ಗದಗ, ಬೆಟಗೇರಿನಲ್ಲಿ ಆಟೋಗಳು ಲಭ್ಯವಿರಲಿಲ್ಲ.

10ನೇ ತರಗತಿ ಪರೀಕ್ಷೆಗೆ 2 ದಿನ ಬಾಕಿ; ಅಂತಿಮ ಕ್ಷಣದ ಸಿದ್ಧತೆ10ನೇ ತರಗತಿ ಪರೀಕ್ಷೆಗೆ 2 ದಿನ ಬಾಕಿ; ಅಂತಿಮ ಕ್ಷಣದ ಸಿದ್ಧತೆ

ಗದಗ ನಗರದ ಮಹಾತ್ಮ ಗಾಂಧಿ ಸರ್ಕಲ್‌, ಹಳೆ ಜಿಲ್ಲಾಧಿಕಾರಿ ಕಚೇರಿ, ಮುಳಗುಂದ ನಾಕಾ, ಹಾತಲಗೇರಿ ನಾಕಾ, ಬೆಟಗೇರಿ ಬಸ್‌ ನಿಲ್ದಾಣಗಳಿಂದ ವಿದ್ಯಾರ್ಥಿಗಳು ಉಚಿತ ಆಟೋದಲ್ಲಿ ತಮ್ಮ ತಮ್ಮ ಪರೀಕ್ಷಾ ಕೇಂದ್ರಕ್ಕೆ ಹೋಗಬಹುದಾಗಿದೆ.

Free Auto Service For SSLC Students In Gadaga

ಯಂಗ್‌ ಇಂಡಿಯಾ ಪರಿವಾರದಿಂದ ಸೇವೆ ಸಲ್ಲಿಸುವ ಆಟೋಗಳು ಬಿಳಿ ಬಣ್ಣದ ಧ್ವಜ ಕಟ್ಟಿಕೊಂಡು ಬರುತ್ತದೆ. ಇದರ ಮೂಲಕ ವಿದ್ಯಾರ್ಥಿಗಳ ಅದನ್ನು ಸುಲಭವಾಗಿ ಗುರುತಿಸಬಹುದು ಎಂದು ಯಂಗ್‌ ಇಂಡಿಯಾ ಪರಿವಾರ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ ತಿಳಿಸಿದ್ದಾರೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ

ನೂರಕ್ಕೂ ಹೆಚ್ಚು ಆಟೋಗಳು ವಿದ್ಯಾರ್ಥಿಗಳಿಗಾಗಿ ನಗರದ ವಿವಿಧ ಕಡೆಯಿಂದ ಉಚಿತ ಸೇವೆ ನೀಡಲಿವೆ. ಕೊರೊನಾ ವೈರಸ್‌ ಸೋಂಕು ಇರುವ ಕಾರಣ ಅಗತ್ಯ ಸುರಕ್ಷತ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲಾಗುತ್ತಿದೆ.

English summary
Young India parivara giving free auto service for SSLC students for exam in Gadaga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X